Advertisement

ಕಾರಾಗೃಹದೊಳಗೆ ನಳನಳಿಸುತ್ತಿದೆ ಕೈ ತೋಟ; ನರ್ಸರಿ

11:56 AM Apr 21, 2022 | Team Udayavani |

ಮಹಾನಗರ: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಕೈಯಿಂದಲೇ ಸಿದ್ಧಗೊಂಡಿರುವ ತರಕಾರಿ ತೋಟ ಈಗ ಫ‌ಲ ನೀಡಲಾರಂಭಿಸಿದ್ದು, ಅಡಿಕೆ ಸಸಿಗಳನ್ನೊಳಗೊಂಡ ನರ್ಸರಿ ಬೆಳೆದು ನಿಂತಿದೆ.

Advertisement

ಮೂರು ತಿಂಗಳ ಹಿಂದೆ ಸುಮಾರು 20 ಮಂದಿ ವಿಚಾರಣಾಧೀನ ಕೈದಿಗ ಳಿಗೆ ತೋಟಗಾರಿಕೆ ಬಗ್ಗೆ ತರಬೇತಿ ನೀಡ ಲಾಗಿತ್ತು. ಇದೀಗ ಅವರು ಬೆಳೆಸಿದ ತರಕಾರಿ ತೋಟ ಫ‌ಲ ನೀಡುತ್ತಿದೆ. ಸಾವಿರಾರು ಹೂವಿನ ಗಿಡಗಳು ಕೂಡ ಸೊಂಪಾಗಿ ಬೆಳೆದಿವೆ.

ಕಾರಾಗೃಹದಲ್ಲಿಯೇ ಬಳಕೆ

ಮೂಲಂಗಿ, ಬದನೆಕಾಯಿ, ಮೆಣಸಿನ ಕಾಯಿ ಗಿಡಗಳು, ಬಸಳೆ ಬಳ್ಳಿ ಜತೆಗೆ ಅಡಿಕೆ ಸಸಿಗಳನ್ನು ಕೂಡ ಬೆಳೆಯಲಾಗಿದೆ.

Advertisement

ಹೂವಿನ ಗಿಡಗಳು ನಳನಳಿಸುತ್ತಿವೆ. ಈಗಾಗಲೇ ಕೈತೋಟದಲ್ಲಿ ಸಿಕ್ಕಿರುವ ತರಕಾರಿಯನ್ನು ಕಾರಾಗೃಹದಲ್ಲಿ ಅಡುಗೆಗೆ ಬಳಸಲಾಗಿದೆ. ಅಡಕೆ ಸಸಿಗಳನ್ನು ಅಗತ್ಯವುಳ್ಳವರಿಗೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ನರ್ಸರಿ ತರಬೇತಿಗೆ 25ರಿಂದ 45 ವರ್ಷ ವಯೋಮಾನದ ಸುಮಾರು 20 ವಿಚಾರಣಾಧೀನ ಕೈದಿಗಳು ಆಸಕ್ತಿ ತೋರಿಸಿದ್ದು ಅವರಿಗೆ ಜಗನ್ನಾಥ ಮತ್ತು ಶ್ರವಣ್‌ ಶೆಣೈ ತರಬೇತಿ ನೀಡಿದ್ದಾರೆ.

ಕೆಲವು ವಿಚಾರಣಾಧೀನ ಕೈದಿಗಳಿಗೆ ಕರಕುಶಲ ವಸ್ತುಗಳ ತಯಾರಿ ಕೆಗೂ ತರಬೇತಿ ನೀಡಲಾಗಿದ್ದು ಅವರು ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಾರೆ.ಕೇಂದ್ರ ಕಾರಾ ಗೃಹಗಳಲ್ಲಿ ಕೈದಿಗಳಿಗೆ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಿ ಆದಾಯಗಳಿಸಿ ಬದುಕಿನ ಬಗ್ಗೆ ಭರವಸೆ ಬೆಳೆಸಿಕೊಳ್ಳಲು ಅವಕಾಶ ಈಗಾಗಲೇ ನೀಡಲಾಗಿದೆ. ಇದೇ ಮಾದರಿಯಲ್ಲಿ ಜಿಲ್ಲಾ ಕಾರಾಗೃಹದಲ್ಲಿಯೂ ಕೌಶಲಾಭಿವೃದ್ಧಿ ಸಹಿತವಾದ ವೃತ್ತಿ ತರಬೇತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next