Advertisement

ಸೇವಾ ಮನೋಭಾವ ರೋಟರಿಯ ನಿಜ ಶಕ್ತಿ : ರೊಟೇರಿಯನ್ ಅಭಿನಂದನ್ ಶೆಟ್ಟಿ

09:36 AM Feb 10, 2019 | Karthik A |

ಉಡುಪಿ: ಪರ್ಕಳ ರೋಟರಿಗೆ ಜಿಲ್ಲಾ ಗವರ್ನರ್ ರೊಟೇರಿಯನ್ ಪಿ.ಹೆಚ್.ಎಫ್. ಅಭಿನಂದನ್ ಎ. ಶೆಟ್ಟಿ ಅವರು ಇತ್ತೀಚೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಮತ್ತು ಪರ್ಕಳ ರೋಟರಿ ನಡೆಸುತ್ತಿರುವ ಕೆಲಸ ಕಾರ್ಯಗಳ ಕುರಿತಾಗಿ ವಿಶೇಷ ಮೆಚ್ಚುಗೆಯನ್ನು ಸೂಚಿಸಿದರು.

Advertisement

ಪರ್ಕಳ ರೋಟರಿ ಪ್ರಾಯೋಜಿತ ವಿವಿಧ ಸೇವಾಕಾರ್ಯಗಳ ಅರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡ ಅಭಿನಂದನ್ ಶೆಟ್ಟಿ ಅವರು ಮೊದಲಿಗೆ ಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳು ಹಾಗೂ ಆಶ್ರಮದ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಲ್ಲಿಂದ ಬಳಿಕ ಕುಕ್ಕೆಹಳ್ಳಿ ಪ್ರೌಢಶಾಲೆಗೆ ಭೇಟಿ ನೀಡಿ ಇಂಟರಾಕ್ಟ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಎರಡು ಕಡೆಗಳಲ್ಲಿ ಕ್ಲಬ್ ವತಿಯಿಂದ ಅಳವಡಿಸಲಾಗಿದ್ದ ಇಂಟರ್ ಲಾಕ್ ವ್ಯವಸ್ಥೆಯನ್ನು ಇದೇ ಸಂದರ್ಭದಲ್ಲಿ ಗವರರ್ನರ್ ಅವರು ಅನಾವರಣಗೊಳಿಸಿದರು.


ಸಾಯಂಕಾಲ ನಡೆದ ಸಭಾ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸರ್ಜನ್ ಡಾ. ಅಣ್ಣಪ್ಪ ಕುಡ್ವಾ ಮತ್ತು ಪ್ಯಾರಾ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವ ರಾಮದಾಸ್ ಜತ್ತನ್ ಅವರನ್ನು ಪರ್ಕಳ ರೋಟರಿ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು. ಸಹಾಯಕ ಗವರ್ನರ್ ಅವರು ಕ್ಲಬ್ ಬುಲೆಟಿನ್ ‘ರೋಟರಿ ಧ್ವನಿ’ಯನ್ನು ಬಿಡುಗಡೆಗೊಳಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ರೂಬಿಕ್ ಕ್ಯೂಬ್ಸ್ ಡಬಲ್ ಸೈಡ್ ಮೊಸಾಯಿಕ್ ಆರ್ಟ್ ನಲ್ಲಿ ಗಿನ್ನೆಸ್ ದಾಖಲೆಯನ್ನು ಬರೆದಿರುವ ಪೃಥ್ವೀಶ್ ಭಟ್ ಅವರಿಂದ ವೇದಿಕೆಯಲ್ಲಿ ವಿಶೇಷ ಪ್ರತಿಭಾ ಪ್ರದರ್ಶನ ನಡೆಯಿತು.


ಬಳಿಕ ಮಾತನಾಡಿದ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಅವರು ಪರ್ಕಳ ರೋಟರಿಯ ಕಾರ್ಯ ಚಟುವಟಿಕೆಗಳನ್ನು ವಿಶೇಷವಾಗಿ ಶ್ಲಾಘಿಸಿದರು. ಸಮಾಜ ಸೇವಾ ಭಾವದಿಂದ ರೊಟೇರಿಯನ್ ಗಳು ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.


ಜಯಲಕ್ಷ್ಮೀ ಶೆಟ್ಟಿಗಾರ್ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಪರ್ಕಳ ರೋಟರಿ ಅಧ್ಯಕ್ಷ ಗುರುಪ್ರಸಾದ್ ಕಾಮತ್ ಅವರು ಸ್ವಾಗತಿಸಿದರು. ರಾಮಕೃಷ್ಣ ಪೂಂಜಾ ಅವರು ಧನ್ಯವಾದ ಸಮರ್ಪಿಸಿದರು. ಕೆ. ಪ್ರಭಾಕರ ಶೆಟ್ಟಿ ಮತ್ತು ಶಂಕರ ಆಚಾರ್ ಅವರು ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು.




Advertisement
Advertisement

Udayavani is now on Telegram. Click here to join our channel and stay updated with the latest news.

Next