Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಚುನಾವಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಈ ವರೆಗೆ ಅವರ ಎಲ್ಲಾ ನಿರ್ಧಾರಗಳು ಹಾಗೂ ನಡವಳಿಕೆಗಳ ಬಗ್ಗೆ ಸಮಗ್ರ ತನಿಖೆಯಾಗ ಬೇಕೆಂದು ಆಗ್ರಹಿಸಿದರು.
Related Articles
Advertisement
ಪ್ರಿಯಾಂಕ ಮೇರಿ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಡೀಸಿ ನಿವಾಸದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಭೇಟಿಯಾಗುವ ಔಚಿತ್ಯ ವೇನಿತ್ತು? ಚುನಾವಣಾ ಆಯೋಗದ ಗಮನಕ್ಕೂ ತರದೇ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲಾಧಿಕಾರಿ ನಿವಾಸದಲ್ಲಿ 2 ದಿನ ಇರಿಸಿಕೊಳ್ಳುವ ಅಗತ್ಯವೇನಿತ್ತು? ಈ ಎಲ್ಲಾ ಅಂಶಗಳನ್ನೂ ರಾಜ್ಯ ಮುಖ್ಯ ಚುನಾವಣಾ ಧಿಕಾರಿಯವರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಲಿಖೀತ ದೂರು ನೀಡುವುದಾಗಿ ರೇವಣ್ಣ ಅವರು ಹೇಳಿದರು.
ದಾಖಲೆ ನಾಶ ಸಾಧ್ಯತೆ: ಮತಗಳ ಎಣಿಕೆಯವರೆಗೂ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೇ ಇದ್ದರೆ ನ್ಯಾಯಸಮ್ಮತವಾಗಿ ಮತಗಳ ಎಣಿಕೆ ನಡೆಯುವ ನಂಬಿಕೆ ನಮಗಿಲ್ಲ. ಅವರು ದಾಖಲೆಗಳನ್ನು ನಾಶ ಪಡಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದೂ ರೇವಣ್ಣ ಅವರು ಒತ್ತಾಯಿಸಿದರು.
ಚುನಾವಣಾ ಸಿಬ್ಬಂದಿಗೆ ಡೀಸಿ ತೊಂದರೆ: ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಜಿಲ್ಲಾ ಚುನಾವಣಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕೆಲವು ಚುನಾವಣೆಯ ಸಿಬ್ಬಂದಿಗೆ ತೊಂದರೆ ಕೊಟ್ಟಿ ದ್ದಾರೆ. ಆದರೆ ಚುನಾವಣೆ ಕೆಲಸಕ್ಕೆ ನಿಯೋಜನೆ ಯಾಗಿದ್ದ ಒಬ್ಬ ಆರ್‌ಟಿಒ ಕಚೇರಿ ಅಧಿಕಾರಿಯನ್ನು ತಮ್ಮ ಕಚೇರಿಗೆ ಕರೆಸಿ ವಿನಾ ಕಾರಣ ತರಾಟೆಗೆ ತೆಗೆದು ಕೊಂಡಿದ್ದರಿಂದ ಗಾಬರಿಗೊಂಡ ಅಧಿಕಾರಿ ಹೃದಯಾ ಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಹಾಸನದಲ್ಲಿ ಚಿಕಿತ್ಸೆ ಪಡೆದು ಆನಂತರ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದರು. ಜಿಲ್ಲಾ ಜೆಡಿಎಸ್ ಮುಖಂಡ ಪಟೇಲ್ ಶಿವರಾಂ, ರಾಜೇ ಗೌಡ, ವಕೀಲರಾದ ಮಳಲಿ ಜಯರಾಂ, ಶ್ರೀಧರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡುವ ಕುತಂತ್ರ:
ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನ ಸ್ವಗ್ರಾಮ ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿ ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡುವ ಕುತಂತ್ರ ನಡೆದಿದೆ ಎಂದು ಎಚ್.ಡಿ. ರೇವಣ್ಣ ಅವರು ಜಿಲ್ಲಾ ಚುನಾವಣಾಧಿಕಾರಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಚುನಾವಣಾ ದಿನಾಂಕ ಘೋಷಣೆಯಾದ ನಂತರ ವರ್ಗಾವಣೆಯಾಗಿದ್ದರು. ಅವರ ಕುಮ್ಮಕ್ಕಿ ನಿಂದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ದುರುದ್ದೇಶದಿಂದ ಜೆಡಿಎಸ್‌ನಿಂದ ಜೆಡಿಎಸ್‌ಗೆ ಕಪ್ಪು ಚುಕ್ಕೆ ಇಡುವ ಕುತಂತ್ರ ನಡೆಸುತ್ತಿದ್ದಾರೆ. ಚುನಾವಣೆ ಏ.18 ರಂದು ನಡೆದ ನಂತರ ಜಿಲ್ಲೆ ಯಲ್ಲಿ ಶಾಂತಿಯುತ ಹಾಗೂ ಮುಕ್ತ ಚುನಾವಣೆ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯವರೇ ಧನ್ಯವಾದ ಹೇಳಿದ್ದಾರೆ.
ಆದರೂ ಏ.24 ರಂದು ಪಡುವಲಹಿಪ್ಪೆಯ ಬಿಜೆಪಿ ಪೋಲಿಂಗ್ ಏಜೆಂಟನಿಂದ ದೂರು ಸ್ವೀಕರಿಸಿರುವ ಜಿಲ್ಲಾ ಚುನಾವಣಾಧಿಕಾರಿಯವರ ಮೇಲೆ ಯಾರ ಒತ್ತಡವಿತ್ತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಪಡುವಲಹಿಪ್ಪೆಯ ಮತಗಟ್ಟೆಯಲ್ಲಿ ಅಕ್ರಮ ಮತದಾನ ನಡೆದಿದ್ದರೆ ಬಿಜೆಪಿ ಪೋಲಿಂಗ್ ಏಜೆಂಟ್ ಅಂದೇ ಏಕೆ ದೂರು ನೀಡಲಿಲ್ಲ? ಮತದಾನ ಮುಗಿದು ಚುನಾವಣೆ ಸಂಬಂಧದ 17(ಎ)ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಭದ್ರತಾ ಕೊಠಡಿಯೊಳಗಿರಿಸಲಾಗಿದೆ. ಚುನಾವಣೆ ನಡೆದ 6 ದಿನಗಳ ನಂತರ ಚುನಾವಣಾ ವೀಕ್ಷಕರ ಗಮನಕ್ಕೂ ತರದೆ, ಆ ಮತಗಟ್ಟೆಯ ಜೆಡಿಎಸ್ ಏಜೆಂಟರಿಂದ ಮಾಹಿತಿ ಪಡೆಯದೇ, ಏಕ ಪಕ್ಷೀ ಯವಾಗಿ ತನಿಖೆ ನಡೆಸಿ ಅಕ್ರಮ ಮತದಾನ ನಡೆದಿದೆ ಎಂದು ಅಧಿಕಾರಿಗಳನ್ನು ಸ್ಪಸೆಂಡ್ ಮಾಡುವುದು, ಸಹಾಯಕ ಚುನಾವಣಾ ಧಿಕಾರಿಗಳ ಮೇಲೆ ಒತ್ತಡ ಹೇರಿ ನಿರ್ದಿಷ್ಟ ಮಾದರಿಯಲ್ಲಿಯೇ ದೂರು ದಾಖಲು ಮಾಡುವಂತೆ ನಿರ್ದೇಶನ ನೀಡುವುದಾರೆ ಜಿಲ್ಲಾ ಚುನಾವಣಾಧಿ ಕಾರಿಯವರು ಯಾರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಪ್ರಶ್ನಿಸಿದರು.
ಪಡುವಲಹಿಪ್ಪೆ ಮತಗಟ್ಟೆಯ ಬಿಜೆಪಿ ಏಜೆಂಟ್ ಪಡುವಲಹಿಪ್ಪೆಯ ಮತಗಟ್ಟೆಯ ಮತದಾರನೇ ಅಲ್ಲ. ಆತ ಮಾರಗೋಡನಹಳ್ಳಿಯವರು. ಆತ ಹೊಳೆನರಸೀಪುರ ತಾಲೂಕು ಬಿಜೆಪಿ ಅಧ್ಯಕ್ಷ. ಜಿಲ್ಲಾ ಚುನಾವಣಾಧಿಕಾರಿಯವರಿಗೆ ದೂರು ನೀಡಿರುವ ಇನ್ನೊಬ್ಬ ಮಾಯಣ್ಣ ಎಂಬಾತ ಹೊಳೆನರಸೀಪುರ ಪಟ್ಟಣದ ನಿವಾಸಿ. ಅವ ರಿಬ್ಬರಿಗೂ ಪಡುವಲಹಿಪ್ಪೆ ಮತಗಟ್ಟೆಯ ಮತ ದಾರರ ಪರಿಚಯವೇ ಇಲ್ಲ. ಅವರು ಹೇಗೆ ಸ್ಥಳೀಯ ಮತದಾರರನ್ನು ಗುರ್ತಿಸುತ್ತಾರೆ? ಆ ಮತಗಟ್ಟೆಯಲ್ಲಿ ಇನ್ನೂ 200 ಜನರು ಮತ ಚಲಾವಣೆಯನ್ನೇ ಮಾಡಿಲ್ಲ. ಅಕ್ರಮವಾಗಿ ಮತ ಚಲಾವಣೆ ಮಾಡುವುದಿದ್ದರೆ 200 ಮತಗಳು ಏಕೆ ಉಳಿಯುತ್ತಿದ್ದವು ಎಂದು ರೇವಣ್ಣ ಅವರು ಪ್ರಶ್ನಿಸಿದರು.