Advertisement

ಸಮರ್ಪಕ ನೀರು ಪೂರೈಕೆಗೆ ಜಿಲ್ಲಾಧಿಕಾರಿ ಸೂಚನೆ

08:27 PM Mar 25, 2021 | Team Udayavani |

ಗದಗ : ಬೇಸಿಗೆ ಆರಂಭವಾಗಿದ್ದು, ಅವಳಿ ನಗರದ ಪ್ರತಿ ವಾರ್ಡ್‌ಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ಅಧಿಕಾರಿಗಳಿಗೆ ಸೂಚಿಸಿದರು. ಗದಗ-ಬೆಟಗೇರಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ನೀರು ಪೂರೈಕೆಗೆ ಸಂಬಂಧಿಸಿದ ಸಿಬ್ಬಂದಿ ವಿವರ, ದೂರವಾಣಿ ಸಂಖ್ಯೆ ಹಾಗೂ ನೀರು ಪೂರೈಕೆಗೆ ನಿಗದಿಪಡಿಸಿದ ಅವಧಿಯನ್ನು ತಯಾರಿಸಿ ಅದಕ್ಕೆ ಅನುಗುಣವಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರ ಗಮನಕ್ಕೆ ತರಬೇಕು. ನೀರು ಸರಬರಾಜು ಆಗುವ ಸಂದರ್ಭದಲ್ಲಿ ಪೈಪ್‌ಲೈನ್‌ಗಳಲ್ಲಿ ಸೋರಿಕೆ ಕಂಡುಬಂದಲ್ಲಿ ಕೂಡಲೇ ದುರಸ್ತಿಗೊಳಿಸಲು ಅಗತ್ಯ ಸಿಬ್ಬಂದಿ ನಿಯೋಜಿಸಿಕೊಳ್ಳುವಂತೆ ತಿಳಿಸಿದರು. ನಗರಸಭೆ ವ್ಯಾಪ್ತಿಯ ಅಮೃತ ನಗರ ಯೋಜನೆಯಡಿ ನಗರ ಸಾರಿಗೆ ಘಟಕದಡಿ ಮುಳಗುಂದ ನಾಕಾ ವೃತ್ತ, ಬನ್ನಿ ಮಹಾಕಾಳಿ ವೃತ್ತ, ಕಾರ್ಯಪ್ಪ ವೃತ್ತ ಹಾಗೂ ಭೂಮರಡ್ಡಿ ವೃತ್ತಗಳನ್ನು ಅಭಿವೃದ್ಧಿಪಡಿಸಲು ಕೂಡಲೇ ಕ್ರಮವಹಿಸಬೇಕು.

ಎಸ್‌.ಎಂ. ಕೃಷ್ಣ ನಗರ, ಹಾಕಿ ಸ್ಟೇಡಿಯಂ, ಗಾಂಧೀ ವೃತ್ತ, ಬನ್ನಿಕಟ್ಟಿ ವೃತ್ತ, ಗಂಗಿಮಡಿ, ಜಿಲ್ಲಾಡಳಿತ ಭವನ, ಜಲಮಂಡಳಿ ಕಚೇರಿ ಹತ್ತಿರ ಮುಳಗುಂದ ರಸ್ತೆ, ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಬಸ್‌ ತಂಗುದಾಣಗಳನ್ನು ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು ಎಂದು ಹೇಳಿದರು.

ಯುಜಿಡಿ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಪೂರ್ಣಗೊಂಡ ಝೋನ್‌ಗಳಲ್ಲಿ ಸಾರ್ವಜನಿಕರಿಗೆ ಮನೆ ಮನೆಗೆ ಸಂಪರ್ಕ ಪಡೆಯಲು ಜಾಗೃತಿ ಮೂಡಿಸಬೇಕು. ಕೆಯುಡಬ್ಲೂಎಸ್‌ ಹಾಗೂ ನಗರಸಭೆ ನೈರ್ಮಲ್ಯ ಸಿಬ್ಬಂದಿ ಪ್ರತಿದಿನ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ತಿಳಿಸಿ ಯೋಜನೆ ಸದುಪಯೋಗ ಪಡೆಯಬೇಕು ಎಂದು ಸೂಚಿಸಿದ ಅವರು, ವಿವಿಧ ಇಲಾಖೆಗಳಿಂದ ಗದಗ ಆಂತರಿಕ ಹಾಗೂ ಬಾಹ್ಯ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ದೇಶನ ನೀಡಿದರು. ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಬಲೀಕರಣಕ್ಕಾಗಿ ಆಸ್ತಿ ತೆರಿಗೆ, ನೀರಿನ ಕರ, ವಾಣಿಜ್ಯ ತೆರಿಗೆ, ಮಳಿಗಗಳಿಂದ ಆದಾಯವನ್ನು ಕ್ರೋಢೀಕರಿಸಿಕೊಂಡು ಸ್ಥಳೀಯ ಸಂಸ್ಥೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು.

ಕೋವಿಡ್‌-19 ಎರಡನೇ ಅಲೇ ಸ್ವತ್ಛತಾ ಕಾರ್ಯ ಹಾಗೂ ಸಾರ್ವಜನಿಕರಿಗೆ ಸೌಲಭ್ಯ ನೀಡುತ್ತಿರುವ ಎಲ್ಲ ಸಿಬ್ಬಂದಿಗೆ ಸಾಂಕ್ರಾಮಿಕ ರೋಗದ ಸುರಕ್ಷತೆಗೆ ಅಗತ್ಯ ಸುರಕ್ಷಾ ಸಾಮಗ್ರಿ ನಿಯಮಿತವಾಗಿ ಒದಗಿಸುವಂತೆ ತಿಳಿಸಿದರು. ನಗರಾಭಿವೃದ್ಧಿ ಕೋಶ ಪ್ರಭಾರ ಯೋಜನಾ ನಿರ್ದೇಶಕ ಅನಿಲಕುಮಾರ ಮುದ್ದಾ, ಪೌರಾಯುಕ್ತ ರಮೇಶ ಜಾದವ, ಯೋಜನೆ ನಿರ್ದೇಶಕರ ಕಾರ್ಯಾಲಯ ಅಭಿಯಂತರರು, ಕೆಯುಐಡಿಎಫ್‌ಸಿ ಹಾಗೂ ಕೆಯುಡಬ್ಲೂಎಸ್‌ ಅಧಿಕಾರಿಗಳು, ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next