Advertisement

ಮಳೆ ಹಾನಿ ಪರಿಶೀಲಿಸಿದ ಜಿಲ್ಲಾಧಿಕಾರಿ

06:42 PM Sep 22, 2020 | Suhan S |

ಬೀದರ (ಹುಲಸೂರು): ಕಳೆದೊಂದು ವಾರದಿಂದ ಮತ್ತು ಸೆ.20ರ ರಾತ್ರಿ ಬಿರುಸಿನ ಮಳೆ ಸುರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಸೋಮವಾರ ಭಾಲ್ಕಿ ಮತ್ತು ಹುಲಸೂರ ತಾಲೂಕುಗಳಿಗೆ ದಿಢೀರ್‌ ಭೇಟಿ ನೀಡಿ, ತೀವ್ರ ಮಳೆಯಿಂದಾದ ಹಾನಿ ಪರಿಶೀಲಿಸಿದರು.

Advertisement

ಭಾಲ್ಕಿ- ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಇಂಚೂರ ಬ್ರಿಜ್‌ ಒಡೆದಿರುವುದನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಸೇತುವೆಗೆ ಹಾನಿಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅನುಕೂಲವಾಗಲು ನಿರ್ಮಿಸಿದ ಪರ್ಯಾಯ ಮಾರ್ಗದಲ್ಲಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಜಿಲ್ಲಾಧಿ ಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರಸ್ತೆಯಲ್ಲಿನ ಜಮಖಂಡಿ ಸೇತುವೆ ಹಾಳಾಗಿರುವುದನ್ನು ಕೂಡ ಜಿಲ್ಲಾಧಿಕಾರಿ ವೀಕ್ಷಿಸಿದರು.

ಬೆಳೆ ಹಾನಿ ಪರಿಶೀಲನೆ: ಜಿಲ್ಲಾಧಿಕಾರಿಗಳು ಹುಲಸೂರ ತಾಲೂಕಿನಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಹುಲಸೂರ ವಾರ್ಡ್‌-1ಗೆ ಭೇಟಿ ನೀಡಿದರು. ವಿಪರೀತ ಮಳೆ ಬಂದು ವಾರ್ಡ್ ನಲ್ಲಿ ಹಾನಿಯಾಗಿರುವುದನ್ನು ವರದಿ ಮಾಡಿ ಪರಿಹಾರೋಪಾಯ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತೀವ್ರ ಮಳೆಯಿಂದಾಗಿ ಹುಲಸೂರ, ಭಾಲ್ಕಿ ತಾಲೂಕುಗಳ ವ್ಯಾಪ್ತಿಯ ಜಮೀನುಗಳಲ್ಲಿ ಉಂಟಾದ ಬೆಳೆಹಾನಿ ವೀಕ್ಷಿಸಿದರು. ವಿಪರೀತ ಮಳೆಯಿಂದಾಗಿ ಜಮೀನೊಂದರಲ್ಲಿನ ತೊಗರಿ ಬೆಳೆ ಕೊಚ್ಚಿ ಹೋಗಿರುವುದರ ಬಗ್ಗೆ ಜಿಲ್ಲಾ ಧಿಕಾರಿಗಳು ಮಾಹಿತಿ ಪಡೆದರು. ಬೆಳೆಹಾನಿ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ಸಿಗಬೇಕು. ಇದಕ್ಕೆ ಸಂಬಂಧಿಸಿದ ಕಾರ್ಯ ತೀವ್ರ ಗತಿಯಲ್ಲಿ ನಡೆಯಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಕಟ್ಟಡದ ಸ್ಥಳ ಪರಿವೀಕ್ಷಣೆ: ಹುಲಸೂರ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕೆಲವು ಪ್ರಸ್ತಾವನೆಗಳು ಬಂದಿರುವುದಾಗಿ ಇದೇ ವೇಳೆ ಅಧಿಕಾರಿಗಳು ಜಿಲ್ಲಾಧಿ ಕಾರಿಗಳಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಕಾರಿಗಳು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣದ ಸ್ಥಳ ಪರಿವೀಕ್ಷಣೆ ನಡೆಸಿದರು. ಈ ವೇಳೆ ಹುಲಸೂರ ತಾಪಂ ಅಧ್ಯಕ್ಷ ಸಿದ್ರಾಮ, ಬಸವಕಲ್ಯಾಣ ತಹಶೀಲ್ದಾರ್‌ ಸಾವಿತ್ರಿ ಸಲಗರ, ಬಸವಕಲ್ಯಾಣ ತಾಪಂ ಇಒ ಬೀರಸಿಂಗ್‌, ಜಿ.ಪಂ ಸದಸ್ಯ ಸುಧೀರ ಕಾಡಾದಿ, ಪ್ರಮುಖರಾದ ಅನೀಲ ಭೂಸಾರೆ, ಲತಾ ಹಾರಕೂಡೆ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next