Advertisement

ಡೆಂಗ್ಯೂ ಬಾಧಿತ ಜಡ್ಕಲ್‌ಗೆ ಜಿಲ್ಲಾಧಿಕಾರಿ ಭೇಟಿ

01:27 AM Apr 27, 2022 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು.

Advertisement

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ 25 ಹಾಸಿಗೆಯ ಪ್ರತ್ಯೇಕ ಡೆಂಗ್ಯೂ ವಾರ್ಡ್‌ ಮೀಸಲಿಡುವ ಮೂಲಕ ಜನರಲ್ಲಿರುವ ಆತಂಕವನ್ನು ನಿವಾರಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಹೇಳಿದರು.

ಕೊಲ್ಲೂರು ದೇಗುಲದ ಸಭಾಭವವನದಲ್ಲಿ ಮಂಗಳವಾರ ವಿವಿಧ ಇಲಾಖೆಯ ಅ ಕಾರಿಗಳ ಸಮ್ಮುಖದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಜಡ್ಕಲ್‌, ಮುದೂರು ಪರಿಸರದಲ್ಲಿ ವಿಶೇಷ ಗಮನ ಹರಿಸಲಾಗುವುದು. ಎ. 28, 29 ಹಾಗೂ 30ರಂದು ಇಲಾಖೆಯ ಅಧಿಕಾರಿಗಳು ಗ್ರಾ.ಪಂ. ಸಹಿತ ಆಶಾ ಕಾರ್ಯಕರ್ತೆಯರೊಂದಿಗೆ ಮನೆಗಳಿಗೆ ತೆರಳಿ ಪರೀಕ್ಷೆ ನಡೆಸಿ ಧೈರ್ಯ ತುಂಬಲಿದ್ದಾರೆ. ರಬ್ಬರ್‌, ಅಡಿಕೆ ಇನ್ನಿತರ ತೋàಟಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗು ವುದು. ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಜಿ.ಪಂ. ಸಿಇಒ ಡಾ| ನವೀನ ಭಟ್‌ ಮಾತನಾಡಿ, ಗ್ರಾಮಸ್ಥರ ಆತಂಕ ನಿವಾರಣೆಗೆ ಡೆಂಗ್ಯೂ ಪ್ರದೇಶಗಳಲ್ಲಿ ವೈದ್ಯಾ ಧಿಕಾರಿಗಳ ತಂಡವನ್ನು ಹೆಚ್ಚಿನ ಪರಿಶೀಲನೆಗೆ ನೇಮಿಸಲಾಗುವುದು. ತುರ್ತು ಬಳಕೆಗೆ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುವುದು. ಗ್ರಾಮಸ್ಥರು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.

Advertisement

ಉಪ ಕಮಿಷನರ್‌ ರಾಜು, ಬೈಂದೂರು ತಹಶೀಲ್ದಾರ್‌ ಶೋಭಾಲಕ್ಷ್ಮೀ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಶಿವರಾಮ ಕೃಷ್ಣ ಭಟ್‌, ದೇಗುಲದ ಕಾರ್ಯನಿರ್ವಹಣಾಧಿ ಕಾರಿ ಮಹೇಶ, ಸಮಿತಿ ಸದಸ್ಯರಾದ ಜಯಾನಂದ ಹೋಬಳಿ ದಾರ, ಸಂಧ್ಯಾ ರಮೇಶ, ರತ್ನ ಆರ್‌. ಕುಂದರ್‌, ಡಿಎಚ್‌ಒ ಡಾ| ನಾಗಭೂಷಣ ಉಡುಪ, ಡಾ| ಪ್ರೇಮಾನಂದ, ಡಾ| ಪ್ರಶಾಂತ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ| ಶೈಲೇಶ, ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾ ಧ್ಯಕ್ಷ ಲಕ್ಷ್ಮಣ ಶೆಟಿx, ಕೊಲ್ಲೂರು ಪಿಡಿಒ ರುಕ್ಕ‌ನ ಗೌಡ, ದೇಗು ಲದ ಎಂಜಿನಿಯರ್‌ ಪ್ರದೀಪ, ತಾ.ಪಂ. ಇಒ, ವಿವಿಧ ಇಲಾಖೆಯ ಅ ಧಿಕಾರಿಗಳು ಅಭಿಪ್ರಾಯ ಮಂಡಿಸಿದರು.

ಉದಯವಾಣಿ ವರದಿಗೆ ಸ್ಪಂದನ
ಒಂದು ತಿಂಗಳಿನಿಂದ ಜಡ್ಕಲ್‌, ಮುದೂರು ಪರಿಸರದಲ್ಲಿ ಬಾಧಿಸಿರುವ ಡೆಂಗ್ಯೂ ಜ್ವರ ಬಾಧೆಯ ಬಗ್ಗೆ ಉದಯವಾಣಿ ಸುದಿನದಲ್ಲಿ ಸತತವಾಗಿ ವರದಿ ಪ್ರಕಟಿಸಿ ಇಲಾಖೆ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next