Advertisement

ಮಹಿಳಾ ಉದ್ಯಮಿಗಳಿಗೆ ಸಹಕಾರಕ್ಕೆ ಜಿಲ್ಲಾಡಳಿತ ಸಿದ್ಧ: ಜಿಲ್ಲಾಧಿಕಾರಿ

11:34 PM Sep 21, 2019 | Sriram |

ಉಡುಪಿ: ಜಿಲ್ಲೆಯ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ಹಾಗೂ ಅಗತ್ಯ ಸಹಕಾರ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

Advertisement

ಮಹಿಳಾ ಉದ್ಯಮಿಗಳ ಪವರ್‌ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ “ಪವರ್‌ ಸಂತೆ’ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬೇಕು.

ಪವರ್‌ ಸಂಸ್ಥೆಯ ಮಹಿಳಾ ಉದ್ಯಮಿಗಳು ಇತರೆ ಜಿಲ್ಲೆಯವರಿಗೆ ಮಾದರಿಯಾಗಿದ್ದಾರೆ. ಈ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಗಳಿಸುವಂತಾಗಲಿ ಎಂದರು.

ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶ ಹಾಗೂ ಮಾರಾಟಕ್ಕೆ ಪವರ್‌ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಹಾರ ಉತ್ಪನ್ನ, ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತು ಆಲಂಕಾರಿಕ ವಸ್ತು, ಸೌಂದರ್ಯವರ್ಧಕ ಸಾಧನ, ಆಭರಣ, ಚಿತ್ರಕಲೆ, ಸೇರಿದಂತೆ ಸುಮಾರು 42 ಮಳಿಗೆಗಳು ಸಂತೆಯಲ್ಲಿ ಭಾಗವಹಿಸಿದ್ದವು. ಡಾ| ಅಪೇಕ್ಷಾ ಅವರ ಆರ್ಗಾನಿಕ್‌ ಸೋಪ್‌, ಸಮೃದ್ಧಿ ಮಹಿಳಾ ಸಂಘದ ಸದಸ್ಯೆ ಲಲಿತಾ ಅವರ ಗೃಹೋಪಯೋಗಿ ಆಲಂಕಾರಿಕ ವಸ್ತುಗಳು ಗಮನಸೆಳೆದವು.

Advertisement

ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಪವರ್‌ ಸಂತೆ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಮುಂಡೇವು ಎಲೆಯಿಂದ ಮೂಡೆ ಕೊಟ್ಟೆಯನ್ನು ಜಿಲ್ಲಾಧಿಕಾರಿಯವರು ಕಟ್ಟಿದ್ದು ವಿಶೇಷ ವಾಗಿತ್ತು. ಪ್ರತಿಯೊಂದು ಮಳಿಗೆಗಳಿಗೆ ಭೇಟಿ ನೀಡಿ ಮಹಿಳಾ ಉದ್ಯಮಿಗಳಿಗೆ ಶುಭ ಹಾರೈಸಿದರು.

ಪೇತ್ರಿ ಅನ್ನಪೂರ್ಣ ನರ್ಸರಿ ಪ್ರಸನ್ನ ಪ್ರಸಾದ್‌ ಭಟ್‌, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ವಿಜಯ, ಪವರ್‌ ಸಂಸ್ಥೆ ಕೋಶಾಧಿಕಾರಿ ಲಕ್ಷ್ಮೀ ರಾವ್‌, ಪವರ್‌ ಸಂಸ್ಥೆ ಅಧ್ಯಕ್ಷೆ ಶುೃತಿ ಜಿ. ಶೆಣೈ ಉಪಸ್ಥಿತರಿದ್ದರು.ಕಾರ್ಯದರ್ಶಿ ಸುಪ್ರಿಯಾ ಆರ್‌. ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯಕ್ರಮ ಸಂಯೋಜಕಿ ಸೋನಾ ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next