Advertisement

ದಕ್ಷತೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಸಲಹೆ

02:54 PM Apr 22, 2019 | pallavi |

ಗದಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.23ರಂದು ನಡೆಯುವ ಮತದಾನ ಕುರಿತಂತೆ ರೋಣ ವಿಧಾನಸಭೆ ಕ್ಷೇತ್ರದ ಮಸ್ಟರಿಂಗ್‌ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ರವಿವಾರ ಭೇಟಿ ನೀಡಿದರು.

Advertisement

ಲೋಕಸಭೆ ಮತದಾನ ದಿನದಂದು ಸೆಕ್ಟರ್‌ ಅಧಿಕಾರಿಗಳು ಹಾಗೂ ಕಾರ್ಯ ನಿರ್ವಹಣೆ ಮಹತ್ವದ್ದಾಗಿದ್ದು, ಜವಾಬ್ದಾರಿಯಿಂದ ಕಾರ್ಯನಿರ್ವಸಹಿಸಬೇಕು. ಚುನಾವಣೆ ಆಯೋಗದ ನಿರ್ದೇಶನದಂತೆ ತಮಗೆ ವಹಿಸಿದ ಎಲ್ಲ ಕಾರ್ಯ ದಕ್ಷತೆಯಿಂದ ನಿರ್ವಹಿಸಲು ಮತ್ತು ಸಕಾಲಕ್ಕೆ ಮತದಾನದ ವರದಿ ಸಂಗ್ರಹಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.

ಮಸ್ಟರಿಂಗ್‌ ಕೇಂದ್ರದಲ್ಲಿ ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಹಾಜರಾತಿ, ವಿದ್ಯುನ್ಮಾನ ಯಂತ್ರ ಹಾಗೂ ಮತದಾನ ಸಾಮಗ್ರಿ ಸುರಕ್ಷತೆಯೊಂದಿಗೆ ಸೂಚಿತ ವಾಹನದಲ್ಲಿ ಮತಗಟ್ಟೆ ಅಧಿಕಾರಿಗಳು ತೆರಳುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಅಗತ್ಯ ಸುರಕ್ಷತಾ ಸಿಬ್ಬಂದಿ ಆಗಮಿಸಿದ ಕುರಿತು ಮತದಾನ ಪೂರ್ವಭಾವಿ ಸಿದ್ಧತೆ ಅಗತ್ಯದ ಹೆಚ್ಚುವರಿ ಸಿಬ್ಬಂದಿ ಕುರಿತು ವರದಿ ನೀಡಬೇಕು. ಸೂಕ್ಷ್ಮ ವೀಕ್ಷಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಪ್ರತಿ ಎರಡು ಗಂಟೆಗೊಮ್ಮೆ ಮತದಾನ ಪ್ರಮಾಣ ಕುರಿತು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮಾಹಿತಿ ನೀಡಬೇಕು. ಮತದಾನ ನಂತರ ಪ್ರತಿ ಮತಗಟ್ಟೆ ಮತಯಂತ್ರಗಳ ಸೀಲ್ ಮಾಡಿದ್ದನ್ನು ಖಚಿತಪಡಿಸಿಕೊಂಡು ಡಿ. ಮಸ್ಟರಿಂಗ್‌ ಕ್ಷೇತ್ರಕ್ಕೆ ಸುರಕ್ಷಿತವಾಗಿ ತಲುಪಿಸಲು ಕ್ರಮ ಜರುಗಿಸಬೇಕು. ಮತದಾನದ ಎಲ್ಲ ಲಕೋಟೆಗಳ ಸರಿ ನಿರ್ವಹಣೆ ಕುರಿತು ಖಚಿತಪಡಿಸಿಕೊಳ್ಳಬೇಕು. ಪ್ರಜಾಪ್ರತಿನಿಧಿ ಕಾಯ್ದೆಯಡಿ ಸಂಬಂಧಿತ ಸೆಕ್ಟರ್‌ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ಜವಾಬ್ದಾರಿ ದಕ್ಷತೆಯಿಂದ ನಿರ್ವಹಿಸುವಂತೆ ತಿಳಿಸಿದರು.

ಹಾವೇರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೋಣ ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಿ. ಪ್ರಾಣೇಶರಾವ್‌, ರೋಣ ತಹಶೀಲ್ದಾರ್‌ ಶರಣಮ್ಮ ಕಾರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next