Advertisement

ಜಿಲ್ಲಾಸ್ಪತ್ರೆಯ ರಕ್ತವಿದಳನ ಘಟಕ ಉನ್ನತೀಕರಣ

02:10 PM Jun 25, 2020 | Suhan S |

ಹಾವೇರಿ: ರಕ್ತವಿದಳನ ಘಟಕ ಉನ್ನತೀಕರಣಗೊಂಡಿರುವುದರಿಂದ ಬಡವರಿಗೆ, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಸಾರ್ವಜನಿಕರ ಅವಶ್ಯಕತೆಗನುಸಾರವಾಗಿ ರಕ್ತವಿಧಳನ ಘಟಕ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಗೆ ಬೇಕಾಗುವ ಉನ್ನತ ವೈದ್ಯಕೀಯ ಅವಶ್ಯಕತೆಗಳನ್ನು ಒದಗಿಸಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

Advertisement

ನಗರದ ಜಿಲ್ಲಾಸ್ಪತ್ರೆಯ ರಕ್ತವಿದಳನ ಘಟಕ ಹೆಚ್ಚುವರಿ ಸೌಲಭ್ಯಗಳ ಆಧುನೀಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಸ್ಪತ್ರೆ ರಕ್ತವಿಧಳನ ಘಟಕವನ್ನು ಐದು ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಉಪಕರಣಗಳನ್ನು ಜೋಡಣೆ ಮಾಡಿ ಉನ್ನತೀಕರಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಆಧುನಿಕ ಯಂತ್ರೋ ಪಕರಣಗಳನ್ನು ಒದಗಿಸಲಾಗಿದೆ. ಡೋನರ್‌ ಕೋಚ್‌, ಬ್ಲಿಡ್‌ ಕಲೆಕ್ಷನ್‌ ಮಾನಿಟರ್‌, ಮ್ಯಾನುವಲ್‌ ಪ್ಲಾಸ್ಮಾ ಎಕ್ಷಪ್ರೇಸರ್‌, ಜೆಲ್‌ ಇನ್‌ಕುಬೇಟರ್‌, ಸೆಂಟ್ರಿಪೂಜ್‌, ಬ್ಲಿಡ್‌ ಬ್ಯಾಗ್‌ ಟ್ಯೂಬ್‌ ಟ್ಯೂಬ್‌ ಸೀಲರ್‌, ಡೊಮೆಸ್ಟಿಕ್‌ ರೇಪ್ರಿಜಿರೇಟರ್‌ ರಕ್ತ ವಿಧಳನಾ ಘಟಕದಲ್ಲಿ ಅಳವಡಿಸಿ ಆಧುನಿಕ ಉಪಕರಣಗಳೊಂದಿಗೆ ಸುಸಜ್ಜಿತ ಘಟಕವಾಗಿ ಉನ್ನತೀಕರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಾನೂನು ಕಾಲೇಜ್‌ಗೆ ಹಾಗೂ ಜೆಟಿಡಿಸಿ ಕಾಲೇಜ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏಕಲವ್ಯ ಮಾದರಿಯ ಶಾಲೆ ಹಾಗೂ ಎಸ್ಟಿ ಮೊರಾರ್ಜಿ ವಸತಿ ಶಾಲೆ ಮಂಜೂರಾಗಿದೆ. ಬಸಾಪುರದಲ್ಲಿ 60 ಎಕರೆ ಜಾಗದಲ್ಲಿ ಸೈನಿಕ ತರಬೇತಿಯ ವಸತಿ ಶಾಲೆ ಮತ್ತು ಜಿಲ್ಲೆಯಲ್ಲಿ ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪಿಸಲು ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.

ಮೆಡಿಕಲ್‌ ಕಾಲೇಜು ಇನ್ನು ಎರಡು ತಿಂಗಳೊಳಗೆ ಭೂಮಿಪೂಜೆ ನೆರವೇರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾ ಗುವುದು. ಭೂಮಿಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜು ಜೊತೆಗೆ ನೆಲೋಗಲ್‌ ಗುಡ್ಡದಲ್ಲಿ ಆಯುಷ್ಮಾನ್‌ ಆಸ್ಪತ್ರೆಗೆ 9 ಎಕರೆ ಜಮೀನು ಮಂಜೂರಾಗಿದೆ. 20 ಕೋಟಿ ರೂ. ಹಣ ಸಹ ಮಂಜೂರಾಗಿದೆ ಒಂದು ವಾರದಲ್ಲಿ ಮಂಜೂರಾತಿ ದಾಖಲೆಗಳು ಸಿದ್ಧವಾಗಲಿವೆ. ಶೀಘ್ರದಲ್ಲಿಯೇ ಅದರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ವನಮಹೋತ್ಸವ: ಇದಕ್ಕೂ ಮುನ್ನ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.

Advertisement

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪಿ.ಆರ್‌. ಹಾವನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಮನಿ, ಡಾ| ಸುರೇಶ ಪೂಜಾರ ಮತ್ತಿತರರು ಸಸಿ ನೆಟ್ಟು ನಿರೂಣಿಸಿದರು. ರಕ್ತ ವಿಧಳನಾ ಘಟಕದ ವೈದ್ಯಾಧಿಕಾರಿ ಡಾ| ಬಸವರಾಜ ತಳವಾರ, ಸಿಬ್ಬಂದಿ ಬಸವರಾಜ ಕಮತದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next