ಕಲಬುರಗಿ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮನೆ-ಮನೆ ಪ್ರಚಾರಕ್ಕೆ 5ಕ್ಕಿಂತ ಹೆಚ್ಚಿನ ಜನ ಹೋಗುವಂತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ವಿ.ವಿ. ಜ್ಯೋತ್ಸ್ನಾ ಹೇಳಿದರು.
ಈ ಎಂಎಲ್‌ಸಿ ಚುನಾವಣೆಗೂ ಇತರ ಚುನಾವಣೆಗಳಂತೆ ನೀತಿ ಸಂಹಿತೆ ಇವೆಯಾದರೂ ಕೆಲ ವಿನಾಯಿತಿಗಳಿವೆ.ಖರ್ಚು ವೆಚ್ಚಕ್ಕೆ ಮಿತಿ ಇಲ್ಲ. ಆದರೆ ಪ್ರಚಾರಕ್ಕೆ ತೆರಳುವರು ತಮ್ಮ ಬಳಿ 50 ಸಾವಿರ ರೂ.ಕ್ಕಿಂತಹೆಚ್ಚಿನ ಹಣ ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಹೆಚ್ಚು ಹಣ ಇಟ್ಟುಕೊಂಡಿದಲ್ಲಿ ಅದಕ್ಕೆ ಸೂಕ್ತ ದಾಖಲಾತಿಗಳನ್ನು ಒದಗಿಸಬೇಕು ಎಂದು ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಂತಿ ರೀತಿಯ ಚುನಾವಣೆಗೆ ಸಹಕರಿಸಬೇಕು ಎಂದು ವಿ.ವಿ.ಜ್ಯೋತ್ಸಾŒ ಮನವಿ ಮಾಡಿ, ಪ್ರಸ್ತುತ ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಪ್ರಚಾರದ ಸಂದರ್ಭದಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂದು ವಿವರಣೆ ನೀಡಿದರು.
16-01-2020ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 7,329 ಮತದಾರರಿದ್ದು,ಇದರಲ್ಲಿ 4,333 ಪುರುಷರು ಮತ್ತು 2,996 ಮಹಿಳೆಯರು ಇದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಅರ್ಹರಿರುವ ಮತದಾರರು ಅಕ್ಟೋಬರ್ 8ರ ಮಧ್ಯಾಹ್ನ 3ಗಂಟೆ ವರೆಗೆ ನಮೂನೆ 19ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಮತದಾನಕ್ಕೆ 41 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಕಾರ್ಯಕ್ಕಾಗಿ 41 ಜನ ಪಿ.ಆರ್. ಓ, 41 ಏ.ಪಿ.ಆರ್.ಓ. ಹಾಗೂ 82 ಜನ ಪೊಲಿಂಗ್ ಸಿಬ್ಬಂದಿ ಸೇರಿದಂತೆ ಒಟ್ಟಾರೆ164 ಜನರನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರ ಇರಲಿದೆ ಎಂದರು. ಚುನಾವಣಾ ಅಕ್ರಮ ತಡೆಯಲು
ಮತ್ತು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು 13 ಎಫ್.ಎಸ್.ಟಿ. ತಂಡ, 13 ವಿ.ಎಸ್.ಟಿ. ತಂಡ, 13 ವಿ.ವಿ.ಟಿ ತಂಡ, 17 ಜನ ಸೆಕ್ಷನ್ ಅ ಕಾರಿಗಳು ಹಾಗೂ 8 ದೂರು ಕೇಂದ್ರ ಸೇರಿದಂತೆ ಒಟ್ಟಾರೆ 64 ತಂಡಗಳನ್ನು ರಚಿಸಲಾಗಿದೆ ಎಂದು ವಿವರಣೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ| ಸಿಮಿ ಮರಿಯಮ್ ಜಾರ್ಜ್, ಡಿ.ಸಿ.ಪಿ. ಕಿಶೋರ ಬಾಬು, ಅಪರ ಜಿಲ್ಲಾ ಧಿಕಾರಿ ಡಾ| ಶಂಕರ ವಣಿಕ್ಯಾಳ ಇದ್ದರು.
ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಧಿ ಸಿದಂತೆ ಸಾರ್ವಜನಿಕರ ದೂರು ಮತ್ತು ಕುಂದು-ಕೊರತೆಗಳಿಗಾಗಿ ಸಹಾಯವಾಣಿ 08472-278602 ಸ್ಥಾಪಿಸಲಾಗಿದೆ. ಕೋವಿಡ್-19 ಸೋಂಕಿತರಿಗೆ, ಹೋಂ ಕ್ವಾರಂಟೈನ್‌ದಲ್ಲಿದ್ದವರಿಗೆ ಹಾಗೂ ವಿಕಲಚೇತನರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುತ್ತಿದೆ.
– ವಿ.ವಿ. ಜ್ಯೋತ್ಸ್ನಾ, ಜಿಲ್ಲಾಧಿಕಾರಿ