Advertisement

ಕಾರಂಜಾದಿಂದ ನೀರು ಬಿಡುವುದೇ ಜಿಲ್ಲಾಡಳಿತ?

11:52 AM Feb 21, 2019 | |

ಔರಾದ: ಕಾರಂಜಾ ಜಲಾಶಯದಿಂದ ತಾಲೂಕಿಗೆ ನೀರು ಸರಬರಾಜು ಮಾಡುವ ವಿಷಯದಲ್ಲಿ ಜಿಲ್ಲಾಡಳಿತ ಮೌನ ವಹಿಸಿದೆ. ಕಳೆದೆರಡು ವರ್ಷಗಳಿಂದ ಭೀಕರ ಬರದಿಂದ ನರಳುತ್ತಿರುವ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರೆ, ರೈತರು ಜಾನುವಾರುಗಳ ಮೇವಿಗಾಗಿ ಅಕ್ಷರಶಃ ಕಂಗಾಲಾಗಿದ್ದಾರೆ. ಆದರೆ ಸಮಸ್ಯೆಗೆ ಸ್ಪಂದಿಸಬೇಕಾದ ಜಿಲ್ಲಾಡಳಿತ ಸುಮ್ಮನೆ ಕುಳಿತಿದೆ.

Advertisement

ಕಾರಂಜಾ ಜಲಾಶಯದಿಂದ ಔರಾದ ತಾಲೂಕಿನ ಸಂಗಮ ಗ್ರಾಮದಿಂದ ಕಂದಗೂಳ ಗ್ರಾಮದವರೆಗೆ ನೀರು ಬಿಡುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ಕೌಠಾ ಹಾಗೂ ಕಂದಗೂಳ ಗ್ರಾಮದಲ್ಲಿನ ಸೇತುವೆ ಮೇಲೆ ಎರಡು ಕಡೆಗೂ ಏಕಕಾಲಕ್ಕೆ ರಸ್ತೆ ತಡೆ ಮಾಡಿದ್ದರು. ಅಲ್ಲದೇ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಿದ್ದರು. ಆಗ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ನೀರು ಬಿಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಇಂದಿಗೂ ಹನಿ ನೀರು ಬಂದಿಲ್ಲ.

ತಾರತಮ್ಯ: ಕಾರಂಜಾ ಜಲಾಶಯದಿಂದ ಜಿಲ್ಲಾಡಳಿತ ಜಿಲ್ಲೆಯ ಭಾಲ್ಕಿ ತಾಲೂಕಿನವರೆಗೆ ಎರಡು ಬಾರಿ ನೀರು ಬಿಟ್ಟಿದೆ. ಅದರೆ ಗಡಿ ತಾಲೂಕಿಗೆ ಇಲ್ಲಿಯವರೆಗೂ ಒಮ್ಮೆಯೂ ನೀರು ಬಿಡದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಜಲಾಶಯದಿಂದ ನೀರು ಬಿಟ್ಟರೆ ನದಿ ಅಕ್ಕಪಕ್ಕದ ಗ್ರಾಮಸ್ಥರಿಗೆ ನೀರಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಅಲ್ಲದೇ ಔರಾದ ಪಟ್ಟಣಕ್ಕೂ ನೀರಿನ ಸಮಸ್ಯೆಯಿಂದ ಅಲ್ಪ ಮಟ್ಟಿನ ಪರಿಹಾರ ಸಿಗಬಹುದು ಎನ್ನುತ್ತಾರೆ ಕ್ಷೇತ್ರದ ಜನರು.
 
ಶಾಸಕರ ಮನವಿಗಿಲ್ಲ ಬೆಲೆ: ಶಾಸಕ ಪ್ರಭು ಚವ್ಹಾಣ ತಾಲೂಕಿನ ಜನರ ಸ್ಥಿತಿ ನೋಡಿ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡುವಂತೆ ಜಿಲ್ಲಾಧಿಕಾರಿಗೆ ಎರಡು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಹಾಗೂ ತಾಲೂಕು ದಂಡಾ ಧಿಕಾರಿಗೆ ಒಂದು ಬಾರಿ ಲಿಖೀತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ

ಕಾರಂಜಾ ಜಲಾಶಯದಿಂದ ತಾಲೂಕಿಗೆ ನೀರು ಬಿಡುವಂತೆ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಿಗೂ ಪತ್ರ ಬರೆಯಲಾಗಿದೆ. ಎರಡು ದಿನಗಳಲ್ಲಿ ಕಾರಂಜಾ ಜಲಾಶಯದಿಂದ ಔರಾದ ತಾಲೂಕಿಗೆ ನೀರು ಬಂದರೆ ಸರಿ. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡುತ್ತೇನೆ.
 ಪ್ರಭು ಚವ್ಹಾಣ, ಔರಾದ ಶಾಸಕ

ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಸರ್ಕಾರ- ಲ್ಲಾಡಳಿತಕ್ಕೆ ಇಲ್ಲವಾಗಿದೆ. ಕಾರಂಜಾ ಜಲಾಶಯದಿಂದ ನೀರು ಬಿಟ್ಟರೆ ತಾಲೂಕಿನ ಶೇ.40 ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ಹಿಂದೆ ಕೌಠಾ ಹಾಗೂ ಕಂದಗೂಳ ಗ್ರಾಮದ ಸೇತುವೆ ಮೇಲೆ ಪ್ರತಿಭಟನೆ ನಡೆಸಿದಾಗ ಜಿಲ್ಲಾ ಧಿಕಾರಿ ನೀರು ಬಿಡುವ ಭರವಸೆ ನೀಡಿದ್ದರು. ಆದರೆ ಮೂರು ತಿಂಗಳಾದ್ರೂ ಹನಿ ನೀರು ಬಂದಿಲ್ಲ.
 ಶ್ರೀಮಂತ ಬಿರಾದರ, ರೈತ ಸಂಘದ ತಾಲೂಕು ಅಧ್ಯಕ್ಷ

Advertisement

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next