Advertisement
ಉಡುಪಿಯ ಒಬ್ಬರು ಮತ್ತು ದ.ಕ. ಜಿಲ್ಲೆಯ 8 ಮಂದಿ 1986ರಲ್ಲಿ ದ.ಕ. ಜಿಲ್ಲಾಡಳಿತದ ಸೇವೆಗೆ ದಿನಗೂಲಿ ನೌಕರರರಾಗಿ ನೇಮಕಗೊಂಡಿದ್ದರು. ಇಂತಹ ನೌಕರರನ್ನು ಖಾಯಂಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿ 12 ವರ್ಷಗಳೇ ಆಗಿದ್ದರೂ ಕೂಡ ಜಿಲ್ಲಾಡಳಿತ ಆದೇಶ ಪಾಲನೆ ಮಾಡುತ್ತಿಲ್ಲ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿತ್ತು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಈ ಮೇಲಿನ ನಾಲ್ಕು ಷರತ್ತುಗಳನ್ನು ಪೂರೈಸಿರುವ 248 ತಾತ್ಕಾಲಿಕ ನೌಕರರನ್ನು ಕಳೆದ 12 ವರ್ಷಗಳಲ್ಲಿ ಖಾಯಂಗೊಳಿಸಲಾಗಿದೆ. ಆದರೆ ಈ 9 ಮಂದಿ ನೌಕರರ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದರು. ಜಿಲ್ಲಾಡಳಿತಕ್ಕೆ ಮನವಿ
ಕಳೆದ 12 ವರ್ಷಗಳಲ್ಲಿ ಜಿಲ್ಲಾಡಳಿತ, ಮೇಲಧಿಕಾರಿಗಳಿಗೆ ಈ ನೌಕರರು ಅರ್ಜಿ, ಮನವಿಗಳನ್ನು ನೀಡಿದರೂ ಅದರಿಂದ ಪ್ರಯೋಜನ ವಾಗಲಿಲ್ಲ. 2014ರಲ್ಲಿ ಈ ನೌಕರರು ಪ್ರತಿಷ್ಠಾನ ವನ್ನು ಸಂಪರ್ಕಿಸಿದರು. ಪ್ರತಿಷ್ಠಾನವು ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನ್ಯಾಯಾಲಯದ ಆದೇಶ, 248 ನೌಕರರ ಖಾಯಂ ಗೊಳಿಸಿದ ದಾಖಲೆ ನೀಡಿತು. ಅನಂತರ ಬಂದ ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಲಾಯಿತು. ಆದರೂ ಪ್ರಯೋಜನವಾಗಿಲ್ಲ. 9 ಮಂದಿ ನೌಕರರ ಪೈಕಿ ಓರ್ವರು ಈಗಾಗಲೇ ನಿವೃತ್ತಿಯಾಗಿದ್ದಾರೆ. ಇನ್ನು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇದೀಗ ಪ್ರತಿಷ್ಠಾನವು ಇವರ ಪರವಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾವೆ ಹೂಡಲು ಸಿದ್ಧತೆ ನಡೆಸಿದೆ. ನ್ಯಾಯವಂಚಿತರಿಗೆ ಪೂರ್ಣಪ್ರಮಾಣದ ವೇತನ ಹಾಗೂ ನಿವೃತ್ತಿ ಸೌಲಭ್ಯಗಳು ಸಿಗುವ ವರೆಗೂ ಹೋರಾಟ ನಡೆಯಲಿದೆ. ಇಂತಹ ಪ್ರಕರಣಗಳಲ್ಲಿ ಇನ್ನೂ ನ್ಯಾಯ ಸಿಗದೆ ಇರುವ ಬೇರೆ ಜಿಲ್ಲೆಯವರು ಕೂಡ ಪ್ರತಿಷ್ಠಾನವನ್ನು ಕೂಡಲೇ ಸಂಪರ್ಕಿಸಬಹುದಾಗಿದೆ ಎಂದು ಡಾ| ಶ್ಯಾನುಭಾಗ್ ತಿಳಿಸಿದರು. ಖಾಯಂ ಆಗದೆ ತೊಂದರೆಗೀಡಾಗಿರುವ ದಿನಗೂಲಿ ನೌಕರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Related Articles
ಉಡುಪಿಯ ಸರಕಾರಿ ಹೆಣ್ಣುಮಕ್ಕಳ ತರಬೇತಿ ಶಾಲೆಯಲ್ಲಿ 42 ವರ್ಷಗಳ ಕಾಲ ಕೇವಲ 15 ರೂ. ಮೂಲವೇತನದಲ್ಲಿ ದುಡಿದ ಅಕ್ಕು ಮತ್ತು ಲೀಲಾ ಅವರ ಪ್ರಕರಣದಲ್ಲಿ ಪ್ರತಿಷ್ಠಾನ 16 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿತ್ತು. ಈ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಇಬ್ಬರಿಗೂ ತಲಾ 27 ಲ.ರೂ. ಬಾಕಿ ವೇತನ ಹಾಗೂ ನಿವೃತ್ತಿ ಸೌಲಭ್ಯ ನೀಡುವಂತೆ ಆದೇಶ ನೀಡಿತ್ತು. ಸುಮಾರು 3 ದಶಕಗಳ ಕಾಲ ದಿನಗೂಲಿ ನೌಕರರಾಗಿ ದುಡಿದಿರುವ 9 ಮಂದಿಯ ಪ್ರಕರಣ ಕೂಡ ಅಕ್ಕು ಮತ್ತು ಲೀಲಾ ಅವರ ಪ್ರಕರಣದಂತೆಯೇ ಇದೆ. ಇದೇ ಆಧಾರದಲ್ಲಿ ಅವರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಡಾ| ಶ್ಯಾನುಭಾಗ್ ತಿಳಿಸಿದರು.
Advertisement