Advertisement
ಈ ಸಂದರ್ಭ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ವೆಂಕಪ್ಪ ಗೌಡರು ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರಲ್ಲದೆ, ಸಮಾನ ಮನಸ್ಕ ಸಂಘಟನೆಗಳಿಂದ ಡಿ. 12ರಂದು ಬಂಟ್ವಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ‘ಸಾಮರಸ್ಯನಡಿಗೆ ಸೌಹಾರ್ದ ಕಡೆಗೆ’ ಪಾಲ್ಗೊಳ್ಳುವಂತೆಯೂ ಮನವಿ ಮಾಡಿದರು.
ಮನವಿಗೆ ಪ್ರತಿಕ್ರಿಯಿಸಿದ ಡಾ| ಕೆ.ವಿ. ಚಿದಾನಂದ ಅವರು, ಹಿಂದೆ ನ.ಪಂ. ಕಸದ ರಾಶಿ ತಮ್ಮ ಮನೆಯಂಗಳಕ್ಕೆ ಬಿದ್ದು ತೊಂದರೆ ಆಗುತ್ತಿದ್ದ ಕುರಿತು ತಿಳಿಸಿದ್ದರೂ ಪಂಚಾಯತ್ ಆಡಳಿತ ಸ್ಪಂದಿಸಿರಲಿಲ್ಲ. ನ.ಪಂ. ನಡೆದುಕೊಂಡ ರೀತಿ ಬೇಸರ ತರಿಸಿದೆ ಎಂದು ವಿವರಿಸಿದರು. ಸಾಮರಸ್ಯವೇ ನಮ್ಮ ಧ್ಯೇಯ. ಸಾಮರಸ್ಯ ಕಾರ್ಯಕ್ರಮಕ್ಕೆ ನಮ್ಮ ಪೂರ್ಣ ಸಹಕಾರವಿದೆ ಎಂದರು. ನ.ಪಂ. ಸದಸ್ಯ ಕೆ.ಎಂ. ಮುಸ್ತಫಾ ಮಾತನಾಡಿ, ಡಾ| ಚಿದಾನಂದ ಅವರು ಸಾಮರಸ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು. ಈ ಸಂದರ್ಭ ಕೆಪಿಸಿಸಿ ಸದಸ್ಯ ಡಾ| ರಘು, ಕೆವಿಜಿ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಡಾ| ಲೀಲಾಧರ್, ಸಿಬಂದಿ ರಜತ್ ಅಡ್ಯಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.
Related Articles
ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ. ವೆಂಕಪ್ಪ ಗೌಡ ಅವರು, ಗಿಡ ನಾಶಗೊಳಿಸಿರುವುದರ ಹಿಂದೆ ನ.ಪಂ. ಆಡಳಿತದ ಕೈವಾಡವಿದೆ. ಬಿಜೆಪಿ ನ.ಪಂ. ಆಡಳಿತದ ಆವಶ್ಯಕ ಸಂದರ್ಭ ಡಾ| ಚಿದಾನಂದ ಅವರನ್ನು ಬಳಸಿಕೊಂಡು ಈಗ ಅವಮಾನಿಸುತ್ತಿರುವುದು ಖಂಡನೀಯ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಎರಡೇ ದಿನದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿರುವುದು ಗಮನ ಸೆಳೆದಿದೆ.
Advertisement