Advertisement

ಮಣಿಪಾಲ್‌ ಆಸ್ಪತ್ರೆಯಲ್ಲಿ ಸ್ಪುಟ್ನಿಕ್‌ ವಿ ಲಸಿಕೆ ವಿತರಣೆ

06:54 PM Jun 30, 2021 | Team Udayavani |

ಬೆಂಗಳೂರು: ನಗರದ ಹಳೇ ವಿಮಾನನಿಲ್ದಾಣ ರಸ್ತೆಯ ಮಣಿಪಾಲ್‌ ಆಸ್ಪತ್ರೆಯಲ್ಲಿಮಂಗಳವಾರದಿಂದ ಸ್ಪುಟ್ನಿಕ್‌ ವಿ ಕೊರೊನಾಲಸಿಕೆ ಅಭಿಯಾನ ಆರಂಭವಾಗಿದೆ. ಈಹಿನ್ನೆಲೆ ಲಿಂಗತ್ಯ ಅಲ್ಪ ಸಂಖ್ಯಾತರಿಗೆ ಜು.3ವರೆಗೂ ಉಚಿತವಾಗಿಲಸಿಕೆ ನೀಡಲಾಗುತ್ತಿದೆ.

Advertisement

ಎರಡನೇ ಅತಿದೊಡ್ಡ ಆಸ್ಪತ್ರೆಸಮುದಾಯವಾಗಿರುವ ಮಣಿಪಾಲ್‌ಹಾಸ್ಪಿಟಲ್ಸ್‌ ಸರ್ವರಿಗೂ ಆರೋಗ್ಯ ಎಂಬಧ್ಯೇಯದೊಂದಿಗೆ ಲಿಂಗತ್ಯ ಅಲ್ಪಸಂಖ್ಯಾತರುಯರಿಗೆ ಲಸಿಕೆ ಉಚಿತ ಲಸಿಕೆಅಭಿಯಾನ ಹಮ್ಮಿಕೊಂಡಿದೆ.ಆಸ್ಪತ್ರೆಯಲ್ಲಿ ಸ್ಪುಟ್ನಿಕ್‌ ವಿ, ಕೊವಿಶೀಲ್ಡ್‌,ಕೊವ್ಯಾಕ್ಸಿನ್‌ ಮೂರು ಲಸಿಕೆಗಳುಲಭ್ಯವಿದ್ದು, ತಮ್ಮ ಆಯ್ಕೆ ಅನುಸಾರ ಲಸಿಕೆಪಡೆಯಬಹುದಾಗಿದೆ.

ಅಲಿಯಾ ಖಾನ್‌ಎಂಬುವವರಿಗೆ ಸ್ಪುಟ್ನಿಕ್‌ ವಿ ಲಸಿಕೆಯನ್ನುನೀಡುವ ಮೂಲಕಬೆಂಗಳೂರಿನಲ್ಲಿ ಲಿಂಗತ್ಯಅಲ್ಪ ಸಂಖ್ಯಾತರುಯೊಬ್ಬರಿಗೆ ಮೊದಲುಸ್ಪುಟಿಕ್‌ ಲಸಿಕೆ ನೀಡಿದ ಹೆಗ್ಗಳಿಕೆಯನ್ನುಮಣಿಪಾಲ್‌ ಆಸ್ಪತ್ರೆ ಪಡೆದಿದೆ.

ಮಂಗಳವಾರ ಒಟ್ಟು 155 ಲಿಂಗತ್ಯ ಅಲ್ಪ ಸಂಖ್ಯಾತರುಯರು ಲಸಿಕೆ ಪಡೆದಿದ್ದು, ಐವರುಸ್ಪುಟ್ನಿಕ್‌ ಲಸಿಕೆ ಪಡೆದುಕೊಂಡಿದ್ದಾರೆ.ಲಸಿಕೆ ಪಡೆದ ಬಳಿಕ ಮಾತನಾಡಿದಲಿಂಗತ್ಯ ಅಲ್ಪ ಸಂಖ್ಯಾತರಾದ ಅಲಿಯಾಖಾನ್‌, ಲಸಿಕೆ ತೆಗೆದುಕೊಂಡದ್ದು ಬಹಳಖುಷಿ ನೀಡಿದೆ. ನಮ್ಮನ್ನು ಗುರುತಿಸಿ ಲಸಿಕೆನೀಡಿದ ಮಣಿಪಾಲ್‌ ಆಸ್ಪತ್ರೆಗೆಆಭಾರಿಯಾಗಿದ್ದೇನೆ ಎಂದರು.ಮಣಿಪಾಲ್‌ ಆರೋಗ್ಯ ಸಂಸ್ಥೆ ಮುಖ್ಯ ಅಧಿಕಾರಿ ಕಾರ್ತಿಕ್‌ ರಾಜಗೋಪಾಲ್‌ಮಾತನಾಡಿ, ಲಸಿಕೆಯ ಹೆಮ್ಮೆಯ ಮಾಸದಸ್ಮರಣಾರ್ಥ ಲಿಂಗತ್ಯ ಅಲ್ಪ ಸಂಖ್ಯಾತರಿಗೆ ಲಸಿಕೆ ಅಭಿಯಾನವನ್ನು ಆರಂಭಿÓಲಾಗಿದೆ .ಕಾನ್‌ ಕೊರೋಡ್‌ ಕಂಪನಿ ಸಹಕಾರನೀಡಿದೆ ಎಂದರು.ಆಸ್ಪತ್ರೆಯಲ್ಲಿಸಾರ್ವಜನಿಕರಿಗೂ ಸ್ಪುಟ್ನಿ ಕ್‌ವಿ ಲಸಿಕೆ ಲಭ್ಯವಿದ್ದು, 1450 ರೂ. ದರನಿಗದಿಪ ‌ಡಿಸಲಾಗಿದೆ. ಜೊತೆಗೆ ಕೊವ್ಯಾಕ್ಸಿನ್‌,ಕೊವಿಶೀಲ್ಡ್‌ ಲಸಿಕೆಗಳು ಲಭ್ಯವಿದೆ ಎಂದುಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next