Advertisement

Ram Mandir: “ಅನ್ನಭಾಗ್ಯ” ಅಕ್ಕಿಯಿಂದ ಮಂತ್ರಾಕ್ಷತೆ ವಿತರಣೆ: ಡಿಕೆಶಿ ಟೀಕೆ

11:47 PM Jan 07, 2024 | Team Udayavani |

ಬೆಂಗಳೂರು: ಆರೆಸ್ಸೆಸ್‌ ಹಾಗೂ ಬಿಜೆಪಿಯವರು “ಅನ್ನಭಾಗ್ಯ’ದ ಅಕ್ಕಿಯಲ್ಲೇ ಮಂತ್ರಾಕ್ಷತೆ ಮಾಡಿ, ಜನರಿಗೆ ಹಂಚುತ್ತಿದ್ದಾರೆ. ಇದು ಸರಕಾರಕ್ಕೆ ಅತ್ಯಂತ ಸಂತೋಷದ ಸಂಗತಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಸೂಚ್ಯವಾಗಿ ಹೇಳಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಅದು ಸರಿಯೂ ಅಲ್ಲ ಎಂದರು.

ನನಗೆ ಹಾಗೂ ನಮ್ಮ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿಲ್ಲ. ನಮ್ಮ ಅಧ್ಯಕ್ಷರಿಗೆ ಆಹ್ವಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಅದೇನೇ ಇರಲಿ, ಪಕ್ಷ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಿದೆ. ನಮ್ಮ ಮನೆಯಲ್ಲಿ ಶಿವ, ಹನುಮಂತನ ಫೋಟೋ ಇಟ್ಟು ಪೂಜಿಸುತ್ತೇವೆ. ನಮ್ಮ ಹೃದಯದಲ್ಲಿ ನಮ್ಮ ದೇವರನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಸ್ನೇಹಿತನಿಗೆ ಮರೆವು; ಡಿಕೆಶಿ ತಿರುಗೇಟು
ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರಕಾರದ ಕೊಡುಗೆ ಏನೂ ಇಲ್ಲ. ಇದು ಮೋದಿ ಸರಕಾರ ನೀಡುತ್ತಿರುವ ಅಕ್ಕಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಬಗ್ಗೆ ಕೇಳಿದಾಗ, ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನಮೋಹನ್‌ ಸಿಂಗ್‌ ಹಾಗೂ ಸೋನಿಯಾ ಗಾಂಧಿ. ಈ ವಿಚಾರವನ್ನು ಬೊಮ್ಮಾಯಿ ಮರೆತಿದ್ದಾರೆ.ನಾವು 10 ಕೆಜಿ ಅಕ್ಕಿ ನೀಡಲು ಮುಂದಾಗಿ
ದ್ದೇವೆ. ನನ್ನ ಸ್ನೇಹಿತನಿಗೆ ಮರೆವು ಆರಂಭವಾಗಿರಬೇಕು ಎಂದು ತಿರುಗೇಟು ನೀಡಿದರು.

ದೇವೇಗೌಡರು ಏನು ಹೇಳಿದರೂ ಅದು ಆಶೀರ್ವಾದ
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಂದಲೇ ಕಾಂಗ್ರೆಸ್‌ ಅಂತ್ಯ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ಗೆ 138 ವರ್ಷಗಳ ಇತಿಹಾಸವಿದೆ. ಜನ 135 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಜತೆಗೆ ಪಕ್ಷೇತರ ಶಾಸಕರು ಸೇರಿ ನಮ್ಮ ಬಲ 138 ಆಗಿದೆ. ಆದರೂ ನಮ್ಮನ್ನು ಅವರು (ದೇವೇಗೌಡರು) ನಮ್ಮನ್ನು ನೆನಪಿಸಿಕೊಳ್ಳುತ್ತಿರಬೇಕು. ಅವರು ಏನೇ ಮಾತನಾಡಿದರೂ ಅದನ್ನು ಆಶೀರ್ವಾದ ಎಂದು ತೀಕ್ಷ್ಣವಾಗಿ ಹೇಳಿದರು.

Advertisement

ಫೆಬ್ರವರಿಯಲ್ಲಿ ಬಜೆಟ್‌
ಫೆಬ್ರವರಿಯಲ್ಲಿ ಬಜೆಟ್‌ ಮಂಡನೆ ಯಾಗಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಸಹಿತ ವಿವಿಧ ವಿಚಾರಗಳನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಮ್ಮ ಪ್ರಸ್ತಾವನೆಯನ್ನು ನೀಡಲಿದ್ದೇವೆ ಎಂದು ತಿಳಿಸಿದರು. ನೈಸ್‌ ವಿಚಾರದಲ್ಲಿ ಸರಕಾರ ಜಯಚಂದ್ರ ಅವರ ಬಾಯಿ ಕಟ್ಟಿಹಾಕಿದೆ ಎಂಬ ಆರೋಪಕ್ಕೆ, ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಹೇಳಿ¨ªೆ. ಅಲ್ಲಿ ಯಾಕೆ ಚರ್ಚೆಗೆ ಬರಲಿಲ್ಲ? ಅದೇನೇ ಇರಲಿ, ಈ ಕುರಿತು ಬೇರೆ ಸಮಯದಲ್ಲಿ ಚರ್ಚೆ ಮಾಡೋಣ ಎಂದಷ್ಟೇ ಹೇಳಿದರು.

ಮಂತ್ರಾಕ್ಷತೆ ಹಂಚಿದ ಬಿಎಸ್‌ವೈ, ಬಿವೈವಿ
ಬೆಂಗಳೂರು: ಅಯೋಧ್ಯೆಯಲ್ಲಿ ಜ.22ರಂದು ರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಎಲ್ಲೆಡೆ ಮಂತ್ರಾಕ್ಷತೆ ಪ್ರಸಾದ ವಿತರಿಸಿದರು. ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

ಡಾಲರ್ಸ್‌ ಕಾಲನಿಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲಿ ಹೊರಟ ಯಡಿಯೂರಪ್ಪ, ಮನೆ-ಮನೆಗೆ ಭೇಟಿ ನೀಡಿ ಎಲ್ಲರ ಆರೋಗ್ಯ ವಿಚಾರಿಸಿದರಲ್ಲದೆ, ರಾಮಮಂದಿರದ ಭಾವಚಿತ್ರ, ಕರಪತ್ರ ಹಾಗೂ ಮಂತ್ರಾಕ್ಷತೆ ನೀಡಿದರು. ಜ.22ರಂದು ಮಂತ್ರಾಕ್ಷತೆಯನ್ನು ಮನೆಯಲ್ಲೇ ದೇವರ ಮುಂದಿಟ್ಟು ಪೂಜಿಸಿ, ಅಂದು ಸಂಜೆ ದೀಪಗಳನ್ನು ಹಚ್ಚುವಂತೆ ಮನವಿ ಮಾಡಿದರು. ಯಡಿಯೂರಪ್ಪ ಅವರಿಗೆ ವೈ.ಎ. ನಾರಾಯಣ ಸ್ವಾಮಿ, ಕಟ್ಟಾ ಜಗದೀಶ್‌ ಇನ್ನಿತರರು ಸಾಥ್‌ ನೀಡಿದರು. ಇತ್ತ ಶೇಷಾದ್ರಿಪುರದಲ್ಲಿ ಮನೆ-ಮನೆಗೆ ತೆರಳಿದ ವಿಜಯೇಂದ್ರ, ಮಂತ್ರಾಕ್ಷತೆ ವಿತರಿಸಿದರು. ಅವರೊಂದಿಗೆ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಮಂಜುನಾಥ್‌, ಮುಖಂಡ ಸಪ್ತಗಿರಿ ಗೌಡ ಸಹಿತ ಕಾರ್ಯಕರ್ತರು ಹೆಜ್ಜೆ ಹಾಕಿದರು.

ರಾಮನಗರಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಕರಸೇವಕರಾಗಿ ಮಾಡುತ್ತಿದ್ದೇವೆ. ಕರಸೇವಕನಾಗಿ ರಾಮಮಂದಿರ ಚಳವಳಿಯಲ್ಲಿ ಭಾಗವಹಿಸಿದ ದಿನ ಬಾಳಿನಲ್ಲಿ ಕಂಡ ಅತ್ಯಂತ ಸುದಿನ. ಇಂದು ಮತ್ತೂಮ್ಮೆ ಕರಸೇವಕನಾಗಿ ಶ್ರೀರಾಮನ ಸೇವೆ ಮಾಡುವಂತಹ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ.
-ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next