Advertisement

ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಕಿಟ್‌ ವಿತರಣೆ

12:36 PM Jan 08, 2022 | Team Udayavani |

ಹುಬ್ಬಳ್ಳಿ: ಏಕಸ್‌ ಪ್ರತಿಷ್ಠಾನ ಮತ್ತು ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಹಯೋಗದಲ್ಲಿ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸೂರು ವತಿಯಿಂದ ಸರಕಾರಿ ಶಾಲೆಯ ಮಕ್ಕಳಿಗೆ ಅವಿಷ್ಕಾರ ವಿಜ್ಞಾನ ಮಾದರಿ ಕಿಟ್‌ ವಿತರಿಸಲಾಯಿತು.

Advertisement

ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾ| ಬಬಿತಾ ರಾಜಶೇಖರ ಪ್ರಾಸ್ತಾವಿಕ ಮಾತನಾಡಿ, ಪ್ರತಿಷ್ಠಾನ ಏಕಸ್‌ ಪ್ರತಿಷ್ಠಾನದ ಸಹಯೋಗದಲ್ಲಿ ವೈಜ್ಞಾನಿಕ ಕಾರ್ಯಕ್ರಮಗಳ ಆಯೋಜನೆಗಳ ಮೂಲಕ ಮಕ್ಕಳಲ್ಲಿ, ಶಿಕ್ಷಕರಲ್ಲಿ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮಕ್ಕಳಲ್ಲಿ ಕುತೂಹಲತೆ, ಸೃಜನಶೀಲತೆ ಮತ್ತು ವೈಜ್ಞಾನಿಕತೆ ಬೆಳೆಸುವುದರ ಜತೆಗೆ ಪ್ರಶ್ನಾ ಮನೋಭಾವನೆಯನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಅನ್‌ಲೈನ್‌ ತರಗತಿ, ವಿದ್ಯಾಗಮ ನೇರ ತರಗತಿ ಮತ್ತು ಅನೇಕ ವಿಜ್ಞಾನ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಹುಬ್ಬಳ್ಳಿಯಲ್ಲಿ 77 ಸರಕಾರಿ ಶಾಲೆಗಳ 7ನೇ ತರಗತಿ ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂ. ವೆಚ್ಚದ 2300 ಆವಿಷ್ಕಾರ ವಿಜ್ಞಾನ ಮಾದರಿಗಳ ಕಿಟ್‌ ವಿತರಿಸಲಾಯಿತು. ಪ್ರಸ್ತುತ 7ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 2300 ಆವಿಷ್ಕಾರ ವಿಜ್ಞಾನ ಮಾದರಿಗಳ ಕಿಟ್‌ ವಿತರಿಸಿದ್ದು, ಇದು ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ ಅನುಸಾರವಾಗಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳು ಶಾಲೆಯ ಬಿಡುವಿನ ನಂತರ ಈ ಪುಸ್ತಕದಲ್ಲಿನ
ಚಟುವಟಿಕೆಗಳನ್ನು ಸ್ವತಃ ಮಾಡಿ ಕಲಿಯಬಹುದಾಗಿದೆ ಎಂದು ಹೇಳಿದರು.

ಏಕಸ್‌ ಪ್ರತಿಷ್ಠಾನದ ಉದಯ ಸಾಣಿಕೊಪ್ಪ ಕಿಟ್‌ ವಿತರಿಸಿ ಮಾತನಾಡಿ, ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಶಹರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ವಿದ್ಯಾರ್ಥಿ ಜೀವನ ಮಾನವನ ಅತ್ಯಂತ ಮಹತ್ವದ ಘಟ್ಟ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿವಹಿಸಿ ಅಭ್ಯಾಸ ಮಾಡಬೇಕು ಹಾಗೂ ಈಗಿನ ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಆವಿಷ್ಕಾರ ಮನೋಭಾವನೆ ಬೆಳೆಸಿಕೊಳ್ಳಬೇಕೆಂದರು.

ಅಗಸ್ತ್ಯ ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಮಾತನಾಡಿ, 2020-21ನೇ ಸಾಲಿನಲ್ಲಿ ಓದುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ಕಿಟ್‌ ತಯಾರಿಸಲಾಗಿದೆ. ವಿಜ್ಞಾನ ವಿಷಯದಲ್ಲಿ ಬರುವ, ಬೆಳಕು, ವಿದ್ಯುತ್‌ ಶಕ್ತಿ, ಉಷ್ಣ, ಕಾಂತತ್ವ, ಮಾನವನ ಜೀವನ ಕ್ರಿಯೆಗಳು, ಆಮ್ಲ ಪ್ರತ್ಯಾಮ್ಲ ಮತ್ತು ಲವಣಗಳು ಹಾಗೂ ಇನ್ನುಳಿದ ಪಾಠಗಳ ಕುರಿತು ಸುಮಾರು 45 ಪ್ರಯೋಗಗಳ ಸಾಮಗ್ರಿಗಳನ್ನು ಈ ಕಿಟ್‌ನಲ್ಲಿ ಜೋಡಿಸಲಾಗಿದೆ. ಪ್ರಯೋಗ ವಿವರಣೆಯ ಕೈಪಿಡಿ ಮತ್ತು ಚಟುವಟಿಕೆ ಹಾಳೆಗಳನ್ನು ಇದರಲ್ಲಿ ಇಡಲಾಗಿದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ 16 ಹೊಸೂರು ಪ್ರಧಾನ ಗುರುಮಾತೆ ಜ್ಯೋತಿ ಚಿಕ್ಕೇರೂರ, ಏಕಸ್‌ ಪ್ರತಿಷ್ಠಾನದ ಧವಲ್‌ ಚಿಟ್ನಿಸ್‌, ಶಿವಶಂಕರ, ಅಗಸ್ತ್ಯ ಪ್ರತಿಷ್ಠಾನದ ಸಿಬ್ಬಂದಿ ಸಂಗಮೇಶ ಬಳಿಗೇರ, ರಮೇಶ ಅಣ್ಣಿಗೇರಿ, ಅಶೋಕ ಗುಜಮಾಗಡಿ, ಸುನೀಲ ಮತ್ತಿಗಟ್ಟಿ, ಬಸವರಾಜ ತಡಹಾಳ, ಬಸವರಾಜ ರಾಮದುರ್ಗ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next