Advertisement
ಲಯನ್ಸ್ ಕ್ಲಬ್‌ನ ಮಕ್ಕಳ ತಜ್ಞರು ಮತ್ತು ವಿದ್ಯಾ ಪ್ರಸಾರಕ ಮಂಡಳದ ಉಪಾಧ್ಯಕ್ಷರಾದ ಡಾ| ಮೋಹನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ನಾನು ಸಹ ಬಡತನದಲ್ಲಿಯೇ ಶಿಕ್ಷಣ ಪಡೆದಿದ್ದೆ. ಮೂಲಭೂತ ವಸ್ತುಗಳ ಕೊರತೆಯಿಂದ ಚಪ್ಪಲಿ ಇಲ್ಲದೆ, ಶಾಲೆಯಲ್ಲಿ ಅಧ್ಯಯನ ಮಾಡಿ ಬಡತನದ ನೋವು, ನಲಿವಿನಿಂದ ಬೆಂದು, ನೊಂದು, ಸೋತು, ಸವೆದು ಇಂದು ಕೆಸರಿನಲ್ಲಿ ಬೆಳೆದ ಕಮಲದಂತೆ ಅರಳಿದ್ದು ಬಡತನದ ಅಮೃತದಿಂದ. ಇದ್ದವರು ಇಲ್ಲದವರಿಗೆ ಸದ್ವಿನಿಯೋಗವಾಗಲು ದಾನ, ಧರ್ಮ, ಸಹಾಯ, ಸಹಕಾರ ಮಾಡಿದರೆ ತಪ್ಪಲ್ಲ ಎಂದು ನುಡಿದರು.
Related Articles
Advertisement
ಮುಂಬಯಿ ವಲಯದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ವಿನೂ ಭಗತ್ ಅವರು ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿ ಮಾತನಾಡಿ, ಈ ಶೈಕ್ಷಣಿಕ ವರ್ಷದ ನಮ್ಮ ಈ ಕಾರ್ಯಕ್ರಮವನ್ನು ವಿಪಿಎಂ ವಿದ್ಯಾ ದೇಗುಲದಲ್ಲಿ ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟ ವಿದ್ಯಾ ಪ್ರಸಾರಕ ಮಂಡಳಕ್ಕೆ ಮನದಾಳದ ನಮನಗಳು. ಕಳೆದ ಬಾರಿ ಮುಖ್ಯ ಶಿಕ್ಷಕಿ ಅರುಣಾ ಭಟ್ ಅವರು ನನಗೆ ತಿಳಿಸಿದ ಹಾಗೆ ವಿದ್ಯಾರ್ಥಿಗಳು ಕೊಳಚೆ ಪ್ರದೇಶದಿಂದ ಆರ್ಥಿಕ ಅಸ್ಥಿರತೆಯಿಂದ ಬರುತ್ತಿದ್ದು ಬಡತನದಿಂದ ಬಳಲುತ್ತಿರುವ ಅವರಿಗೆ ಶಾಲೆಯಲ್ಲಿಯ ಮೂಲಭೂತ ಅವಶ್ಯಕತೆಗಳನ್ನು ಮಂಡಳವು ಪೂರೈಸುತ್ತದೆ.
ವೇದಿಕೆಯ ಮೇಲೆ ಮಂಡಳದ ಕೋಶಾಧಿಕಾರಿ ಪ್ರೊ| ಸಿ. ಜೆ. ಪೈ ಮತ್ತು ಮುಂಬಯಿ ವಲಯದ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಕಾರ್ಯದರ್ಶಿ ಸಂದೀಪ್ ಡೊಂಗ್ರೆ, ಕೋಶಾಧಿಕಾರಿ ಬಾಸ್ಕರ್ ಲೊಹಕರೆ, ಪ್ರಕಾಶ್ ಚರತ್ಕರ್, ಆಲೆøಡ್, ಮೋಹನ್ ಸಲಿತ್ರಿ ಉಪಸ್ಥಿತರಿದ್ದರು.
ಅಥಿತಿ ಗಣ್ಯರ ಪರಿಚಯವನ್ನು ಶಿಕ್ಷಕಿ ಲಕ್ಷ್ಮೀ ಕೆಂಗನಾಳ ಮಾಡಿಕೊಟ್ಟರು. ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿ ರೇಖಾ ರಾವ್ ಓದಿದರು. ಶಾಲಾ ಪರಿವೀಕ್ಷಕಿ ಶೋಭಾ ದೇಶಪಾಂಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.