Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ತಾ| ಯೋಜನಾಧಿಕಾರಿ ಜನಾರ್ದನ ಎಸ್., ಗ್ರಾಮಾಭಿವೃದ್ಧಿ ಯೋಜನೆ ಆರಂಭ ಗೊಂಡು 25 ವರ್ಷಗಳನ್ನು ಪೂರೈಸಿದ ನೆನಪಿನಲ್ಲಿ 2007ರಲ್ಲಿ ಸುಜ್ಞಾನ ನಿಧಿ ಶಿಷ್ಯ ವೇತನ ವಿತರಣೆಗೆ ಚಾಲನೆ ನೀಡಲಾಗಿದೆ. ಈ ವರೆಗೆ ರಾಜ್ಯದಲ್ಲಿ 34 ಸಾವಿರ ಮಕ್ಕಳಿಗೆ 39 ಕೋಟಿ ರೂ. ಶಿಷ್ಯ ವೇತನ ವಿತರಿಸಲಾಗಿದೆ. 2018 -19ನೇ ಸಾಲಿನಲ್ಲಿ 10,146 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದರು.
ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಇಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧರ್ಮಸ್ಥಳದ ಯೋಜನೆ ತಲುಪುತ್ತಿದೆ. ಸಮಾಜದ ಆವಶ್ಯಕತೆಯನ್ನು ಗಮನಿಸಿ ಕೈಜೋಡಿಸುವ ಕೆಲಸವನ್ನು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಹೇಳಿದರು.
Related Articles
Advertisement
ಸಹಕಾರದ ಚಿಂತನೆವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸರಕಾರ ಮಾಡಬೇಕಾದ ಕರ್ತವ್ಯದ ಪಾಲನ್ನು ನಿಭಾಯಿಸುತ್ತಿರುವ ಧರ್ಮಸ್ಥಳ ಕ್ಷೇತ್ರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಸಮಾಜದ ಎಲ್ಲರೂ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಚಿಂತನೆ ನಿಜಕ್ಕೂ ಶ್ಲಾಘನೀಯ ಎಂದರು. ವಿದ್ಯಾರ್ಥಿಗಳು ಕರ್ತವ್ಯವನ್ನು ಮರೆಯದೆ ಉತ್ತಮ ಗುರಿಯ ಕಡೆಗೆ ಸಾಗಬೇಕು ಎಂದು ಹೇಳಿದರು.