Advertisement

ಗಿರಿಜನರಿಗೆ ಹಕ್ಕು ಪತ್ರ ವಿತರಣೆ

12:42 PM Mar 08, 2018 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಪುನರ್ವಸತಿ ಗೊಂಡಿದ್ದ ಶೆಟ್ಟಹಳ್ಳಿ-ಲಕ್ಕಪಟ್ಟಣ ಗಿರಿಜನ ಪುರ್ನವಸತಿ ಕೇಂದ್ರದ 280 ಆದಿವಾಸಿ ಕುಟುಂಬಗಳಿಗೆ ಭೂಮಿ ಹಕ್ಕು ಪತ್ರವನ್ನು ಶಾಸಕ ಎಚ್‌.ಪಿ ಮಂಜುನಾಥ್‌ ಶೆಟ್ಟಹಳ್ಳಿ ಗಿರಿಜನ ಆಶ್ರಮ ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿದರು.

Advertisement

ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ ಗಿರಿಜನ ಪುರ್ನವಸತಿ ಕೇಂದ್ರದ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕರು, ಇದೀಗ ಹಕ್ಕುಪತ್ರ ನೀಡುತ್ತಿರುವುದು ನೆಮ್ಮದಿ ತಂದಿದೆ. ಆದರೆ, ಭೂಮಿಯನ್ನು ಅನ್ಯರಿಗೆ ಮಾರದೆ ಸ್ವತಃ ಉಳುಮೆ ಮಾಡಿ ಬದುಕು ಹಸನುಗೊಳಿಸಿಕೊಳ್ಳಿ, ಸರ್ಕಾರ ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಕಲ ರೀತಿಯ ಸೌಲಭ್ಯ ನೀಡುತ್ತಿದೆ.

ಇದಲ್ಲದೆ ಪಿಯುಸಿ ಹಾಗೂ ಪದವಿ ಕಾಲೇಜಿಗೆ ಸೇರುವ ಆದಿವಾಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಶುಲ್ಕ ಭರಿಸುತ್ತಿದ್ದೇನೆ. ಆದ್ದರಿಂದ ಯಾವುದೇ ಕಾರಣಕ್ಕೂ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಬಾರದು, ಆದಿವಾಸಿ ಮುಖಂಡರುಗಳು ಕೇಂದ್ರದ ಆದಿವಾಸಿಗಳ ಬಗ್ಗೆ ಕಾಳಜಿವಹಿಸಸುವಂತೆ ಮನವಿ ಮಾಡಿದರು.

ಆದಿವಾಸಿಗಳ ಮನವಿ: ಶೆಟ್ಟಹಳ್ಳಿ ಪುರ್ನವಸತಿ ಕೇಂದ್ರಕ್ಕೆ ಸಿಸಿ ರಸ್ತೆ ಮತ್ತು ಚರಂಡಿ, ಬಸ್‌ ಸ್ಟಾಪ್‌,  ಜಮೀನಿಗೆ ಹೋಗುವ ರಸ್ತೆಗಳನ್ನು ನಿರ್ಮಾಣ ಮಾಡಿಕೊಡಬೇಕು, ಇದಲ್ಲದೆ ನಮಗೆ ನೀಡಿರುವ ಪ್ಯಾಕೇಜ್‌ನಲ್ಲಿ ಅರಣ್ಯ ಇಲಾಖೆಯವರು ತಲಾ ಕುಟುಂಬದಿಂದ 68 ರಿಂದ 70 ಸಾವಿರ ರೂ. ಗಳನ್ನು ಹಿಡಿದುಕೊಂಡಿದ್ದು, ಈ ಹಣವನ್ನು ನಮ್ಮ ಉಳಿತಾಯ ಖಾತೆಗೆ ಜಮಾ ಮಾಡಿಸಲು ಅರಣ್ಯಾಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದರು.

ಎಲ್ಲಿಂದ ಬಂದಿದ್ದರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗಿದ್ದ ಕೊಡಗು ಜಿಲ್ಲೆಯ ಕೊಡಂಗೆ, ಮೂರ್ಕಲ್‌, ಮಡೆನೂರು, ದಾಳಿಂಬೆ ಕೊಲ್ಲಿಹಾಡಿ, ಹಾಗೂ ಹೆಚ್‌.ಡಿ.ಕೋಟೆ ತಾಲೂಕಿನ  ವ್ಯಾಪ್ತಿಯ ಬೋಗಪುರ ಮತ್ತು ಮಾಳದಹಾಡಿಗಳಿಂದ 150 ಕುಟುಂಬಗಳನ್ನು 2010ರಲ್ಲಿ  ಹಾಗೂ 2014ರಲ್ಲಿ ಲಕ್ಕಪಟ್ಟಣ ಪುರ್ನವಸತಿ ಕೇಂದ್ರಕ್ಕೆ ನಾಗರಹೊಳೆ,

Advertisement

ಜಗಂಲ್‌ ಹಾಡಿ, ಮಚ್ಚಾರು, ಗೋಣಿಗದ್ದೆ ಹಾಡಿಗಳಿಂದ 130 ಆದಿವಾಸಿ ಕುಟುಂಬಗಳನ್ನು ಅರಣ್ಯ ಇಲಾಖೆಯವರು ಸ್ವಯಂ ಸೇವಾ ಸಂಸ್ಥೆಯವರ ಸಹಕಾರದೊಂದಿಗೆ 10 ಲಕ್ಷ ರೂ. ಪ್ಯಾಕೇಜ್‌ನೊಳಗೆ ತಲಾ 3 ಎಕರೆ ಜಮೀನು, ವಸತಿ ಮತ್ತಿತರ ಮೂಲಭೂತ ಸೌಲಭ್ಯದೊಂದಿಗೆ ಪುನರ್ವಸತಿ ಕಲ್ಪಿಸಲಾಗಿತ್ತು,

ಅಭಿನಂದನೆ: ಇದೀಗ ಶಾಸಕ ಎಚ್‌.ಪಿ ಮಂಜುನಾಥ್‌ರ ಅವಿರತ ಪರಿಶ್ರಮದಿಂದ ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಮಾಡುತ್ತಿರುವುದಕ್ಕೆ ಶೆಟ್ಟಹಳ್ಳಿ ಪುರ್ನವಸತಿ ಕೇಂದ್ರದ ಅಧ್ಯಕ್ಷ ಜೆ.ಟಿ.ರಾಜಪ್ಪ ಮತ್ತು ಲಕ್ಕಪಟ್ಟಣ ಕೇಂದ್ರದ ಆಧ್ಯಕ್ಷ ಚಂದ್ರು ಅಧಿಕಾರಿಗಳು ಹಾಗೂ ಶಾಸಕರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹನಗೋಡು ಆರ್‌.ಐ.ಶ್ರೀನಿವಾಸ್‌, ಕಾರ್ಯಕ್ರಮದಲ್ಲಿ ಗಿರಿಜನ ಪುರ್ನವಸತಿ ಕೇಂದ್ರದ ಅಧ್ಯಕ್ಷ ಜೆ.ಟಿ.ರಾಜಪ್ಪ, ಉಪಾಧ್ಯಕ್ಷೆ ಚೌಡಮ್ಮ, ಹನಗೋಡು ಗ್ರಾಪಂ ಅಧ್ಯಕ್ಷ ಹೆಚ್‌.ಬಿ.ಮಧು, ಜಿಲ್ಲಾ ಎಸ್ಸಿ/ಎಸ್‌ ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್‌, ಸ್ವಯಂಸೇವಾ ಸಂಸ್ಥೆಯ ಲೋಕೇಶ್‌, ಗ್ರಾಪಂ ಸದಸ್ಯರಾದ ಸುಮತಿ, ರಾಜು, ಮಂಜುನಾಥ್‌, ಪಿಡಿಒ ಬಿ.ಮಣಿ,  ಆರ್‌.ಐ.ಶ್ರೀನಿವಾಸ್‌, ವಿಎ. ಶಶಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿವಿ.ನಾರಾಯಣ್‌, ಮಾಜಿ ಆಧ್ಯಕ್ಷರಾದ ಬಿಳಿಕೆರೆ ಬಸವರಾಜ್‌, ರಾಘು ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next