Advertisement

110 ಕುಟುಂಬಗಳಿಗೆಪರಿಹಾರ ಧನ ವಿತರಣೆ

12:17 PM Aug 16, 2019 | Team Udayavani |

ಹೊಳೆಆಲೂರು: ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದ ಕುರುವಿನಕೊಪ್ಪ ಗ್ರಾಮದ ಪರಿಹಾರ ಕೇಂದ್ರದ ಆಶ್ರಯ ಮನೆಗಳಲ್ಲಿ ವಾಸವಿದ್ದ 110 ಕುಟುಂಬಗಳ ನೆರೆ ಸಂತ್ರಸ್ತರಿಗೆ ಗುರುವಾರ ತಾಲೂಕು ಆಡಳಿತದಿಂದ ತಲಾ ಫಲಾನುಭವಿಗೆ 10 ಸಾವಿರ ರೂ. ಪರಿಹಾರದ ಚೆಕ್‌ ವಿತರಿಸಲಾಯಿತು.

Advertisement

ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಸ್‌.ಎನ್‌. ರುದ್ರೇಶ ಮಾತನಾಡಿ, ಸರಕಾರ ಕಳೆದ ಹತ್ತು ವರ್ಷಗಳ ಹಿಂದೆಯೇ ಹೊಳೆಆಲೂರು ಭಾಗದ 11 ಗ್ರಾಮಗಳನ್ನು ಸ್ಥಳಾಂತರಗೊಳಿಸಲಾಗಿತ್ತು. ಜನರು ಮುಂಜಾಗ್ರತೆ ವಹಿಸಿದ್ದರೆ ಇಂತಹ ಅವಘಡವಾಗುತ್ತಿರಲಿಲ್ಲ. ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿಯ ಅಪಾರ ಪ್ರಮಾಣದ ನೀರಿನಿಂದಾಗಿ ಬಹುತೇಕ ಗ್ರಾಮಗಳು ನೀರಿನಲ್ಲಿ ಮುಳುಗಡೆಗೊಂಡು ಸಾಕಷ್ಟು ಹಾನಿ ನೀವು ಅನುಭವಿಸಿದ್ದೀರಿ, ಮುಂದಿನ ದಿನಮಾನಗಳಲ್ಲಿ ನವಗ್ರಾಮದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆ, ಅಸ್ಪತ್ರೆ ಸೇರಿದಂತೆ ಸಕಲ ಮೂಲ ಸೌಲಭ್ಯಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಕಾರಣ ಎಲ್ಲರೂ ನವಗ್ರಾಮಕ್ಕೆ ಬಂದು ನೆಲೆಸಬೇಕು ಎಂದರು.

ತಹಶೀಲ್ದಾರ್‌ ಶರಣಮ್ಮ ಕಾರಿ ಮಾತನಾಡಿ, ಈಗಾಗಲೇ ಹಾನಿಗೊಂಡಿರುವ ಪ್ರತಿ ಮನೆಗಳಿಗೆ ಪರಿಹಾರವಾಗಿ 10 ಸಾವಿರ ಪರಿಹಾರ ಧನದ ಚೆಕ್‌ ನೀಡಲಾಗುತ್ತಿದ್ದು, ಸಂತ್ರಸ್ತರು ಪರಿಹಾರದ ಹಣ ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಬಿದ್ದ ಮನೆಗಳ ಹಾಗೂ ಹಾಳಾದ ಬೆಳೆಗಳ ಸರ್ವೇ ನಡೆಸಿ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಎಸ್‌.ಜಿ.ಸಲಗೇರಿ, ರೋಣ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ವಿ.ನಾಗಮಣಿ, ಜಿಪಂ ಸದಸ್ಯ ಪಡಿಯಪ್ಪ ಪೂಜಾರ, ಬಸವರಾಜ ಅಂಗಡಿ, ಕಂದಾಯ ನಿರೀಕ್ಷಕ ರವೀಂದ್ರ ಬಾರಕೇರ, ಪಿಎಸ್‌ಐ ಎಲ್.ಕೆ.ಜೂಲಕಟ್ಟಿ, ಮಂಜುನಾಥ ಗಣಿ, ಅಡಿಯಪ್ಪ ಮೇಟಿ, ಬಸವರಾಜ ಗಿರತಮ್ಮನ್ನವರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next