Advertisement
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್. ರವಿ ಪ್ರಶ್ನಿಸಿ, ಬಯೋಮೆಟ್ರಿಕ್ ಪಡೆಯುವಲ್ಲಿ ತೊಂದರೆಯಾಗುವ ವಯೋವೃದ್ಧರಿಗೆ ಬಯೋಮೆಟ್ರಿಕ್ ಹೊರತುಪಡಿಸಿ ಪಡಿತರ ಪಡೆಯಲು ಶೇ. 2ರಷ್ಟು ಫಲಾನುಭವಿಗಳಿಗೆ ಅವಕಾಶ ಕೊಡಲಾಗಿದೆ ಆದರೆ, ವಯೋವೃದ್ಧರ ಹೆಬ್ಬೆರಳಿನ ಗೆರೆಗಳು ಮಾಸಿ ಹೋಗಿದ್ದರಿಂದ ಬಯೋಮೆಟ್ರಿಕ್ ಪಡೆಯಲು ಆಗುತ್ತಿಲ್ಲ. ಹಾಗಾಗಿ, ವಯೋವೃದ್ಧ ಫಲಾನುಭವಿಗಳಿಗೂ ಬಯೋಮೆಟ್ರಿಕ್ ಇಲ್ಲದೆ ಪಡಿತರ ನೀಡಬೇಕು ಅಥವಾ ಫಲಾನುಭವಿಗಳ ಪ್ರಮಾಣ ಶೇ. 10 ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಹಾರ ಸಚಿವರ ಪರ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಯೋಮೆಟ್ರಿಕ್ ಪಡೆಯುವಲ್ಲಿ ತೊಂದರೆಯಾಗುವ ವಯೋವೃದ್ಧರಿಗೆ ಬಯೋಮೆಟ್ರಿಕ್ ಹೊರತುಪಡಿಸಿ ಶೇ. 2ರಷ್ಟು ಫಲಾನುಭವಿಗಳಿಗೆ ಪಡಿತರ ಹಂಚಿಕೆ ನೀಡುವ ನಿಯಮ ಜಾರಿಯಲ್ಲಿದೆ. ಅನಿವಾರ್ಯ ಸಂದರ್ಭ ಪೂರ್ವಾನು ಮತಿಯೊಂದಿಗೆ ಬಯೋಮೆಟ್ರಿಕ್ ಇಲ್ಲದೆ ಆಹಾರಧಾನ್ಯ ವಿತರಣೆಗೆ ಅವಕಾಶ ನೀಡಲಾಗಿದೆ. ಹೆಬ್ಬರಳಿನ ರೇಖೆಗಳು ಮಾಸಿ ಹೋಗಿದ್ದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ ಎನ್ನುವ ವಿಚಾರ ಗಮನಕ್ಕೆ ತರಲಾಗಿದೆ. ವಯೋವೃದ್ಧರಿಗೆ ಬಯೋಮೆಟ್ರಿಕ್ ಇಲ್ಲದೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ:ಅಗತ್ಯ ಇರುವ ಕಡೆ ಉಪ ನೋಂದಣಾಧಿಕಾರಿ ಕಚೇರಿ: ಅಶೋಕ್
Related Articles
ರಾಜ್ಯದಲ್ಲಿ 20,084 ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 20,016 ನ್ಯಾಯಬೆಲೆ ಅಂಗಡಿಗಳನ್ನು ಬಯೋಮೆಟ್ರಿಕ್ ವ್ಯವಸ್ಥೆಗೆ ಅಳವಡಿಸಲಾಗಿದೆ. ಇಂಟರ್‌ನೆಟ್ ಸಮಸ್ಯೆ ಇರುವ ಗುಡ್ಡಗಾಡು, ಮಲೆನಾಡು ಪ್ರದೇಶಗಳ 68 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಬಯೋಮೆಟ್ರಿಕ್ ಇಲ್ಲದೆ ನೇರವಾಗಿ ವಿತರಿಸಲಾಗುತ್ತಿದೆ ಎಂದು ಸಭಾನಾಯಕರು ತಿಳಿಸಿದರು.
Advertisement