Advertisement
ಕೊರೊನಾದಿಂದ ಅನೇಕ ವ್ಯಾಪಾರಿಗಳ ಬದುಕು ಚಿಂತಾಜನಕವಾಗಿದೆ. ಅಕ್ಕಲ್‌ಕೋಟೆ ಪಟ್ಟಣದ ಸ್ವಾಮಿ ಸಮರ್ಥ ಮಂದಿರ ಮತ್ತು ಅನ್ನಛತ್ರ ಆವರಣದಲ್ಲಿದ್ದ ಅಂಗಡಿ, ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಯಾವುದೇ ವ್ಯಾಪಾರ, ವಹಿವಾಟು ನಡೆಯುತ್ತಿಲ್ಲ.
ಅವರ ಮಾರ್ಗದರ್ಶನ ಮತ್ತು ಪ್ರಮುಖಕಾರ್ಯಕಾರಿ ವಿಶ್ವಸ್ತ ಅಮೋಲ್‌ರಾಜೆ ಭೋಸ್ಲೆಯವರ ನೇತೃತ್ವದಲ್ಲಿ ಕಾಯದರ್ಶಿ ಶಾಮರಾವ ಮೋರೆ ಮಂಡಳಿಯ ಮುಸ್ಲಿಂ ಸೇವಕರಿಗೆ ರಂಜಾನ್ ಹಬ್ಬದ ಅಂಗವಾಗಿ ಪಡಿತರವನ್ನು ವಿತರಿಸಿದರು. ಸಂಸ್ಥೆಯ ವತಿಯಿಂದ ಬಡ ಕೂಲಿ ಕಾರ್ಮಿಕರ ಮತ್ತು ದೀನ ದಲಿತರ ಮಕ್ಕಳಿಗೆ ಶೈಕ್ಷಣಿಕ ಸಹಾಯ, ಭೂಕಂಪ, ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಆರೋಗ್ಯ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರ, ಸ್ತ್ರೀ ಭ್ರೂಣ ಹತ್ಯೆ ವಿರುದ್ಧ, ವರದಕ್ಷಿಣೆ ವಿರುದ್ಧ, ಸ್ವತ್ಛತಾ ಅಭಿಯಾನ ಸಹಿತ ಅನೇಕ ಮಹತ್ವದ ಕಾರ್ಯದಲ್ಲಿ ಸಂಸ್ಥೆ ಪ್ರಮುಖವಾದ ಕಾರ್ಯ ನಿರ್ವಹಿಸುತ್ತಿದೆ.
ಈ ಸಂದರ್ಭ ಮಂಡಳದ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ ಮೋರೆ, ಅಪ್ಪಾ ಹಂಚಾಟೆ, ನಾಮಾ ಭೋಸ್ಲೆ, ಬಾಳಾಸಾಹೇಬ್ ಘಾಟಗೆ, ಅಮಿತ್ ಥೋರಾತ, ಮಹಾಂತೇಶ ಸ್ವಾಮಿ, ಸಮರ್ಥ ಘಾಟಗೆ, ದತ್ತಾ ಮಾನೆ, ಲಕ್ಷ್ಮಣ್ ಪಾಟೀಲ್, ರಾಜೇಂದ್ರ ಪವಾರ್ ಹಾಗೂ ಮಂಡಳಿಯ ಸೇವಕರು Óಮೊದಲಾದವರು ಉಪಸ್ಥಿತರಿದ್ದರು.