Advertisement

ಪೌರಕಾರ್ಮಿಕರಿಗೆ ಮಾಂಸದ ಕೋಳಿ ವಿತರಣೆ

07:34 PM Jun 21, 2021 | Team Udayavani |

ದೇವನಹಳ್ಳಿ: ಪೌರಕಾರ್ಮಿಕರು ತಮ್ಮ ಮನೆಕೆಲಸಕ್ಕೆತೋರುವ ಕಾಳಜಿಗಿಂತ ಹೆಚ್ಚು ಪಟ್ಟಣದ ಜನತೆಗೆ ತೋರಿಸುತ್ತಿದ್ದಾರೆ.

Advertisement

ಹೀಗಾಗಿ ಅವರ ಆರೋಗ್ಯಸದೃಢವಾಗಿರಲು ಮಾಂಸದ ಕೋಳಿಗಳ ವಿತರಣೆಮಾಡಲಾಗುತ್ತಿದೆ ಎಂದು ಮಾಜಿ ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಸೊಸೈಟಿ ಕುಮಾರ್‌ ಹೇಳಿದರು.

ಪಟ್ಟಣದ8ನೇ ವಾರ್ಡಿನಲ್ಲಿ 110 ಮಂದಿ ಪೌರಕಾರ್ಮಿಕರಿಗೆ ಮಾಂಸದ ಕೋಳಿಗಳನ್ನು ಹಂಚಿಕೆಮಾಡಿಮಾತನಾಡಿದರು.ಕೋವಿಡ್‌ ಸಂದರ್ಭದಲ್ಲಿಜೀವದ ಹಂಗು ತೊರೆದು ಹಗಲಿರುಳು ಶ್ರಮಿಸಿದಪುರಸಭೆ ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲುಸಾಧ್ಯವಿಲ್ಲ. ಪಟ್ಟಣದ ಜನರೆಲ್ಲರೂ ಆರೋಗ್ಯದಿಂದಇರಬೇಕಾದರೆ ತಮ್ಮ ಆರೋಗ್ಯವನ್ನು ಕಡೆಗಣಿಸಿಕೊಂಡು ಬೆಳಗಿನ ಜಾವ 4 ಗಂಟೆಯಿಂದಲೂನಿರಂತರವಾಗಿದುಡಿಯು ತ್ತಿರುವಪೌರಕಾರ್ಮಿಕರಯೋಗಕ್ಷೇಮ ಹಾಗೂ ಅವರ ಆರೋಗ್ಯದರಕ್ಷಣೆಗಾಗಿ ನಾವೆಲ್ಲರೂ ಪಣ ತೊಡಬೇಕು.ಈಗಾಗಲೇ ಅವರಿಗೆ ದಿನಸಿ ಕಿಟ್‌ಗಳು, ತರಕಾರಿ,ಮಾಂಸ, ಸ್ಯಾನಿಟೈಸರ್‌ ವಿತರಣೆ ಮಾಡಲಾಗಿದೆ.

ಈಗ ಕೋಳಿಗಳನ್ನು ವಿತರಣೆ ಮಾಡುತ್ತಿದ್ದುಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿಕ್ಕಾಗಿಸಹಕರಿಸುತ್ತಿದ್ದೇವೆ ಎಂದರು. 110 ಮಂದಿ ಪೌರಕಾರ್ಮಿಕರಿಗೆ ತಲಾ2 ಕೆ.ಜಿ. ಮಾಂಸದಕೋಳಿಗಳುವಿತರಣೆ ಮಾಡಿದರು. ಮುಖಂಡರಾದ ನಾರಾಯಣ್‌, ಮುನೀಂದ್ರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next