Advertisement

ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಕಿಟ್‌ ವಿತರಣೆ

05:35 PM Jun 30, 2021 | Team Udayavani |

ಚಿತ್ತಾಪುರ: ತಾಲೂಕಿನಲ್ಲಿ ಒಟ್ಟು 5000 ಕ್ಕೂ ಅಧಿ ಕ ಮಕ್ಕಳು ಅಪೌಷ್ಟಿಕಾಂಶ ಹೊಂದಿದ್ದಾರೆ. ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ಗಳನ್ನು ವಿತರಿಸಲು ಸಂಬಂಧಪಟ್ಟ ಇಲಾಖೆಯ ಅ ಧಿಕಾರಿಗಳು ಸರ್ವ ಸನ್ನದ್ಧ ಮಾಡಿಕೊಳ್ಳಬೇಕು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಸೂಚಿಸಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಲ್ಲಿ ಬಹುತೇಕ ಎಲ್ಲ ವಯೋಮಾನದವರು ಸಮಸ್ಯೆ ಎದುರಿಸಿದ್ದಾರೆ. ಇದೀಗ ಮೂರನೇ ಅಲೆಯು ಜುಲೈ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಬರಲಿದೆ. ಇದು ಅಪೌಷ್ಟಿಕಾಂಶ ಹೊಂದಿದ ಮಕ್ಕಳಿಗೆ ಜಾಸ್ತಿ ಸೋಂಕು ತಗುಲಲಿದೆ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಅಪೌಷ್ಟಿಕಾಂಶ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಕಿಟ್‌ ವಿತರಿಸಲಾಗುವುದು ಎಂದು ಹೇಳಿದರು.

ತಾಲೂಕು ವೈದ್ಯಾ ಧಿಕಾರಿ ದೀಪಕ್‌ ಮಾತನಾಡಿ, ಅಪೌಷ್ಟಿಕಾಂಶ ಹೊಂದಿದ ಮಕ್ಕಳನ್ನು ತೀವ್ರ ಅಪೌಷ್ಟಿಕತೆ ಹಾಗೂ ಮ್ಯಾಮ್‌ ಮಧ್ಯಮ ತೀವ್ರ ಅಪೌಷ್ಟಿಕತೆ ಎಂದು ಗುರುತಿಸಲಾಗುತ್ತಿದೆ. ಚಿತ್ತಾಪುರ ತಾಲೂಕಿನಲ್ಲಿ ಒಟ್ಟು 146 ತೀವ್ರ ಅಪೌಷ್ಟಿಕತೆ ಹಾಗೂ 6578 ಮಧ್ಯಮ ತೀವ್ರ ಅಪೌಷ್ಟಿಕತೆ ಹೀಗೆ ಒಟ್ಟು 6724 ಮಕ್ಕಳಿಗೆ ಕಿಟ್‌ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಿಟ್‌ ವಿತರಣೆ ಜತೆಗೆ ಚಿತ್ತಾಪುರ ತಾಲೂಕಿನ ವಿವಿಧ ಪ್ರದೇಶದ 18 ವಯಸ್ಸು ದಾಟಿದ ಒಟ್ಟು 1000 ಜನರಿಗೆ ಕೋವಿಡ್‌ ಲಸಿಕೆ ಕೂಡ ಹಾಕಲಾಗುತ್ತಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಎಂದರು. ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಮಾತನಾಡಿ, ಕಿಟ್‌ ವಿತರಣೆ ಹಾಗೂ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಯಶಸ್ವಿಗೊಳಿಸಲು ಒಟ್ಟು 800 ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ.

ಜತೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸೇವೆಗೆ ನಿಯೋಜಿಸಲಾಗುತ್ತಿದೆ ಎಂದರು. ಇದೇ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಮಧ್ಯೆ ಪ್ರವೇಶಿಸಿ ನಮ್ಮನ್ನು ಸಹ ಸಹಾಯಕರಾಗಿ ಕಾರ್ಯನಿರ್ವನಿರ್ವಹಿಸಲು ಮನವಿ ಮಾಡಿದರು. ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಸಹಾಯಕರಾಗಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಬೇಕು.

Advertisement

ನಾಳೆಯ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸಿ ಜನರು ಒಟ್ಟಾಗಿ ಸೇರದಂತೆ ನೋಡಿಕೊಳ್ಳಬೇಕು ಎಂದು ಪಿಎಸ್‌ಐಗೆ ಸೂಚಿಸಿದರು. ಜಿಪಂ ಮಾಜಿ ಸದಸ್ಯ ಶಿವರುದ್ರ ಭೀಣಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‌ಪುರಕರ, ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ತಹಶೀಲ್ದಾರ್‌ ಸುರೇಶ ವರ್ಮಾ, ತಾಪಂ ಇಒ ನೀಲಗಂಗಾ, ಲಕ್ಷ್ಮಣ ಶೃಂಗೇರಿ, ರಾಜಕುಮಾರ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next