Advertisement

ಬಿಜೆಪಿ ಶಾಸಕನಿಂದಲೇ ಹಣ, ಹೆಂಡ ಹಂಚಿಕೆ: ಅಲ್ಲಮಪ್ರಭು ಪಾಟೀಲ ಅರೋಪ

12:21 PM May 09, 2023 | Team Udayavani |

ಕಲಬುರಗಿ: ನಗರ ದಕ್ಷಿಣ ಮತಕ್ಷೇತ್ರದಲ್ಲಿ ಸೋಮವಾರ ರಾತ್ರಿ ಸಂಗಮೇಶ ಕಾಲೊನಿ ಮತ್ತು ವಿದ್ಯಾನಗರದಲ್ಲಿ ಮತದಾರರಿಗೆ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್ ಹಾಗೂ ಸಂಗಡಿಗರು ಹಣ, ಹೆಂಡ ಹಂಚಿಕೆ ಮಾಡುತ್ತಿರುವಾಗಲೇ ಜಿಲ್ಲಾ ಚುನಾವಣಾಧಿಕಾರಿ ಕೈಯಲ್ಲಿಯೇ ಸಿಕ್ಕಿ ಬಿದ್ದಿರುವ ಘಟನೆ ನಡೆದಿದ್ದು, ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲ ನೆಲೋಗಿ ಆಗ್ರಹಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾತ್ರಿ ಹಣ, ಹೆಂಡ ಮತ್ತು ಕರಪತ್ರಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸ್ವತಃ ಶಾಸಕ ದತ್ತಾತ್ರೇಯ ಪಾಟೀಲ್ ಹಣದ ಚೀಲವನ್ನು ಹೆಗಲಿಗೆ ಹಾಕಿಕೊಂಡು ಹಣ ಹಂಚುತ್ತಿದ್ದರು. ಇದನ್ನು ನಮ್ಮ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಆಗ ಅವರ ಮೇಲೆ ದಾಳಿ ಕೂಡ ಆಗಿದೆ. ಈ ಹಂತದಲ್ಲಿ ತಳ್ಳಾಟ ಜಗ್ಗಾಟದ ನಡುವೆ ಶಾಸಕರು ಪಾರಾಗಿದ್ದಾರೆ. ಈ ವೇಳೆಯಲ್ಲಿ ಶಿವಾನಂದ ಹುಲಿ ಎನ್ನುವ ಮುಖಂಡನನ್ನು ಖುದ್ದು ಜಿಲ್ಲಾ ಚುನಾವಣಾ ಅಧಿಕಾರಿ ಯಶವಂತ್ ಗುರುಕರ್ ಸ್ಥಳಕ್ಕೆ ಆಗಮಿಸಿ ಬಂಧಿಸಿದ್ದಾರೆ. ಈ ವೇಳೆಯಲ್ಲಿ ಹಣದ ಚೀಲಗಳು ಮತ್ತು ಕರ ಪತ್ರ ಹಾಗೂ ಹೆಂಡವನ್ನು ಸೀಜ್ ಮಾಡಲಾಗಿದೆ. ಈ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ ಎಂದರು.

ಇದನ್ನೂ ಓದಿ:ರಾಜಕೀಯ ನಾಯಕರ ವಾಗ್ಯುದ್ಧವನ್ನೂ ಮೀರಿಸುವಂತಿತ್ತು ಗೂಳಿಗಳ ಕಾದಾಟ!

ಈ ಇಡೀ ಘಟನೆ ನಡೆಯುವಾಗ ನಾನು ಕೂಡ ಸ್ಥಳದಲ್ಲಿಯೇ ಇದ್ದೆ. ಶಾಸಕರು ನಮ್ಮನ್ನು ನೋಡಿ ಓಡಿ ಹೋದರು. ಖುದ್ದು ಶಾಸಕರೇ ಹಣ ಹಂಚಿಕೆಯಲ್ಲಿ ಭಾಗಿಯಾಗಿರುವುದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಚುನಾವಣಾಧಿಕಾರಿ ಸ್ಥಳಕ್ಕೆ ಆಗಮಿಸಿ ವೀಕ್ಷಣೆ ಮಾಡಿದ್ದಲ್ಲದೆ ಆರೋಪಿತರನ್ನು ಸಿನೀಮಿಯ ರೀತಿಯಲ್ಲಿ ಅಟ್ಟಿಸಿಕೊಂಡು ಹೋಗಿದ್ದಾರೆ. ಆದ್ದರಿಂದ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ಹಿರಿಯರಾದ ರಾಜಗೋಪಾಲರೆಡ್ಡಿ ಮುದಿರಾಜ್, ಡಾ.ಕಿರಣ ಪಾಟೀಲ, ಶ್ಯಾಮ್ ನಾಟೀಕಾರ್, ಪ್ರವೀಣ ಹರವಾಳ್, ಲಿಂಗರಾಜ್ ತಾರಫೈಲ್ ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next