ನೇತೃತ್ವದಲ್ಲಿ ಧರ್ಮಸ್ಥಳದ ಸಂಸ್ಥೆಗಳು ಕೂಡಾ ಈ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿವೆ. ಇದರ ಭಾಗವಾಗಿ ಇಂದು ಪತ್ರಕರ್ತರಿಗೂ ಆಹಾರ
ಧಾನ್ಯಗಳ ಕಿಟ್ ವಿತರಣೆ ಮಾಡಲಾಗಿದೆ ಎಂದರು.
Advertisement
ಧರ್ಮಸ್ಥಳ ಸಂಸ್ಥೆ ಜಿಲ್ಲೆಯಲ್ಲಿ 21 ಸಾವಿರ ಮಹಿಳಾ ಸ್ವಸಹಾಯ ಸಂಘದ ಶಾಖೆಗಳನ್ನು ಹೊಂದಿದೆ. ಲಾಕ್‌ಡೌನ್ ಕಾರಣಕ್ಕೆ ಮಹಿಳೆಯರು ಮತ್ತು ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವು ನೀಡಲಾಗಿದ್ದು, ನಮ್ಮ ಸಂಘದ ಸದಸ್ಯರಿಗೆ ಯಾವುದೇ ತೊಂದರೆ ಬಾರದಂತೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ನರೇನಹಳ್ಳಿ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಎಚ್. ಲಕ್ಷ್ಮಣ್, ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜ್, ಸಂಪಿಗೆ ತಿಪ್ಪೇಸ್ವಾಮಿ ಇತರರು ಇದ್ದರು.