ಕೊರಟಗೆರೆ : ಶ್ರೀ ವಾಸವಿ ಸ್ನೇಹಕೂಟ ವತಿಯಿಂದ ಹೊಳವನಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ , ಗೋಡ್ರಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ನಿರ್ದೇಶಕರಾದ ಡಿ.ಆರ್.ರಾಧಾಕೃಷ್ಣರವರು ವಿತರಿಸಿದರು.
ಸಹ ಶಿಕ್ಷಕ ಶ್ರೀರಾಮಯ್ಯ ಮಾತನಾಡಿ ಗುರು ಮತ್ತು ದೇವರು ಇಬ್ಬರು ಎದುರು ನಿಂತಾಗ ಗುರುಗಳಿಗೆ ಮೊದಲ ನಮಸ್ಕಾರ. ಎಂಬ ನೀತಿಯನ್ನು ವಿದ್ಯಾರ್ಥಿಗಳಿಗೆ ಗುರುವಿನ ಬಗ್ಗೆ ಒಂದು ಕವನವನ್ನು ಹೇಳಿದರು. ಮನುಷ್ಯ ಅಂತಾ ಹುಟ್ಟಿದ ಮೇಲೆ ಏನಾದರೂ ಕೈಲಾದ ಸಹಾಯ ಮಾಡಬೇಕು. ಕೆಟ್ಟದ್ದನ್ನು ಮಾಡಬಾರದು. ಅಂತದ್ದೊಂದು ನೀತಿ ಸಿದ್ದಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ .
ಈ ಶಾಲೆಯಲ್ಲಿ ಸುಮಾರು 11 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಹಾಗೂ ಪಕ್ಕದ ಶಾಲೆಯಲ್ಲಿ 25 ವರ್ಷಗಳ ಕಾಲ ಸಹ ಶಿಕ್ಷಕರಾಗಿ ಸೇವೆಯನ್ನ ಸಲ್ಲಿಸುತ್ತಾ ಬಂದಿದ್ದಾರೆ ಇವರು ಈ ಒಂದು ಶಾಲೆಯಲ್ಲಿ ಸತತ 36 ವರ್ಷಗಳ ಕಾಲ ಇಲ್ಲಿನ ಗ್ರಾಮಸ್ಥರಲ್ಲಿ ಒಳ್ಳೆಯ ಒಡನಾಟವನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳಿಗೂ ಸಹ ಅಚ್ಚುಮೆಚ್ಚಿನ ಶಿಕ್ಷಕರಾಗಿ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿ, ವಿದ್ಯಾರ್ಥಿಗಳಿಗೆ ಬೇಕಾದಂತಹ ಸಾಮಗ್ರಿಗಳನ್ನು ಸ್ವತಃ ತಮ್ಮ ಸಂಬಳದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಈಗ ಇವರಿಂದ ವಿದ್ಯೆ ಕಲಿತ ವಿದ್ಯಾರ್ಥಿಗಳು ನಾಡಿನಾದ್ಯಾಂತ ಒಳ್ಳೆಯ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ಸಹ ಇವರ ಶಿಷ್ಯನಾಗಿ ಇವರಿಂದ ವಿದ್ಯೆಯನ್ನು ಕಲಿತ ವಿದ್ಯಾರ್ಥಿಯಾಗಿ ಈ ದಿನ ಈ ಶಾಲೆಯ ಸಹಶಿಕ್ಷಕ ನಾಗಿದ್ದೇನೆ ಎಂದು ಹೇಳಿದರು
ನಿವೃತ್ತ ಮುಖ್ಯೋಪಾಧ್ಯಾಯ ಧನ್ಯಕುಮಾರ್ ಮಾತನಾಡಿ. ವಿದ್ಯೆ ಬಹಳ ಮುಖ್ಯವಾದದ್ದು. ಈ ವಿದ್ಯೆಯಿಂದ ಏನು ಬೇಕಾದರೂ ಜೀವನದಲ್ಲಿ ಸಾಧಿಸಬಹುದು. ಒಂದು ಕಡೆ ಸರ್ವಜ್ಞ ಹೇಳುತ್ತಾರೆ ವಿದ್ಯೆಯುಳ್ಳ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ. ಹೇಳಿದ್ದಾರೆ ಯಾರು ವಿದ್ಯಾವಂತ ರಾಗಿರುತ್ತಾರೆ ಅವರು ಸೃಜನಶೀಲತೆ ,ಸಂಸ್ಕಾರ ಒಳ್ಳೆಯ ನಡತೆ. ಒಳ್ಳೆಯ ಗುಣಗಳನ್ನು ಬೆಳಸುತ್ತಾರೆ ಸಮಾಜ ಸೇವೆ ಮಾಡುವುದು, ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಬದುಕಬಹುದು. ಹಳ್ಳಿಯ ಭಾಷೆಯಲ್ಲಿ ಹಿರಿಯರು ಹೇಳುತ್ತಾರೆ ದುಡ್ಡೇ ದೊಡ್ಡಪ್ಪ. ವಿದ್ಯೆ ಅವರಪ್ಪ ಎಂದು ದುಡ್ಡು ಪ್ರಾಮುಖ್ಯತೆ ಅಲ್ಲ ಅದಕ್ಕಿಂತ ಹೆಚ್ಚು ವಿದ್ಯೆಯೆಂದು. ಹಣ ಆಸ್ತಿಯನ್ನು ಸಂಪಾದನೆ ಮಾಡಿದರೆ ಯಾರು ಬೇಕಾದರೂ ಕದಿಯಬಹುದು. ಆದರೆ ವಿದ್ಯೆಯನ್ನು ಕದಿಯೋಕೆ ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಸಾಧನೆ ಬಹಳ ಮುಖ್ಯ ನೀವು ನಿಮ್ಮ ತಂದೆ-ತಾಯಿಯರಿಗೆ ಗೌರವ ಮತ್ತು ವಿದ್ಯೆ ಕಲಿಸಿದ ಗುರುಗಳಿಗೂ ಒಳ್ಳೆಯ ಗೌರವ ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಸಂದರ್ಭದಲ್ಲಿ. ವಾಸವಿ ಸ್ನೇಹ ಕೂಟದ ನಿರ್ದೇಶಕರಾದ ಡಿ .ಆರ್. ರಾಧಾಕೃಷ್ಣ , ಶಿವಪ್ರಕಾಶ್ , ಶ್ರೀರಾಮ ಶೆಟ್ಟಿ, ಗೋವಿಂದರಾಜು, ಮುಖ್ಯೋಪಾಧ್ಯಾಯ ಗಿರಿರಾಜ್ ಎನ್.ಎಚ್. ಮೃತ್ಯುಂಜಯ ಕೆಎಸ್. ಶ್ರೀನಿವಾಸ್. ಮಂಜುಳ ಕೆಎಲ್.ಹನುಮಂತರಾಯಪ್ಪ, ಪಿ.ಎಸ್. ರಶೀದ್ ಖಾನಮ್. ವೆಂಕಟೇಶ್ ಕೆ. ಪದ್ಮ ಕೆ. ಮಹೇಶ್ ಟಿ. ಉಪಸ್ಥಿತರಿದ್ದರು.
ಚಿತ್ರ: ಹೊಳವನಹಳ್ಳಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ನಿವೃತ್ತ ಮುಖ್ಯ ಶಿಕ್ಷಕ ಮುಖ್ಯ ಶಿಕ್ಕರಾದ ಡಿ.ಎಸ್. ಧನ್ಯಕುಮಾರ್ ರವರು ನೋಟ್ ಬುಕ್ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಿದರು.