Advertisement

ಬಡ ಮುಸ್ಲಿಮರಿಗೆ ಆಹಾರ ಕಿಟ್‌ ವಿತರಣೆ

05:12 AM May 22, 2020 | Suhan S |

ಬಂಕಾಪುರ: ಪಟ್ಟಣದ ಅಂಜುಮನ್‌ ಏ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಹುಸೇನ ಖತೀಬ ಅವರು ರಂಜಾನ್‌ ಹಬ್ಬದ ಅಂಗವಾಗಿ 1200 ಬಡ ಮುಸ್ಲಿಂ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಕೋವಿಡ್ ವೈರಸ್‌ ನಿಯಂತ್ರಿಸಲು ಸರಕಾರ ಎರಡು ತಿಂಗಳಿನಿಂದ ದೇಶಾದ್ಯಂತ ಲಾಕ್‌ಡೌನ್‌ ವಿಧಿಸಿದ್ದು, ಬಡಬಗ್ಗರಿಗೆ ಕೆಲಸವಿಲ್ಲದೇ ಪರದಾಡುವಂತಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವತಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ವಸ್ತುಗಳ ಕಿಟ್‌ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ ತಹಮಿದ ಖಾಜಿ, ಅಯೂಬಖಾನ ಪಠಾಣ, ಖಾಜಾವ್ಹಾಸ್‌ ಜಂಗಳಿ, ಮಖ್‌ಬೂಲಹಮ್ಮದ ಲಾಲಾನವರ, ಮಹಮ್ಮದ ರಫೀಕ್‌ ಬಡಿಗೇರ, ಜಮಿರಹಮ್ಮದ ಹಲೆxವಾಲೆ, ಇಮ್ರಾನ್‌ ಖಾನ ಕನವಳ್ಳಿ, ಅಬ್ದುಲ್‌ಖಾದರ ಜಿಲಾನಿ, ಮಖಬೂಲಹಮ್ಮದ ಮಳಗಿ, ಅಮ್ಜದಖಾನ ಪಠಾಣ, ಅಬ್ದುಲ್‌ ಖಾದರ ಚಳ್ಳಾಳ, ದಾದಾಪೀರ ದೇವಗಿರಿ, ಸತ್ತರಖಾನ ಕಾಕಡ, ಮುನಾಫ್‌ ಡಾಣೆಬಾಗ ಸೇರಿದಂತೆ ಸರ್ವ ಮುತುವಲ್ಲಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next