Advertisement

ಆಹಾರ ಧಾನ್ಯ ಕಿಟ್‌ ವಿತರಣೆ

05:50 AM May 26, 2020 | mahesh |

ಚನ್ನಗಿರಿ: ಲಾಕ್‌ಡೌನ್‌ನಿಂದ ದಿನನಿತ್ಯ ದುಡಿದು ಜೀವನ ಮಾಡುವವರು ಸಂಕಷ್ಟದಲ್ಲಿದ್ದು ಅಂಥವರನ್ನು ಗುರುತಿಸಿ ಆಹಾರ ಧಾನ್ಯಗಳನ್ನು ನೀಡುತ್ತಿದ್ದೇವೆ.
ಸಂಕಷ್ಟದಲ್ಲಿರುವ ಎಷ್ಟೇ ಕುಟುಂಬಗಳಿದ್ದರೂ ಅವರಿಗೆ ನೆರವು ನೀಡಲು ಸದಾ ಸಿದ್ಧನಿದ್ದೇನೆ ಎಂದು ಪುರಸಭೆ ಸದಸ್ಯ ಗಾದ್ರಿ ರಾಜು ಹೇಳಿದರು.

Advertisement

ತಾಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಇಡೀ ದೇಶವೇ
ಕೋವಿಡ್ ಸಂಕಷ್ಟದಲ್ಲಿ ಸಿಲುಕಿದೆ. ಈ ವೇಳೆ ಕೂಲಿ ಕಾರ್ಮಿಕರು, ಅಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಸೇರಿದಂತೆ ಹಲವಾರು ವರ್ಗದವರು ಪ್ರತಿನಿತ್ಯ ದುಡಿದು ತಿನ್ನುವ ವರ್ಗದವರು. ಅವರು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂಥವರಿಗೆ ಸಹಾಯ ಮಾಡಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಜ್ಜಾಗಬೇಕು. ಆಗ ಮಾತ್ರ ಕೊರೊನಾ ನಿರ್ಮೂಲನೆ ಮಾಡಲು ಸಾಧ್ಯ ಎಂದರು. ಬುಳ್ಳುಸಾಗರದ ನಾಗರಾಜ್‌, ರಂಗನಾಥ್‌, ಪಾಟೀಲ್‌, ಮಂಜುನಾಥ್‌, ಚಿತ್ರಲಿಂಗಪ್ಪ, ಹರೀಶ್‌, ಗುರು, ರುದ್ರಪ್ಪ, ಹೇಮಂತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next