Advertisement

ವಿವಿಧೆಡೆ ಆಹಾರ ಧಾನ್ಯ ಕಿಟ್‌ ವಿತರಣೆ

08:30 PM Jun 06, 2021 | Girisha |

ಮುದ್ದೇಬಿಹಾಳ: ಸಾಕಷ್ಟು ಜನರಲ್ಲಿ ಹಣವಿದ್ದರೂ ಸೇವೆ ಮಾಡುವ ಮನೋಭಾವ ಇರುವುದು ಕೆಲವರಲ್ಲಿ ಮಾತ್ರ. ಸ್ವಲ್ಪ ಸಹಾಯ ಮಾಡಿ ಹೆಚ್ಚು ಪ್ರಚಾರ ಪಡೆಯುವವರೇ ಎಲ್ಲೆಡೆ ಕಂಡು ಬರುತ್ತಿದ್ದಾರೆ. ಇಂಥವರ ನಡುವೆ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌. ಎಸ್‌. ಪಾಟೀಲ ಜೋಡಿ ಮಾದರಿ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ. ಕುಂಬಾರ ವಕೀಲರು ಹೇಳಿದರು.

Advertisement

ಅಡವಿಸೋಮನಾಳ ಪಿಎಚ್‌ ಸಿಯಲ್ಲಿ ಶನಿವಾರ ದೇಸಾಯಿ, ಪಾಟೀಲ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರಿಗೆ ದಿನಬಳಕೆ ಸಾಮಗ್ರಿಗಳ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಭುಗೌಡ ದೇಸಾಯಿ ಮಾತನಾಡಿ, 4-5 ದಿನಗಳಿಂದ ತಾಳಿಕೋಟೆ, ತಮದಡ್ಡಿ, ಕೊಣ್ಣೂರು ಪಿಎಚ್‌ ಸಿಗಳಲ್ಲಿ ಕಿಟ್‌ ನೀಡಿದ್ದು ಮುಂದಿನ ದಿನಗಳಲ್ಲಿ ನಾಲತವಾಡ ಸಿಎಚ್‌ಸಿ, ತಂಗಡಗಿ, ಕಾಳಗಿ, ಢವಳಗಿ ಪಿಎಚ್‌ಸಿ, ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಕಿಟ್‌ ವಿತರಿಸಲಾಗುತ್ತದೆ.

ಅಂದಾಜು 800 ಕಿಟ್‌ ಸಿದ್ಧಪಡಿಸಿದ್ದು ಅಗತ್ಯ ಬಿದ್ದರೆ ಹೆಚ್ಚಿಸುವುದಾಗಿ ಹೇಳಿದರು. ಆರ್‌.ಎಸ್‌. ಪಾಟೀಲ ಕೂಚಬಾಳ ಮಾತನಾಡಿ, ಕೊರೊನಾ ವಾರಿಯರ್‌ ಗಳ ಸೇವೆ ಅನನ್ಯವಾದದ್ದು. ಎಷ್ಟು ಜನ್ಮ ಎತ್ತಿದರೂ ಇವರ ಋಣ ತೀರಿಸುವುದು ಸಾಧ್ಯವಿಲ್ಲ ಎಂದರು. ಪಿಎಚ್‌ಸಿ ವೈದ್ಯಾ  ಧಿಕಾರಿ ಡಾ| ಸಿ.ಎಚ್‌. ನಾಗರಬೆಟ್ಟ ಮಾತನಾಡಿದರು.

ಬಿಜೆಪಿ ಧುರೀಣರಾದ ವಿಕ್ರಮ್‌ ಓಸ್ವಾಲ್‌, ದೇವೇಂದ್ರ ವಾಲೀಕಾರ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಬಿ.ಬಿ. ಭೋವಿ, ನಿಂಗಣ್ಣ ರಾಮೋಡಗಿ, ಬಿಎಂಟಿಸಿ ನಿರ್ದೇಶಕ ಶ್ರೀಧರ ಕಲ್ಲೂರ, ಢವಳಗಿ ಗ್ರಾಪಂ ಸದಸ್ಯ ಸುರೇಶ ಪಾಟೀಲ, ಅಡವಿಸೋಮನಾಳ ಗ್ರಾಪಂನ ಕೆಲ ಸದಸ್ಯರು, ಪಿಡಿಒ ಎಸ್‌. ಕೆ. ಹಡಪದ ಇದ್ದರು. ಸಿದ್ದು ಹೆಬ್ಟಾಳ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next