ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯಲ್ಲಿ ಶಂಭೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಂದಿರುವ ಒಂದು ಲಕ್ಷ ಅನುದಾನವನ್ನು ಜಿಲ್ಲಾ ನಿರ್ದೇಶಕ ದಿನೇಶ್ ರವರು ಸಂಘದ ಅದ್ಯಕ್ಷರಿಗೆ ಚೆಕ್ ವಿತರಿಸಿದರು.
ತಾಲ್ಲೂಕಿನ ಶಂಭೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚೆಕ್ ವಿತರಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅನೋನ್ಯ ಭಾವನೆ ಇದೆ. 40 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಹಾಲು ಉತ್ಪಾದಕರ ಸಂಘಕ್ಕೆ ಯಾವುದೇ ಉತ್ಪತ್ತಿಗಳಿರಲಿಲ್ಲ.ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಕೆಎಂಎಪ್ ಜೊತೆಯಲ್ಲಿ ಅಲ್ಲಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಿರ್ಮಾಣ ಮಾಡಿಕೊಂಡು, ಹಾಲು ಉತ್ಪಾದಕರಸಹಕಾರ ಸಂಘದ ಅಭಿವೃದ್ದಿಗಾಗಿ, ಶ್ರೀ ಯುತ ಪೂಜ್ಯ ವಿರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ಹಾಲು ಉತ್ಪಾದಕರ ಸಂಘಕ್ಕೆ ನೆರವನ್ನು ನೀಡುತ್ತಿದ್ದಾರೆ. ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಹೈನುಗಾರಿಕೆಯಿಂದ ಸ್ವ ಉದ್ಯೋಗದ ಜೊತೆ ಲಕ್ಷಾಂತರ ಕುಟುಂಬಗಳು ತಮ್ಮ ಬದುಕನ್ನು ಕಟ್ಟಿ ಕೊಂಡಿವೆ. ಇದರಿಂದ ಕುಟುಂಬದ ಆರ್ಥಿಕ ಮಟ್ಟ , ಮಕ್ಕಳ ಶಿಕ್ಷಣ ಮಟ್ಟ, ಸಾಮಾಜಿಕವಾಗಿ ಸದೃಢ ಬದುಕನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಹೈನುಗಾರಿಕೆ ಮಾಡುವ ಕುಟುಂಬಗಳಿಗೆ 10 ಸಾವಿರದಿಂದ 2 ಲಕ್ಷದವರೆಗೆ ಸಾಲವನ್ನು ಸಂಸ್ಥೆಯ ಪ್ರಗತಿ ನಿಧಿಯಿಂದ ಯ್ಯೂನಿಯನ್ ಬ್ಯಾಂಕ್ ನಿಂದ ನೀಡುತ್ತಿದ್ದೇವೆ. ಎಂದರು.
ಸಂಸ್ಥೆಯ ಯೋಜನಾಧಿಕಾರಿ ಬಾಲಕೃಷ್ಣ.ಎಮ್ ಮಾತನಾಡಿ ಸಂಘದಲ್ಲಿ 230 ಸದಸ್ಯರಿಗೆ ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದಡಿಯಲ್ಲಿ 1 ಕೋಟಿ 30 ಲಕ್ಷ ಮರಣ ಸಾಂತ್ವಾನ ಧನ ನೀಡಲಾಗಿದೆ.ಹಾಗೂ ಆರೋಗ್ಯ ರಕ್ಷಾ77 ಕ್ಲೈಮ್ ಗಳಿಗೆ 6 ಲಕ್ಷ 65 ಸಾವಿರ ರೂಗಳನ್ನು ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗಿದೆ. ಮತ್ತು ತಾಲ್ಲೂಕಿನ ಸ್ವಸಹಾಯ ಸಂಘಗಳಿಗೆ2 ಕೋಟಿ9 ಲಕ್ಷ ಲಾಭಾಂಶವನ್ನು ಪ್ರಗತಿ ಬಂದು ಯೋಜನೆಯಡಿ ವಿತರಿಸಲಾಗಿದೆ. ಕ್ಷೇತ್ರದ ಪ್ರಸಾದ ಮನೆ ಬಾಗಿಲಿಗೆ ಬಂದಾಗ, ಅದನ್ನು ಸಮರ್ಪಕ ಬಳಕೆ ಮಾಡಿಕೊಂಡು ಮುಂದಿನ ನಮ್ನ ಜೀವನ ಉತ್ತಮ ವಾಗಿ ನಿರ್ವಹಣೆಯಾಗಲಿ ಅಂತ ಬೇಡಿಕೆಯೊಂದಿಗೆ ಹಾಗೂ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ದೇವರ ಅನುಗ್ರಹ ನಮ್ಮೆಲ್ಲರ ಮೇಲೆ ಇರಲಿದೆ.ಈ ಒಂದು ಲಕ್ಷ ಅನುದಾನದ ಮಂಜೂರಾತಿ ಪತ್ರವನ್ನು ಸಂಘದ ಅದ್ಯಕ್ಷ ರಿಗೆ ನೀಡುತ್ತಿದ್ದೇವೆ ಎಂದರು .
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಸಂಸ್ಥೆಯ ಮೇಲ್ವಿಚಾರಕರಾದ ಸಂದೇಶ್ ಸೇವಾ ಪ್ರತಿ ನಿಧಿ ಆಶಾ, ಮೋಹನ್ ಕುಮಾರಿ,ಅರುಣಾ ಸಂಘದ ಅದ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಕಾತ್ಯಾಯಿನಿ ನಿರ್ದೇಶಕ ಶ್ರೀರಾಮ ರೆಡ್ಡಿ ಸೇರಿದಂತೆ ಇತರೆ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಚಿತ್ರ; ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಶಂಭೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ಒಂದು ಲಕ್ಷದ ಅನುದಾನ ಪತ್ರವನ್ನು ಜಿಲ್ಲಾ ನಿರ್ದೇಶಕ ದಿನೇಶ್ ರವರು ಸಂಘದ ಅದ್ಯಕ್ಷರಿಗೆ ನೀಡಿದ ಸಂಧರ್ಭ, ತಾಲ್ಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಾಗೂ ಮೇಲ್ವಿಚಾರಕರು ಹಾಜರಿದ್ದರು.