Advertisement

82 ಲಕ್ಷ ಆಹಾರ ಪೊಟ್ಟಣ, 22 ಲಕ್ಷ ದಿನಸಿ ಕಿಟ್‌ ವಿತರಣೆ

11:41 AM Apr 23, 2020 | Team Udayavani |

ಬೆಂಗಳೂರು: ಲಾಕ್‌ಡೌನ್‌ ಜಾರಿಯಾದ ಮಾ.24ರಿಂದ ಈವರೆಗೆ ಬಿಜೆಪಿ ವತಿಯಿಂದ ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಒಟ್ಟು 82.23 ಲಕ್ಷ ಆಹಾರ ಪೊಟ್ಟಣ ಹಾಗೂ 22.13 ಲಕ್ಷ ದಿನಸಿ ಕಿಟ್‌ ವಿತರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌  ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಾ.24ರಿಂದಲೂ ಪಕ್ಷದ ವತಿಯಿಂದ ನಾನಾ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ 311 ಮಂಡಗಳ, 58, 000 ಮತಗಟ್ಟೆಗಳಲ್ಲಿ ಈವರೆಗೆ 82,23,048 ಆಹಾರ ಪೊಟ್ಟಣ ವಿತರಿಸಲಾಗಿದೆ. ಕಾರ್ಯಕರ್ತರ ಮನೆಗಳಿಂದಲೇ ಆಹಾರ ಸಿದ್ಧಪಡಿಸಿ ಬಡ,
ಅಸಹಾಯಕ ಜನರಿಗೆ ವಿತರಿಸಿರುವುದು ವಿಶೇಷ  ಎಂದರು. ಅಗತ್ಯವಿದ್ದರಿಗೆ 22,13,672 ದಿನಸಿ ಕಿಟ್‌, 5 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಾಸ್ಕ್ ವಿತರಣೆ: ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರ ಮನೆಗಳಿಂದಲೇ 34,35,902 ಮಾಸ್ಕ್ ಗಳನ್ನು ತಯಾರಿಸಿ ವಿತರಿಸಲಾಗಿದೆ. ವಿಶೇಷವಾಗಿ ಮಹಿಳಾ ಮೋರ್ಚಾ
ಕಾರ್ಯಕರ್ತೆಯರು ದೊಡ್ಡ ಪ್ರಮಾಣದಲ್ಲಿ ಮಾಸ್ಕ್ಗಳನ್ನು ತಯಾರಿಸಿ ವಿತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರಾಜ್ಯದ 7,41,406 ಮಂದಿ ಪ್ರಧಾನ ಮಂತ್ರಿ ಸಹಾಯ
ನಿಧಿ (ಪಿಎಂ ಕೇರ್)ಗೆ ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದರು.

3.32 ಲಕ್ಷ ಮಂದಿಗೆ ನೆರವು:
ಸಹಾಯವಾಣಿಗೆ (ಬಿಜೆಪಿ ಸಹಾಯವಾಣಿ- 080- 6832 4040/ ವಾಟ್ಸ್‌ಆ್ಯಪ್‌ ಸಂಖ್ಯೆ- 87225 57733 ) 3,45,213 ಮಂದಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. 3,32,860
ಮಂದಿಗೆ ಔಷಧ, ದಿನಸಿ ಕಿಟ್‌, ಆಹಾರ ಪೊಟ್ಟಣ, ಮಾಸ್ಕ್ ವಿತರಿಸಲಾಗಿದೆ. ಈವರೆಗೆ ಪಕ್ಷದ 6,85,813 ಕಾರ್ಯಕರ್ತರು ನಾನಾ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಸ್ವಾರ್ಥ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾದರಾಯನಪುರದಲ್ಲಿ ಕೋವಿಡ್ ವಾರಿಯರ್ಗೆ ಸಹಕಾರ ನೀಡದೆ ಕೋವಿಡ್ ವೈರಸ್‌ ಮಿತ್ರನಂತೆ ವರ್ತಿಸುತ್ತಿ ರುವ ಶಾಸಕ ಜಮೀರ್‌ ಅಹಮ್ಮದ್‌ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕು.
●ಎನ್‌.ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ

Advertisement

ಮುಖ್ಯಾಂಶಗಳು
82,23,048 ಆಹಾರ ಪೊಟ್ಟಣ ವಿತರಣೆ
22,13,672 ದಿನಸಿ ಕಿಟ್‌ ಹಂಚಿಕೆ
34,35,902 ಮಾಸ್ಕ್ ವಿತರಣೆ

Advertisement

Udayavani is now on Telegram. Click here to join our channel and stay updated with the latest news.

Next