ವಾಡಿ: ಪೌರ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸುವ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಪಟ್ಟಣದ ಪುರಸಭೆ ಆಡಳಿತ 68ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪಟ್ಟಣದಾದ್ಯಂತ ವಿವಿಧೆಡೆಸಭೆ ಸಮಾರಂಭಗಳು ನಡೆದು ಗಣರಾಜ್ಯೋತ್ಸವದ ಗುಣಗಾನ ನಡೆದರೆ, ಪುರಸಭೆಯಲ್ಲಿ ಗಣರಾಜ್ಯೋತ್ಸವ ಕುರಿತ ಗಣ್ಯರ ಮಾತುಗಳಿಗೆ ಬರವಿತ್ತು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದಪುರಸಭೆ ಅಧ್ಯಕ್ಷ ಭಾಗವತ ಸುಳೆ, ಮಹಾತ್ಮಾಗಾಂಧೀಜಿ ಹಾಗೂ ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಮುಖ್ಯಾಧಿಕಾರಿಶಂಕರ ಡಿ.ಕಾಳೆ ಸೇರಿದಂತೆ ಪುರಸಭೆ ಸದಸ್ಯರಾಗಲಿ ಗಣರಾಜ್ಯೋತ್ಸವದ ಉದ್ದೇಶ ಮೆಲಕು ಹಾಕದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಕಾರ್ಯಕ್ರಮದಲ್ಲಿ 50 ಪೌರಕಾರ್ಮಿಕರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಹಾಗೂ ವಿವಿಧ ಸುರûಾ ಸಲಕರಣೆ ವಿತರಿಸಲಾಯಿತು. ಅಲ್ಲದೇ ಉನ್ನತ ವ್ಯಾಸಾಂಗದ 85 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೇ. 24.10ರ ಎಸ್‌ಎಫ್‌ಸಿ ಯೋಜನೆಯಡಿ 6ಲಕ್ಷ ರೂ. ಶೈಕ್ಷಣಿಕ ಪ್ರೋತ್ಸಾಹ ಧನ ನೀಡಲಾಯಿತು.
ಕಳೆದಸಾಲಿನ ಹಾಗೂ ಪ್ರಸಕ್ತ ಸಾಲಿನ ಶೇ. 24.10ರ ಅನುದಾನದಡಿ ಸೌಲಭ್ಯನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹಲವು ಸೌಲಭ್ಯಗಳು ಸ್ಥಳೀಯರಿಗಾಗಿ ಕಾದಿವೆ ಎಂದು ಮುಖ್ಯಾಧಿಕಾರಿ ಶಂಕರ ಡಿ. ಕಾಳೆ ಹೇಳಿದರು. ಸಮುದಾಯ ಸಂಘಟನಾಧಿಕಾರಿ ಕಾಶೀನಾಥ ಧನ್ನಿ, ಕಂದಾಯ ಅಧಿಕಾರಿ ಪಂಕಜಾ, ಕಿರಿಯ ಅಭಿಯಂತರ ಅಶೋಕ ಪುಟ್‌ಪಾಕ್, ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ,
ಮನೋಜ ಹಿರೋಳಿ, ಪುರಸಭೆ ಸದಸ್ಯರಾದ ಗಿರಿಮಲ್ಲಪ್ಪ ಕಟ್ಟಿಮನಿ, ಮಲ್ಲೇಶಪ್ಪ ಚುಕ್ಕೇರ, ಅಂಬಾದಾಸ ಜಾಧವ, ಪ್ರಕಾಶ ನಾಯಕ, ಅಶೋಕ ಪವಾರ, ಮುಖಂಡರಾದ ಇಂದ್ರಜೀತ ಸಿಂಗೆ, ಹರಿ ಗಲಾಂಡೆ, ಶರಣಪ್ಪ ವಾಡೇಕರ, ಹಣಮಂತ ಹೇರೂರ, ಸಿದ್ದು ಪಂಚಾಳ, ದೇವಿಂದ್ರ ಕರದಳ್ಳಿ, ಭಶೀರ ಖುರೇಶಿ, ಶಿವಶಂಕರ ಕಾಶೆಟ್ಟಿ, ಹಾಜಪ್ಪ ಲಾಡ್ಲಾಪುರ, ಸುಧಾಕರ ಗಾಯಕವಾಡ, ಕೆ.ವಿರೂಪಾಕ್ಷಿ ಪಾಲ್ಗೊಂಡಿದ್ದರು.