Advertisement

ರೈತರಿಗೆ, ಮಹಿಳೆಯರಿಗೆ ಸಾಲ ವಿತರಿಸಿ

06:23 AM May 18, 2020 | Lakshmi GovindaRaj |

ಬಾಗೇಪಲ್ಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ತಾಲೂಕಿನಲ್ಲಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳ ರಚನೆ ಹಾಗೂ ರೈತರಿಗೆ ಸಾಲ ವಿತರಣೆಯಲ್ಲಿ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಆದ್ಯತೆ  ನೀಡಬೇಕೆಂದು ಶಾಸಕ ಎಸ್‌.ಎನ್‌. ಸುಬ್ಟಾರೆಡ್ಡಿ ತಿಳಿಸಿದರು.

Advertisement

ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶನಿವಾರ ಡಿಸಿಸಿ ಬ್ಯಾಂಕ್‌ ವತಿಯಿಂದ ರೈತರಿಗೆ ಕೆಸಿಸಿ ಸಾಲದ ಚೆಕ್‌ ವಿತರಿಸಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳು ಸ್ತ್ರೀಶಕ್ತಿ  ಗುಂಪುಗಳು ರಚನೆ ಮಾಡುವಲ್ಲಿ ಸಫಲವಾಗಿ ರುವಾಗ ಸರ್ಕಾರಿ ಸ್ವಾಮ್ಯದ ಸಹಕಾರ ಸಂಘಗಳು ಸ್ತ್ರೀಶಕ್ತಿ ಸಂಘಗಳನ್ನು ರಚನೆ ಮಾಡಲು ತೊಂದರೆ ಏನು?. ರೈತರಿಗೆ ನೆರವಾಗುವುದನ್ನು ಬಿಟ್ಟು ಸಾಲ ವಿತರಣೆಯಲ್ಲಿ ನಿರ್ಲಕ್ಷ್ಯ ಮನೋಭಾವ ತಾಳಿರುವುದು ಎದ್ದು ಕಾಡುತ್ತಿದೆ.

ಹಣ ನೀಡಲು ಬ್ಯಾಂಕ್‌ ಸಿದ್ಧವಾಗಿದ್ದರೂ ಆಸಕ್ತಿ ತೋರುತ್ತಿಲ್ಲ. ಸ್ತ್ರೀಶಕ್ತಿ ಗುಂಪುಗಳನ್ನು ರಚನೆ ಮಾಡಲು ನಿಮ್ಮ ಸಮಸ್ಯೆ ಏನು ಎಂದು ಪ್ರಶ್ನಿಸಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ  .ವೆಂಕಟಶಿವಾರೆಡ್ಡಿ ಮಾತನಾಡಿ, ರೈತರು ಸಾಲ ಪಡೆಯಬೇಕಾದರೆ ಡಿಸಿಸಿ ಬ್ಯಾಂಕ್‌ಗೆ ಬರುತ್ತಾರೆ. ಆದರೆ ಠೇವಣಿ ಹಾಗೂ ಹಣ ಕಾಸಿನ ವ್ಯವಹಾರ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ ಗಳನ್ನು ಆಶ್ರಯಿಸುತ್ತಾರೆ.

ಸರ್ಕಾರ ಸ್ತ್ರೀಶಕ್ತಿ ಗುಂಪುಗಳಿಗೆ ಮೂರು ಲಕ್ಷ ರೂ.ಬಡ್ಡಿ ರಹಿತ ಸಾಲ ನೀಡುತ್ತದೆ. ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿ ದರು. ಈ ಸಂದರ್ಭದಲ್ಲಿ 585 ರೈತರಿಗೆ 4.53 ಕೋಟಿ ರೂ. ಕೆಸಿಸಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್‌ ವ್ಯವ ಸ್ಥಾಪಕ ಸಿ.ಎನ್‌.ಚೇತನ್‌,  ಮೇಲ್ವಿಚಾರಕ ಲಿಂಗಾ ರಾಜು, ಜಿಪಂ ಸದಸ್ಯ ಬೂರಗಡುಗು ನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್‌.ನರೇಂದ್ರಬಾಬು, ಕೆಡಿಪಿ ಸದಸ್ಯ ಅಮ ರನಾಥರೆಡ್ಡಿ, ಸೋಮನಾಥಪುರ ವಿಎಸ್‌ಎಸ್‌  ಎನ್‌ ಕಾರ್ಯದರ್ಶಿ ಸಿ.ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next