Advertisement

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

10:39 PM Jan 13, 2025 | Team Udayavani |

ಉಡುಪಿ: ವೃದ್ಧಾಪ್ಯ ಪಿಂಚಣಿ ವಂಚಿತೆ ಅಶಕ್ತ ಮಹಿಳೆಯ ಕುಟುಂಬಕ್ಕೆ ಸಮಾಜ ಸೇವಕ ವಿಶು ಶೆಟ್ಟಿ ಆಹಾರ ದಿನಸಿ ಸಾಮಗ್ರಿ ಹಾಗೂ ಔಷಧ ನೀಡಿ ನೆರವಾಗಿದ್ದಾರೆ.

Advertisement

ಪಡುಬಿದ್ರಿ ಹೆಜಮಾಡಿಯ ಪಡುಕರೆಯ ನಿವಾಸಿಗಳಾದ ಜನಾರ್ದನ ಆಚಾರ್‌ ಹಾಗೂ ಲೀಲಾವತಿ ವೃದ್ಧ ದಂಪತಿಯಲ್ಲಿ ಪತಿ ಅಸ್ತಮಾದಿಂದ ಬಳಲುತ್ತಿದ್ದರು. ಜೀವನ ನಿರ್ವಹಣೆಗಾಗಿ ಸರಕಾರ ನೀಡುವ ವೃದ್ಧಾಪ್ಯ ವೇತನವನ್ನೇ ಅವರು ಅವಲಂಬಿಸಿದ್ದರು.

ಕಳೆದೆರಡು ತಿಂಗಳಿನಿಂದ ಪಿಂಚಣಿ ಬಾರದೆ ದಂಪತಿ ಕಂಗಲಾಗಿದ್ದರು. ಅನಾಥಾಶ್ರಮಕ್ಕೆ ಸೇರಲು ದಂಪತಿ ನಿರಾಕರಿಸಿದ ಹಿನ್ನಲೆಯಲ್ಲಿ ಮನೆಗೆ ಆಹಾರ ಸಾಮಗ್ರಿ ಹಾಗೂ ಔಷಧವನ್ನು ನೀಡಲಾಯಿತು. ಸರಕಾರ ನೀಡುವ ಉಚಿತ ಅಡುಗೆ ಅನಿಲ ಸೌಲಭ್ಯ ನೀಡುವಂತೆ ದಂಪತಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.