Advertisement
ಮಸೂದೆ ಅಂಗೀಕಾರವಾಗಿರುವುದು ಮಾತ್ರವಲ್ಲದೆ ಕೆಎಸ್‌ಒಯು ಹೊರತುಪಡಿಸಿ ಬೇರೆ ಯಾವುದೇ ವಿ.ವಿ.ಯಿಂದ ದೂರಶಿಕ್ಷಣ ನೀಡಬಾರದು ಮತ್ತು ಹೊಸದಾಗಿ ದಾಖಲಾತಿ ಮಾಡಿಕೊಳ್ಳಬಾರದು ಎಂಬ ಸುತ್ತೋಲೆಯನ್ನು ಮಂಗಳೂರು ವಿ.ವಿ. ದೂರ ಶಿಕ್ಷಣ ಕೇಂದ್ರ ಸಹಿತ ವಿವಿಧ ವಿ.ವಿ.ಗಳಿಗೆ ಒಂದು ವರ್ಷ ಹಿಂದೆಯೇ ನೀಡಲಾಗಿದೆ.
ಮಂಗಳೂರು ವಿ.ವಿ. ದೂರ ಶಿಕ್ಷಣ ಕೇಂದ್ರದಡಿ ಪ್ರತೀ ವರ್ಷ ಅಂದಾಜು 5ರಿಂದ 6 ಸಾವಿರದಷ್ಟು ವಿದ್ಯಾರ್ಥಿಗಳು ದೂರಶಿಕ್ಷಣ ಪಡೆಯುತ್ತಾರೆ. ಪ್ರಸ್ತುತ ಬಿಎ, ಬಿಕಾಂ, ಎಂಎ, ಎಂಕಾಂ ಹಾಗೂ ಬಿಎಡ್ ಶಿಕ್ಷಣ ಸೇರಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬಿಎಡ್‌ನ ಸುಮಾರು 500 ವಿದ್ಯಾರ್ಥಿಗಳು ಇದ್ದಾರೆ. ಬಿಎಡ್‌ನಲ್ಲಿ ದೂರ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಸರಕಾರದ ಹೊಸ ನಿಯಮದಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ನಾಲ್ಕು ಕೇಂದ್ರಗಳು
ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳು ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಮಡಿಕೇರಿ ಮತ್ತು ಉಡುಪಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೆಎಸ್‌ಒಯುವಿನ ಮಂಗಳೂರು ಪ್ರಾದೇಶಿಕ ಕೇಂದ್ರ ಚಿಲಿಂಬಿಯಲ್ಲಿದೆ.
Related Articles