ಬಂಟ್ವಾಳ: ಪರಿಸರವನ್ನು ಬೇಕಾಬಿಟ್ಟಿಯಾಗಿ ಬಳಸಿದ ಪರಿಣಾಮ ಇಂದು ಬರ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಅಭಿಪ್ರಾಯಪಟ್ಟರು.
ಅವರು ಜು. 5ರಂದು ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೇರು ನಿಗಮದ ಕಾರ್ಯದರ್ಶಿ ನಾಗರಾಜ್, ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮಾತನಾಡಿ ಪರಿಸರ ಉಳಿಸುವುದು ಎಂದರೆ ಕೇವಲ ಗಿಡ ನೆಡುವುದು ಮಾತ್ರವಲ್ಲ ಪರಿಸರ ಸ್ವತ್ಛತೆಯನ್ನು ಕೂಡ ಮಾಡಬೇಕು ಎಂದು ಹೇಳಿದರು.ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಜನರಲ್ ಮ್ಯಾನೇಜರ್ ಸದಾಶಿವ ಭಟ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾಮಾಜಿಕ ಸೇವಾಕರ್ತ ನಾರಾಯಣ ಭಟ್, ಶಾಲಾ ಸಂಚಾಲಕ ಮೊಹಮ್ಮದ್ ಅಲಿ, ಕಾರ್ಯದರ್ಶಿ ಬಿ. ಎ. ಮೊಹಮ್ಮದ್, ಶಾಲಾ ಸಮಿತಿ ಅಧ್ಯಕ್ಷ ಬಿ.ಎ. ಸುಲೈಮಾನ್, ಖಜಾಂಚಿ ಬಿ.ಎಚ್.ಬಿ. ಸಾದಿಕ್, ಶಾಲಾಡಳಿತ ಮಂಡಳಿ ಸದಸ್ಯ ರಿಯಾಜ್ ಹುಸೈನ್, ಪಿಟಿಎ ಅಧ್ಯಕ್ಷ ಶಬೀರ್ ಅಹ್ಮದ್, ಪುರಸಭಾ ಸದಸ್ಯ ಮೊನಿಶ್ ಅಲಿ, ಮಸೀದಿ ಮಾಜಿ ಮುದರ್ರಿಸ್ ಅನ್ಸಾರಿ ಫೈಝಿ, ಕೆ.ಜಿ. ವಿಭಾಗದ ಮುಖ್ಯ ಶಿಕ್ಷಕಿ ಮಮತಾ ಸುವರ್ಣ, ಮಸೀದಿ ಅಧ್ಯಕ್ಷ ರಹಿಮಾನ್, ಕಾರ್ಯದರ್ಶಿ ಇಸ್ಮಾಯಿಲ್ ಉಪಸ್ಥಿತರಿದ್ದರು.
ಪ್ರಾಥಮಿಕ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೆಟಿಲ್ಡಾ ಸ್ವಾಗತಿಸಿ, ವಿದ್ಯಾರ್ಥಿನಿ ನಬ್ಲಾ ಜಿ. ಎಂ. ವಂದಿಸಿದರು. ವಿದ್ಯಾರ್ಥಿನಿ ಆಸೀಫಾ ಕಾರ್ಯಕ್ರಮ ನಿರ್ವಹಿಸಿದರು.