ಕಾಸರಗೋಡು: ರಾಜಕೀಯ ಪಕ್ಷಗಳ ಧ್ವಜದ ವರ್ಣಗಳನ್ನು ನೋಡದೆ ಹಿಂದೂಗಳ ಆಪತ್ಕಾಲದಲ್ಲಿ ಒಂದಾಗುವವನೇ ನಿಜವಾದ ಹಿಂದೂ. ಆತನಿಂದ ಮಾತ್ರ ಹಿಂದೂ ಸಮಾಜವನ್ನು ಉಳಿಸಲು ಸಾಧ್ಯ ಎಂದು ಕಾಸರಗೋಡು ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಾಲಕ್ ದಿನೇಶ್ ಮಡಪ್ಪುರ ಅವರು ಹೇಳಿದರು.
ಅವರು ಕಾಸರಗೋಡು ತಾಲೂಕು ಹಿಂದೂ ಐಕ್ಯ ವೇದಿಕೆ ಕಾರ್ಯಕರ್ತರ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಮ್ಮ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಲು ಹಿಂದೂ ಐಕ್ಯ ವೇದಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆಯಿತ್ತರು.
ಕಾಸರಗೋಡು ತಾಲೂಕು ಹಿಂದೂ ಐಕ್ಯವೇದಿಕೆ ರಕ್ಷಾಧಿಕಾರಿ ಬ್ರಹ್ಮಶ್ರೀ ಕೇಶವ ಆಚಾರ್ಯ ಪುರೋಹಿತ್ ಅವರು ಇಲ್ಲಿ ಪ್ರಜ್ವಲನೆಗೊಂಡ ದೀಪದ ಹಾಗೆ ಹಿಂದೂ ಐಕ್ಯ ವೇದಿಕೆಯು ಪ್ರಜ್ವಲಿಸಲಿ ಎಂದು ಅನುಗ್ರಹಿಸಿದರು. ಮಹಿಳಾ ಐಕ್ಯ ವೇದಿಕೆ ಜಿಲ್ಲಾಧ್ಯಕ್ಷೆ ಸತಿ ಕೋಡೋತ್ ಮಾತನಾಡಿದರು.
ಜಿಲ್ಲಾ ಕೋಶಾಧಿಕಾರಿ ವಾಮನ ಆಚಾರ್ಯ ಬೋವಿಕ್ಕಾನ ಅವರು ತಾಲೂಕಿನ ನೂತನ ಸಮಿತಿಯನ್ನು ಘೋಷಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ.ರಾಜಿ ಬಗ್ಗೆ ಸಂಘಟನೆಯ ಬಗ್ಗೆ ವಿವರಿಸಿದರು. ತಾಲೂಕಿನ ನೂತನ ಸಮಿತಿಯಲ್ಲಿ ಬ್ರಹ್ಮಶ್ರೀ ಪುರೋಹಿತ ಕೇಶವ ಆಚಾರ್ಯ(ರಕ್ಷಾಧಿಕಾರಿ), ತಾರಾನಾಥ್ ಮಧೂರು(ಅಧ್ಯಕ್ಷ), ಮಧು ಚಂದ್ರ ಮಾನ್ಯ(ಉಪಾಧ್ಯಕ್ಷ), ವಿವೇಕ್ ಮಾನ್ಯ(ಪ್ರಧಾನ ಕಾರ್ಯದರ್ಶಿ), ಬಾಬು ಎನ್, ಸುರೇಶ್ ಬಾಬು (ಕಾರ್ಯದರ್ಶಿ), ಚಂದ್ರನ್ ಅಡೂರು(ಕೋಶಾಧಿಕಾರಿ), ಶೇಖರ ಮಣಿಯೂರು, ರಾಜು ಪಾಯಿಚಾಲ್, ರಮೇಶ್ ಕೆ.ಕೆ.ಪುರ, ಪ್ರಕಾಶ್ ಅಡೂರು (ಸದಸ್ಯರು), ನಗರಸಭೆ ಕೌನ್ಸಿಲರಾಗಿ ಗಂಗಾಧರನ್, ವಿಷ್ಣು ಆಚಾರ್ಯ ಚುನಾಯಿತರಾದು.
ತಾರಾನಾಥ್ ಅಧ್ಯಕ್ಷತೆ ವಹಿಸಿದರು. ಸುರೇಶ್ ಬಾಬು ಸ್ವಾಗತಿಸಿದರು. ವಿವೇಕ್ ಮಾನ್ಯ ವಂದಿಸಿದರು.