Advertisement
ಸರಕಾರ ರಚನೆಯಾಗಿ ಎಂಟು ತಿಂಗಳ ಬಳಿಕ ಅಳೆದು-ತೂಗಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ದ್ದರೂ ಜಟಾಪಟಿ ಮುಂದುವರಿದಿದೆ. ಸಾಲದ್ದಕ್ಕೆ ನೇಮಕಾತಿಯಲ್ಲಿ ತಾಂತ್ರಿಕ ಲೋಪಗಳೂ ಆಗಿವೆ.
Related Articles
ಈಗಾಗಲೇ ಶಾಂತ್ ತಮ್ಮಯ್ಯ ಅಧ್ಯಕ್ಷರಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ನರೇಂದ್ರಸ್ವಾಮಿ ಅವರಿಗೆ ನೀಡಿ ಎಡವಟ್ಟು ಮಾಡಿದ್ದ ಸರಕಾರ, ನಿಗಮ-ಮಂಡಳಿ ಪಟ್ಟಿಯಲ್ಲಿ ಡಿಸಿಎಂ ರಾಜಕೀಯ ಸಲಹೆಗಾರ ಸ್ಥಾನ ಸೇರಿಸಿ ಶ್ರೀನಿವಾಸ್ ಮಾನೆಗೆ ನೀಡಿರುವುದೂ ಗೊಂದಲಕ್ಕೆ ಕಾರಣವಾಗಿದೆ. ಇನ್ನು ಕ್ರೀಡಾ ಪ್ರಾಧಿಕಾರಕ್ಕೆ ಬೈಲಾ ಪ್ರಕಾರ ಕ್ರೀಡಾ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ನಿಯಮ ಇದ್ದರೂ ವಿಜಯಾನಂದ ಕಾಶಪ್ಪನವರ್ ಅವರನ್ನು ನೇಮಿಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಸ್ಥಾನಮಾನ ನಿರಾಕರಿಸಿದ ಶಾಸಕರುಕೆಲವು ಶಾಸಕರು ತಮಗೆ ಸಿಕ್ಕಿರುವ ಸ್ಥಾನಮಾನಗಳಿಗೆ ತೃಪ್ತಿಪಟ್ಟುಕೊಂಡು ಸಂತಸ ಹಂಚಿಕೊಂಡಿದ್ದರೆ, ಹಲವು ಶಾಸಕರು ತಮಗೆ ಕೊಟ್ಟಿರುವ ಸ್ಥಾನವನ್ನು ತಿರಸ್ಕರಿಸಿದ್ದಾರೆ. ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಅವರು, ರಾಯಚೂರು ಜಿಲ್ಲೆಗೆ ಪ್ರಾಶಸ್ತ್ಯವೇ ಸಿಕ್ಕಿಲ್ಲ. ನಾಲ್ವರು ಗೆದ್ದಿದ್ದೇವೆ. ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ ಎಂದು ಆಗ್ರಹಿಸಿದರಲ್ಲದೆ, ತಾನು ಹಾಗೂ ಬಾದರ್ಲಿ ನಿಗಮ, ಮಂಡಳಿ ಸ್ಥಾನವನ್ನು ಒಪ್ಪುವುದಿಲ್ಲ ಎಂದಿದ್ದಾರೆ.