ಚೆಕ್ ಡ್ಯಾಂ, ಬ್ಯಾರೇಜ್ ನಿರ್ಮಿಸದಂತೆಯೂ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ
ಗೋವಿಂದ ಕಾರಜೋಳ ಹೇಳಿದರು.
Advertisement
ತಾಲೂಕಿನ ಮುನಿರಾಬಾದ್‌ನ ನೀರಾವರಿ ಇಲಾಖೆ ಕಚೇರಿಯಲ್ಲಿ ಅಧಿ ಕಾರಿಗಳ ಸಭೆ ನಡೆಸಿ, ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
Related Articles
Advertisement
ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಮೊದಲು ಎಸ್‌ಸಿ, ಎಸ್‌ಟಿ ಸಮುದಾಯದ ಗಂಗಾ ಕಲ್ಯಾಣ ಇತರೆ ಯೋಜನೆಗೆ ಬಳಕೆಯಾಗಬೇಕು. ಬಳಿಕ ಅಚ್ಚುಕಟ್ಟು ಪ್ರದೇಶದಲ್ಲಿ ಮೊರಾರ್ಜಿ, ಚನ್ನಮ್ಮ ವಸತಿ ನಿಲಯ, ಅಂಗನವಾಡಿ ಸೇರಿ ಇತರೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಪ್ರತಿವರ್ಷ ಚರಂಡಿ, ಸಿಸಿ ರಸ್ತೆ ಕೈ ಬಿಡಬೇಕು. ಅನಗತ್ಯ ಖರ್ಚು ಮಾಡಬಾರದು. ನಾವು ಸರ್ಕಾರದ ಅನುದಾನ ಖರ್ಚು ಮಾಡುತ್ತಿದ್ದೇವೆ ಎನ್ನುವ ಬಗ್ಗೆಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು. ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಇನ್ಮುಂದೆ ಭೂ ಸ್ವಾಧೀನ ಮಾಡದೇ ಯೋಜನೆಯ ಕೆಲಸ
ಪ್ರಾರಂಭಿಸಬೇಡಿ. ಸ್ವಾಧೀನ ಮಾಡಿದ ಬಳಿಕ ಕಾಮಗಾರಿ ಆರಂಭಿಸಿ ಯಾರೋ ಒಬ್ಬ ರೈತ ಅಡೆತಡೆ ಮಾಡಿದರೆ ಯೋಜನೆಯೇ ವಿಳಂಬ
ಆಗುತ್ತದೆ. ಹಾಗಾಗಿ ಎಲ್ಲ ಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಅಲ್ಲದೇ, ಒಂದು ಬಾರಿ ಯೋಜನೆ ಮಾಡಿದ ಬಳಿಕ ಅದಕ್ಕೆ ಮತ್ತೆ ಪರಿಷ್ಕೃತ ಯೋಜನೆ ಸಿದ್ಧಪಡಿಸಬಾರದು. ಕ್ರಮಬದ್ಧವಾಗಿ ಯೋಜನೆ ಸಿದ್ಧಪಡಿಸುವಂತೆ ಅಧಿ ಕಾರಿಗಳಿಗೆ
ಸೂಚನೆ ನೀಡಿದ್ದೇನೆ. ಎಸ್‌ಸಿಪಿ, ಟಿಎಸ್‌ಪಿಗೆ ಕೋವಿಡ್‌ನಿಂದ ಸ್ವಲ್ಪ ಅನುದಾನ ಬಿಡುಗಡೆ ವಿಳಂಬವಾಗಿರಬಹುದು. ಆದರೆ 2018ರಿಂದ
ಬಂದಿಲ್ಲ ಎನ್ನುವುದನ್ನು ನಾವು ಒಪ್ಪಲ್ಲ. ಒಂದು ವೇಳೆ ಆ ರೀತಿಯಾಗಿದ್ದರೆ, ಅಧಿಕಾರಿಗಳ ಜೊತೆ ಚರ್ಚಿಸುವೆ. ಬಜೆಟ್‌ನಲ್ಲಿ ನಮಗೆ ಮೀಸಲಿಟ್ಟ
ಅನುದಾನದಲ್ಲಿ ಕೆಲಸ ಮಾಡಬೇಕಿದೆ ಎಂದರು. ರೈತರು ಹೂಳು ಬಳಸಲಿ: ಹಿರೇಹಳ್ಳ ಡ್ಯಾಂನಲ್ಲಿ ಹೂಳು ಸಂಗ್ರಹವಾದ ಕುರಿತು ಸಭೆಯಲ್ಲಿ ಚರ್ಚೆಯಾಗಿದ್ದು, ಆ ಹೂಳನ್ನು ರೈತರು
ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದೇವೆ. ಹಿರೇಹಳ್ಳದಿಂದ 20,500 ಎಕರೆಗೆ ನೀರು ಕೊಡಬೇಕು. ಆದರೆ ಕೊಡಲು ಆಗಿಲ್ಲ. ಕಾಲುವೆ ಕಾಮಗಾರಿ ಸಕಾಲಕ್ಕೆ ಆಗಿಲ್ಲ. ಆದರೆ ಹಳ್ಳದ ಪಾತ್ರದ ಸಮತಟ್ಟಾದ ಕೆರೆಗಳಿಗೆ ನೀರು ತುಂಬಿಸಲು ಹೇಳಿದ್ದೇನೆ. ಲಿಫ್ಟ್ ಮೂಲಕ ನೀರು ತುಂಬಿಸುವ ಯೋಜನೆ ಬೇಡವೆಂದು ಹೇಳಿದ್ದೇನೆ. ಉಳಿದ ವಿಚಾರ ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳಲಿದ್ದಾರೆ ಎಂದರು. ಸಿಂಗಟಾಲೂರು ನೀರಾವರಿ ಸುದೀರ್ಘ ಸಭೆ: ಸಿಂಗಟಾಲೂರು ಏತ ನೀರಾವರಿ ವಿಚಾರದ ಕುರಿತು ಸುದೀರ್ಘ ಚರ್ಚೆ ನಡೆಸಲು ಜನಪ್ರತಿನಿ ಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಅಲ್ಲಿ ಏನು ಸಮಸ್ಯೆಯಿದೆ? ಏನು ಅಡೆತಡೆಯಿದೆ? ಗುಣಮಟ್ಟದ ಬಗ್ಗೆ ತೊಂದರೆಯಿದೆಯೋ
ಎನ್ನುವ ಕುರಿತು ಚರ್ಚಿಸಲು ಅ ಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವು ಕಡೆ ಹನಿ ನೀರಾವರಿ, ಡ್ರಿಫ್ ಯೋಜನೆ ವಿಫಲವಾಗಿದೆ. ಇದರಿಂದ ರೈತರಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಅದರ ಬದಲು ರೈತರೊಂದಿಗೆ ಬೆರೆತು ಹೊಲದ ಕೃಷಿ ಹೊಂಡ, ಕೆರೆ, ಕಟ್ಟೆಗಳಿಗೆ ನೀರು ಹರಿಸಿದರೆ ಆತನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಲಿದ್ದಾನೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಕಾಡಾ ಅಧ್ಯಕ್ಷ ತಿಪ್ಪೆರುದ್ರ ಸ್ವಾಮಿ, ಸಂಸದರಾದ ಸಂಗಣ್ಣ ಕರಡಿ, ವೈ.
ದೇವೇಂದ್ರಪ್ಪ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ವೆಂಕಟರಾವ್ ನಾಡಗೌಡ, ಕೆಎನ್‌ಎನ್‌ಎಲ್ ಎಂಡಿ ಮಲ್ಲಿಕಾರ್ಜುನ ಗುಂಗೆ,
ಸಿಇ ಕೃಷ್ಣಾಜಿ ಚವ್ಹಾಣ, ವೃತ್ತ ಅಧಿಧೀಕ್ಷಕ ಬಸವರಾಜ ಸೇರಿ ವಿವಿಧ ಅ ಧಿಕಾರಿಗಳು ಉಪಸ್ಥಿತರಿದ್ದರು.