Advertisement
ಪರಿಸರದ ಸೌಂದರ್ಯ ಹೆಚ್ಚಿಸಲು, ಮಕ್ಕಳು ಆಡಿ ನಲಿಯಲು, ವೃದ್ಧರು, ಹೆಂಗಸರು ಹಾಗೂ ಸಾರ್ವಜನಿಕರು ವಾಯು ವಿಹಾರ ನಡೆಸಲು ಬಡಾವಣೆಗೆ ಒಂದಾದರೂ ಪಾರ್ಕ್ ಇರಬೇಕು ಎಂಬುದು ಬಹುತೇಕ ಎಲ್ಲರ ಬಯಕೆಯಾಗಿದೆ. ಇಡೀ ಪಟ್ಟಣದಲ್ಲಿ ಇಂದಿಗೂ ಒಂದೇ ಒಂದು ಉದ್ಯಾನವನ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.
Related Articles
ಸಲುಗಳು ಮಾಯವಾಗಿ, ಕಟ್ಟಡಗಳ ಅವಶೇಷಗಳ ಜೊತೆಗೆ ಇತರೆ ಒಂದಷ್ಟು ಪಳೆಯುಳಿಕೆಗಳು ಮಾತ್ರ ಕಾಣಸಿಗುತ್ತವೆ.
Advertisement
ಜನರಿಗೆ ಹೇಗಾದರೂ ಮಾಡಿ ಉದ್ಯಾನವನದ ಕೊರತೆ ನೀಗಿಸುವ ಪಣ ತೊಟ್ಟು, ಸುಸಜ್ಜಿತ ಉದ್ಯಾನವನದ ಕಲ್ಪನೆ ಹೊಂದಿದ್ದ ಉಪವಿಭಾಗಾಧಿಕಾರಿಯಾಗಿದ್ದ ಏಕ್‌ರೂಪ್ ಕೌರ್ ಇದಾದ ಒಂದೆರಡು ವರ್ಷದಲ್ಲಿಯೆ ವರ್ಗಾವಣೆಗೊಂಡರು. ಪುರಸಭೆ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮಮ್ಮ ಅಧಿಕಾರದಿಂದ ಕೆಳಗಿಳಿದ ನಂತರ ಕೆಲವೇ ವರ್ಷಗಳಲ್ಲಿ ದಿವಂಗತರಾದರು.
ನಂತರದ ದಿನಗಳಲ್ಲಿ ನಿರ್ವಹಣೆ ಜವಾಬ್ದಾರಿ ಹೊತ್ತ ಪುರಸಭೆ ಇತ್ತ ತಿರುಗಿ ನೋಡಲೆ ಇಲ್ಲ. ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲವೇನೋ ಎಂಬಂತೆ ಅಧಿಕಾರ ಹಿಡಿದ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರಿದರು. ಇದರ ಫಲವಾಗಿ ಉದ್ಯಾನವನ ಸಂಪೂರ್ಣ ಮಾಯವಾಗಿದೆ.
ಬಡಾವಣೆಗೊಂದು ಉದ್ಯಾನ ನಿರ್ಮಿಸಿ: ಬಡಾವಣೆಗೊಂದು ಉದ್ಯಾನವನ ನಿರ್ಮಿಸುವ ಜವಾಬ್ದಾರಿ ಹೊರಬೇಕಿರುವ ಪುರಸಭೆ, ಅಂದೂ ಕೂಡ ಇದಕ್ಕಾಗಿ ಬಿಡಿಗಾಸು ಖರ್ಚು ಮಾಡಿರಲಿಲ್ಲ. ಬೇಕಾದಷ್ಟು ನೀರಿನ ಸೌಕರ್ಯ, ಉತ್ತಮ ವಾತಾವರಣ, ಸುಂದರ ಪರಿಸರ ಆಯ್ಕೆ ಮಾಡಿಕೊಂಡು, ಪಟ್ಟಣದ ಉದ್ಯಾನ ವನದ ಕೊರತೆ ನೀಗಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಈ ಪಾರ್ಕನ್ನು ನಿರ್ವಹಣೆ ಮಾಡುವ ಕನಿಷ್ಠ ಹೊಣೆಯನ್ನು ಯಾರಾದರೂ ಹೊತ್ತಿದ್ದರೆ, ಜನರ ವಾಯುವಿಹಾರ, ಶಾಂತಿ ಹಾಗೂ ನೆಮ್ಮದಿಯ ತಾಣ ವಾಗುತ್ತಿದ್ದುದರಲ್ಲಿ ಯಾವುದೇ ಸಂಶಯವೂ ಇಲ್ಲ.
ಪುಂಡು ಪೋಕರಿಗಳ ತಾಣ: ಸಾರ್ವಜನಿಕರ ಹಣದ ನೆರನೊಂದಿಗೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಇದರ, ಇಂದಿನ ಸ್ಥಿತಿ ಕಂಡರೆ ಎಂತಹವರಿಗೂ ಅಯ್ಯೋ ಎನಿಸುತ್ತದೆ. ಇದೇ ರೀತಿ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಸಹ ಪಾರ್ಕ್‌ಗಾಗಿ ಮೀಸಲಿಟ್ಟಿ ರುವ ಜಾಗ ಪುಂಡಪೋಕರಿಗಳ ತಾಣವಾಗಿದೆ. ದೊಡ್ಡ ಕೆರೆಯನ್ನು ಪುರಸಭೆಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮಲ್ಲಿಕಾರ್ಜುನ ನಗರದಲ್ಲೂ ಸಹ ಪಾರ್ಕ್‌ಗಾಗಿ ಮೀಸಲಿಟ್ಟಿರುವ ಜಾಗವೊಂದು ಕಬಳಿ ಕೆಯಾಗಿರುವ ಆರೋಪಗಳಿದೆ. ಇದರಿಂದ ಮಕ್ಕಳಿಗೆ ಪಟ್ಟಣದಲ್ಲಿ ಉದ್ಯಾನವನವೇ ಇಲ್ಲದಂತಾಗಿದೆ.
ಲಯನ್ಸ್ ಸಂಸ್ಥೆ ಆಸಕ್ತಿ: ಲಯನ್ಸ್ ಸಂಸ್ಥೆಯವರು ಸುಮಾರು 10ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದು ಆದರೆ ಪುರಸಭೆಯವರು ಇವರಿಗೆ ನೀಡಲು ಪುರಸಭೆಯಲ್ಲಿ ಸದಸ್ಯರು ಅಧಿಕಾರ ಸ್ವೀಕರಿಸಿ ನಂತರ ಸಭೆಯಲ್ಲಿ ತೀರ್ಮಾನ ವಾಗಬೇಕೆಂದು ಹೇಳುತ್ತಿದ್ದಾರೆ. ಇದರಿಂದ ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಎಂಬಂತಾಗಿದೆ.
ಶಾಸಕರು ಸಹ ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಜೀವನದಿ ಹೇಮಾವತಿ ದಡದಲ್ಲಿ ಬೆಳೆದಿರುವ ಈ ಪಟ್ಟಣದ ಸುತ್ತಲೂ, ಹಸಿರು ವನಸಿರಿ, ಸುಂದರ ಬೆಟ್ಟ ಗುಡ್ಡ ಇಂತಹ ಪ್ರಕೃತಿ ಸೌಂದರ್ಯಕ್ಕೇನೂ ಕೊರತೆ ಇಲ್ಲ, ಇವೆಲ್ಲವನ್ನೂ ನೋಡಿ ಕಣ್ತುಂಬಿಸಿಕೊಳ್ಳಬಹುದು. ಆದರೆ ಪಟ್ಟಣದ ಜನರ ನೆಮ್ಮದಿಗೆ ಒಂದೇ ಒಂದು ಉದ್ಯಾನವನ ಇಲ್ಲದಿರುವುದು ದುರಂತವಾಗಿದೆ.
ಪುರಸಭೆ ಹಾಗೂ ಖಾಸಗಿ ಸಹಭಾಗಿತ್ವ ದಲ್ಲಿ ಶೇ.50ರ ಹಣ ವಿನಿಯೋಗ ಯೋಜನೆಯಲ್ಲಿ ಪಟ್ಟಣದ ಫಿಲ್ಟರ್ ಹೌಸ್ಜಾಗದಲ್ಲಿರುವ ಉದ್ಯಾನವನ್ನು ಅಭಿವೃದ್ಧಿ ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡೀಸಿ ಅನುಮೋದನೆ ನಂತರ ಉದ್ಯಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು.
ವಿಲ್ಸನ್, ಮುಖ್ಯಾಧಿಕಾರಿ ಸಕಲೇಶಪುರ ಪುರಸಭೆ ಪಟ್ಟಣದಲ್ಲಿ ಮಕ್ಕಳಿಗಾಗಿ ಯಾವುದೇ ಉದ್ಯಾನವನವಿಲ್ಲ. ಈ ನಿಟ್ಟಿನಲ್ಲಿ ಈ ಹಿಂದೆ ಉದ್ಯಾನವನವಿದ್ದ ಫಿಲ್ಟರ್ ಹೌಸ್
ಜಾಗದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಉದ್ಯಾನವನ್ನು ಪುನರ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಪುರಸಭೆಯವರು ಪಾರ್ಕ್ ಅಭಿವೃದ್ಧಿ ಪಡಿಸಲು ಜಾಗವನ್ನು ಹಸ್ತಾಂತರ ಮಾಡುತ್ತಿಲ್ಲ.
ಸಂಜೀತ್ ಶೆಟ್ಟಿ, ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಸುಧೀರ್ ಎಸ್.ಎಲ್.