ಗ್ರಾಪಂ ಸದಸ್ಯ ಜ್ಯೋತಿಪುರ ವೇಣು ಮಾತನಾಡಿ, ಗ್ರಾಪಂನಲ್ಲಿ ಅಕ್ರಮ ಖಾತೆಗಳು, ತೆರಿಗೆ ವಸೂಲಿ ಸೇರಿದಂತೆ ಕೋಟಿಗಟ್ಟಲೆ ಹಣಕ್ಕೆ ಲೆಕ್ಕ ಸಿಗದಂತೆ ಹಗರಣ ನಡೆದಿರುವ ಬಗ್ಗೆ ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ದೂರು ನೀಡಲಾಗಿತ್ತು ಎಂದರು.
Advertisement
ಈ ದೂರಿನ ಅನ್ವಯ ತನಿಖೆ ಮಾಡಿದ್ದು ಗ್ರಾಪಂನಲ್ಲಿ ಕರ್ತವ್ಯಲೋಪ, ಹಣ ದುರುಪಯೋಗ ಮತ್ತು ಆರ್ಥಿಕ ನಷ್ಟ ಉಂಟಾಗಿರುವುದು ಸಾಬೀತಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒಗೆ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ. ಆದರೂ ಸೂಕ್ತ ಕ್ರಮ ಕೈಗೊಳ್ಳದೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.