Advertisement

ನಿಯಮ ಪಾಲಿಸದ ವಾಹನ ಸವಾರರಿಂದ ಅನಾಹುತ

11:36 AM May 13, 2017 | |

ಬೆಂಗಳೂರು: “ನಮ್ಮಲ್ಲಿ ಸಂಚಾರ ನಿಯಮಗಳನ್ನು ವಾಹನ ಸವಾರರು ಪಾಲಿಸಲ್ಲ. ಹೀಗಾಗಿ ರಸ್ತೆ ಉಬ್ಬುಗಳು ಬೇಕು. ಆದರೆ, ಎಂಜಿನಿಯರ್‌ಗಳಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ. ಅವರು ನಿರ್ಮಿಸುವ ಅವೈಜ್ಞಾನಿಕ ರಸ್ತೆಗಳು ಅಪಘಾತಕ್ಕೆ ಎಡೆ ಮಾಡಿಕೊಡುತ್ತಿವೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದರು. 

Advertisement

ನಗರದ ಜ್ಞಾನಜ್ಯೋತಿ ಸಭಾಂಗಣ ದಲ್ಲಿ ಶುಕ್ರವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ “ನಿಧಾನವಾಗಿ ಚಲಿಸಿ- ಜೀವ ಉಳಿಸಿ’ ಕುರಿತ ಕಾರ್ಯಾಗಾರದಲ್ಲಿ ಮಾತನಾ ಡಿದ ಅವರು, “ಹೊರದೇಶಗಳಲ್ಲಿ ರಸ್ತೆ ಉಬ್ಬು ಗಳೇ ಇಲ್ಲ. ಬರೀ ಸೂಚನೆಗಳಿರು ತ್ತವೆ.

ಈ ಸೂಚನೆಗಳನ್ನು ಅಲ್ಲಿನ ಸವಾರರು ಕೂಡ ಪಾಲಿಸುತ್ತಾರೆ. ಆದರೆ, ನಮ್ಮಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದೇ ಇಲ್ಲ. ಆದ್ದರಿಂದ ರಸ್ತೆ ಉಬ್ಬುಗಳು ಅನಿ ವಾರ್ಯ ಆಗಿದೆ. ಆದರೆ, ಎಂಜಿನಿಯರ್‌ಗಳು ಎಲ್ಲೆಂದರಲ್ಲಿ ಹಂಪ್‌ ಹಾಕುತ್ತಿದ್ದಾರೆ. ಕಳಪೆ ಗುಣಮಟ್ಟದ ರಸ್ತೆಗಳು ಕೂಡ ಅಪಘಾತಗಳಿಗೆ ಕಾರಣವಾಗು ತ್ತವೆ,’ ಎಂದರು.  ವಿವಿ ಕುಲಪತಿ ಡಾ. ಕರಿಸಿದ್ದಪ್ಪ, ಕುಲ ಸಚಿವ ಡಾ.ಎಚ್‌.ಎನ್‌. ಜಗನ್ನಾಥ ರೆಡ್ಡಿ ಉಪಸ್ಥಿತರಿದ್ದರು. 

ಅನಿವಾರ್ಯತೆ ಆಧರಿಸಿ ವಾಹನ ಕೊಡ ಬೇಕು: ನಮ್ಮಲ್ಲಿ ರಸ್ತೆಗಳು ಕಿರಿದಾಗಿವೆ. ಈ ಮಧ್ಯೆ ನಿತ್ಯ 3 ಸಾವಿರ ವಾಹನ ಗಳು ರಸ್ತೆಗಿಳಿಯುತ್ತವೆ. ವಾಹನಗಳ ನೋಂದಣಿ ಯಿಂದ ಆದಾಯ ಬರುತ್ತದೆ ಎಂಬ ಕಾರ ಣಕ್ಕೆ ಸರ್ಕಾರವೂ ನೋಂದಣಿಗೆ ಅವಕಾಶ ಕೊಡುತ್ತಿದೆ. ವಿದೇಶಗಳಲ್ಲಿ ವ್ಯಕ್ತಿಯ ಅನಿ ವಾರ್ಯತೆ ಅವಲಂಬಿಸಿ ವಾಹನ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆ ನಮ್ಮಲ್ಲೂ ಬರಬೇಕು,’ ಎಂದು ಹೇಳಿದರು. 

ದುಬೈನಲ್ಲಿ ಚಾಲನಾ ಪರವಾನಗಿ ಪಡೆಯಬೇಕಾದರೆ ಅಧಿಕಾರಿಗಳು ಹೇಳಿದ ಕಡೆ ಕನಿಷ್ಠ 3 ತಿಂಗಳು ವಾಹನ ಚಾಲನೆ ಮಾಡಬೇಕು. ಆದರೆ, ನಮ್ಮಲ್ಲಿ ಒಂದು ಸುತ್ತು ಹೋಗಿಬಂದರೆ ಸಾಕು, ಪರವಾನಗಿ ಸಿಗುತ್ತದೆ. ಚಾಲನಾ ಪರವಾನಗಿ ಕೊಡುವಾಗ ಸರ್ಕಾರ ಕಠಿಣ ನಿಯಮ ಪಾಲಿಸಬೇಕು ಎಂದರು.

Advertisement

ಅಪಘಾತದ ಸಾವುಗಳಲ್ಲಿ ರಾಜ್ಯಕ್ಕೆ 2ನೇ ಸ್ಥಾನ 
ದೇಶದಲ್ಲಿ ಪ್ರತಿ ವರ್ಷ ಒಂದೂವರೆ ಲಕ್ಷ ಜನ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ 18ರಿಂದ 34 ವರ್ಷದ ಒಳಗಿನವರು ಶೇ. 54ರಷ್ಟು ಮಂದಿ ಇದ್ದಾರೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಸಂಭವಿಸುವ ಒಟ್ಟಾರೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ, ಅತಿ ಹೆಚ್ಚು ರಸ್ತೆ ಅಪಘಾತಗಳೂ ರಾಜ್ಯದಲ್ಲಿ ಸಂಭವಿಸುತ್ತಿದ್ದು, ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ 1.60 ಕೋಟಿ ವಾಹನಗಳಿದ್ದು, ಈ ಪೈಕಿ 70 ಲಕ್ಷ ವಾಹನಗಳು ಬೆಂಗಳೂರಿನಲ್ಲೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next