Advertisement

ಜನಪ್ರತಿನಿಧಿಗಳಿಂದ ದಲಿತರ ಕಡೆಗಣನೆ; ಮುನಿಯಪ್ಪ

06:14 PM May 03, 2022 | Team Udayavani |

ಕೋಲಾರ: ಮೀಸಲಾತಿಯಿಂದ ಬಂದಿರುವ ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಅಧಿಕಾರ ವನ್ನು ದುರುಪಯೋಗಪಡಿಸಿಕೊಂಡು ಜನಾಂಗದ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲ ಎಂದು ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ವಿಷಾದಿಸಿದರು.

Advertisement

ತಾಲೂಕಿನ ತೊರದೇವಂಡಹಳ್ಳಿಯಲ್ಲಿ ಮಹಾ ನಾಯಕ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಂರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸದ ಮುನಿಸ್ವಾಮಿ ಅಂಬೇಡ್ಕರ್‌ ನೀಡಿದ ಮೀಸಲಾತಿ ಭಿಕ್ಷೆಯಿಂದ ಸಂಸದರಾಗಿದ್ದರೂ, ಕನಿಷ್ಟ ಅಂಬೇಡ್ಕರ್‌ ಜಯಂತಿಯಂದು ಅಂಬೇಡ್ಕರ್‌ ಸಾಧನೆ ಮತ್ತು ಕೊಡುಗೆ ಬಗ್ಗೆ ಏನನ್ನು ಮಾತನಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 14 ರಂದು ಸರ್ಕಾರವು ಜಿಲ್ಲಾಡಳಿತವು ನಡೆಸಿದ ವಿಜೃಂಭಣೆಯ ಕಾರ್ಯಕ್ರಮಕ್ಕಿಂತ ಇಂದು ತೊರದೇವಂಡಹಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದ ಅವರು ಇಡೀ ಊರಿನ ಹಾಗೂ ಆಯೋಜಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಮಾಜ ಸೇನೆಯ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್‌ ಮಾತನಾಡಿ, ಅಂಬೇಡ್ಕರ್‌ ಪ್ರತಿ ದಲಿತ ಮನೆಗಳಿಗೆ ತಲುಪಿದ್ದಾರೆ, ಆದರೆ ದುರದೃಷ್ಟ ಎಂದರೆ ಅವರ ಮನಗಳಲ್ಲಿ ತಲುಪಿಲ್ಲ. ಅಂಬೇಡ್ಕರ್‌ ವಿಚಾರಧಾರೆಗಳನ್ನು ಸಿದ್ಧಾಂತಗಳನ್ನು ಪ್ರತಿಯೊಬ್ಬ ದಲಿತರೂ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ಗೌರವ ಸಮರ್ಪಣೆ ಮಾಡಿ ದಂತಾಗುತ್ತದೆ ಎಂದರು.

ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ವೆಂಕಟಾಚಲಗೌಡ, ನಗರಸಭಾ ಸದಸ್ಯ ಅಂಬರೀಶ್‌, ಎಸ್‌ಎಫ್‌ಐ, ಅಂಬರೀಶ್‌, ಕುಪ್ಪನಹಳ್ಳಿ ಭೈರಪ್ಪ, ಮಾಜಿ ಗ್ರಾಪಂ ಸದಸ್ಯ ಮುನಿವೆಂಕಟಪ್ಪ, ಕಾಂಗ್ರೆಸ್‌ ಮುಖಂಡ ನಾಗರಾಜಗೌಡ, ಅಂಬೇಡ್ಕರ್‌ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್‌, ಗ್ರಾಪಂ ಸದಸ್ಯೆ ಗಾಯತ್ರಿ ಪ್ರಭಾಕರ್‌ ಮತ್ತಿತರರು ಹಾಜರಿದ್ದರು.

Advertisement

ಅಂಬೇಡ್ಕರ್‌ರನ್ನು ಬೆಳ್ಳಿರಥಗಳಲ್ಲಿ ಪಲ್ಲಕ್ಕಿಗಳಲ್ಲಿ ಮೆರವಣಿಗೆ ಮಾಡುವುದರಿಂದ ಅಂಬೇಡ್ಕರ್‌ರವರಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ. ಅವರು ಎಂದಿಗೂ ಆಡಂಬರದ ಜೀವನವನ್ನು ಅಪೇಕ್ಷೆ ಪಟ್ಟಿರಲಿಲ್ಲ. ಅಂಬೇಡ್ಕರ್‌ ವ್ಯಕ್ತಿ ಪೂಜೆಯನ್ನು ಬಯಸಿರಲಿಲ್ಲ. ಅವರು ಏನು ಹೇಳಿದ್ದಾರೆ ಅದನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕಿದೆ.
●ಸಿ.ಎಂ.ಮುನಿಯಪ್ಪ, ಹಿರಿಯ ದಲಿತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next