Advertisement

ಬಾಹ್ಯಾಕಾಶ ಕಸ ವಿಲೇವಾರಿ

11:56 PM Nov 21, 2021 | Team Udayavani |

ಕಳೆದ ಸೋಮವಾರವಷ್ಟೇ ರಷ್ಯಾ ತನ್ನದೇ ಒಂದು ಉಪಗ್ರಹವನ್ನು ಸ್ಫೋಟಿಸಿದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿದ್ದವರಿಗೆ ಅಪಾಯಗಳುಂಟಾಗಬಹುದು ಎಂಬ ಆತಂಕವೂ ಮನೆ ಮಾಡಿತ್ತು. ಅಲ್ಲದೇ ರಷ್ಯಾದ ಈ ಕ್ರಮಕ್ಕೆ ಜಾಗತಿಕವಾಗಿ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ. ಮುಂದೊಂದು ದಿನ ಅಂತರಿಕ್ಷದಲ್ಲಿರುವ ಕಸವು ಬಾಹ್ಯಾಕಾಶ ಚಟುವಟಿಕೆಗಳಿಗೆ ಭಾರೀ ಅಪಾಯ ತಂದೊಡ್ಡಬಹುದು ಎಂದು ತಜ್ಞರು ಹೇಳಿದ್ದಾರೆ.

Advertisement

ಬಾಹ್ಯಾಕಾಶ ಕಸವೆಂದರೇನು?
ಭೂಮಿಯ ನೂರಾರು ಮೈಲಿ ಮೇಲೆ ನಾವೇ ಉಡಾವಣೆ ಮಾಡಿದ ರಾಕೆಟ್‌ಗಳು, ಉಪಗ್ರಹಗಳಿಂದ ಬೇರ್ಪಟ್ಟ ಅನುಪಯುಕ್ತ ವಸ್ತುಗಳೇ ಬಾಹ್ಯಾಕಾಶ ಕಸಗಳು. ಇದಷ್ಟೇ ಅಲ್ಲ, ಕ್ಷಿಪಣಿ ಪರೀಕ್ಷೆ ನಡೆಸುವಾಗ, ಒಂದು ಕ್ಷಿಪಣಿಯನ್ನು ಆಗಸಕ್ಕೆ ಚಿಮ್ಮಿಸಿ, ಮತ್ತೂಂದು ಕ್ಷಿಪಣಿಯಿಂದ ಅದನ್ನು ಹೊಡೆದುರುಳಿಸಲಾಗುತ್ತದೆ. ಆಗಲೂ ಇದರಿಂದ ಹೊರಬಂದ ವಸ್ತುಗಳೂ ಬಾಹ್ಯಾಕಾಶ ಕಸಗಳಾಗುತ್ತವೆ. ಸದ್ಯ ಇಂಥ ಪರೀಕ್ಷೆ ನಡೆಸುತ್ತಿರುವ ದೇಶಗಳೆಂದರೆ, ಅಮೆರಿಕ, ಚೀನ, ರಷ್ಯಾ ಮತ್ತು ಭಾರತ.

ಕಸದಿಂದ ಅಪಾಯವೇ?
ಹೌದು, ಭೂಮಿಯ ಸುತ್ತ ಈ ಕಸದ ರೂಪದಲ್ಲಿನ ವಸ್ತುಗಳು ಗಂಟೆಗೆ 15,700 ಮೈಲಿ ವೇಗದಲ್ಲಿ ಸುತ್ತುತ್ತಿರುತ್ತವೆ. ಇವುಗಳಿಂದ ನಾವೇ ಹಾರಿಬಿಡುವ ಉಪಗ್ರಹಗಳಿಗೆ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಗೆ ಅಪಾಯವುಂಟಾಗಬಹುದು ಎಂಬುದು ವಿಜ್ಞಾನಿಗಳ ಆತಂಕ.

ಇದನ್ನೂ ಓದಿ:ಭಾರತದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆಯ ಅವಶ್ಯಕತೆಯಿಲ್ಲ : ಐಸಿಎಂಆರ್‌

ಕಸದ ಗಾತ್ರ ಎಷ್ಟು?
ಅಮೆರಿಕ ಗುರುತಿಸಿರುವ ಪ್ರಕಾರ, ಒಂದು ಸಾಫ್ಟ್ಬಾಲ್‌ಗಿಂತ ದಪ್ಪ ಇರುವ 23 ಸಾವಿರ ಡೆಬ್ರಿಗಳು ಭೂಮಿ ಸುತ್ತ ತಿರುಗುತ್ತಿವೆ. ಹಾಗೆಯೇ ಒಂದು ಸೆ.ಮೀ.ಗಿಂತ ಹೆಚ್ಚು ಗಾತ್ರವಿರುವ 5 ಲಕ್ಷ ಮತ್ತು ಒಂದು ಮಿಲಿಮೀಟರ್‌ ಅಥವಾ ಇದಕ್ಕಿಂತ ಒಂಚೂರು ದಪ್ಪ ಇರುವ ಒಂದು ಕೋಟಿ ಕಸಗಳು ಬಾಹ್ಯಾಕಾಶದಲ್ಲಿವೆ. ಒಟ್ಟಾರೆ ಹೇಳುವುದಾದರೆ 9,600 ಟನ್‌ ತೂಕದ ಡೆಬ್ರಿಗಳಿವೆ ಎಂದು ಅಂದಾಜಿಸಲಾಗಿದೆ.

Advertisement

ರಷ್ಯಾ ಪರೀಕ್ಷೆಯಿಂದ ಆದ ಪರಿಣಾಮವೇನು?
ರಷ್ಯಾ ಸೋಮವಾರ ಕಾಸ್ಮೋಸ್‌ 1408 ಎಂಬ 2,000 ಕೆ.ಜಿ. ತೂಕದ ಉಪಗ್ರಹವನ್ನು ಸ್ಫೋಟಿಸಿತು. ಇದರಿಂದ ಸುಮಾರು 1,500 ಡೆಬ್ರಿಗಳು ಸೃಷ್ಟಿಯಾಗಿವೆ ಎಂದು ಹೇಳಲಾಗುತ್ತಿದೆ. ಇದು ಕಣ್ಣಿಗೆ ಕಾಣುವ ಕಸದಂತಿದ್ದರೆ, ಕಣ್ಣಿಗೆ ಕಾಣಿಸದ ಲಕ್ಷಾಂತರ ತುಂಡುಗಳು ಸೃಷ್ಟಿಯಾಗಿವೆ ಎಂದು ಹೇಳಲಾಗಿದೆ.

ಇವುಗಳನ್ನು ನಾಶ ಮಾಡಬಹುದೇ?
ಭೂಮಿಯ ಮೇಲ್ಮೈಯ 600 ಕಿ.ಮೀ.ಗಿಂತ ಕೆಳಗೆ ಇರುವ ವಸ್ತುಗಳು ಭೂಮಿಯೊಳಗೆ ತಾವಾಗಿಯೇ ಬೀಳುತ್ತವೆ. ಆದರೆ ಮೇಲ್ಮೆ„ಯ 1 ಸಾವಿರ ಕಿ.ಮೀ.ಗಿಂತ  ಮೇಲಿರುವ ಡೆಬ್ರಿಗಳನ್ನು ನಾಶ ಮಾಡುವುದು ಕಷ್ಟ.

Advertisement

Udayavani is now on Telegram. Click here to join our channel and stay updated with the latest news.

Next