Advertisement
ಮೂರು ಕೇಂದ್ರಗಳುಆ. 17ರಂದು ಜೋಡುಪಾಲ ಪರಿಸರದಲ್ಲಿ ಸಂಭವಿಸಿದ ಭೀಕರ ಪ್ರಾಕೃತಿಕ ವಿಕೋಪ ದಿಂದ ದಿಕ್ಕೆಟ್ಟ 300ಕ್ಕೂ ಅಧಿಕ ಕುಟುಂಬಗಳಿಗೆ ತತ್‌ಕ್ಷಣಕ್ಕೆ ಆಸರೆ ಒದಗಿಸಿದ್ದು ದ.ಕ. ಗಡಿ ಭಾಗದ ಮೂರು ಪರಿಹಾರ ಕೇಂದ್ರಗಳು. ಅರಂತೋಡು ತೆಕ್ಕಿಲ ಸಭಾಭವನ, ಕೊಡಗು ಸಂಪಾಜೆ ಶಾಲೆ ಕಟ್ಟಡ, ಕಲ್ಲುಗುಂಡಿ ಶಾಲೆ ಕಟ್ಟಡದಲ್ಲಿ ವಸತಿ, ದಾನಿಗಳ ನೆರವಿನಿಂದ ಊಟ ಉಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂತ್ರಸ್ತರಿಗೆ ಸ್ಪಂದನೆ ರೂಪದಲ್ಲಿ ನೆರವಿನ ಮಹಾಪೂರವೇ ಹರಿದು ಬಂದಿತ್ತು.
ಜೋಡುಪಾಲ, ಮೊಣ್ಣಂಗೇರಿ, ಮದೆನಾಡು ಸಂತ್ರಸ್ತರು ಆರಂಭದಲ್ಲಿ ಕೊಯನಾಡು, ಮದೆನಾಡು ಶಾಲಾ ಕೇಂದ್ರಕ್ಕೆ ಸೇರಿದ್ದರು. ಅಲ್ಲಿ ಪರಿಸ್ಥಿತಿ ಕಠಿನವೆನಿಸಿ ಅರಂತೋಡು ಖಾಸಗಿ ಸಭಾ ಭವನ, ಕಲ್ಲುಗುಂಡಿ ಶಾಲೆ, ಸಂಪಾಜೆ ಶಾಲೆಗೆ ಸ್ಥಳಾಂತರಿಸಲಾಯಿತು. ಈಗ 12 ದಿನ ಕಳೆದಿದೆ. ಅರಂತೋಡು, ಕೊಡಗು ಸಂಪಾಜೆ ಕೇಂದ್ರದ ಕುಟುಂಬಗಳನ್ನು ಹೊಸ ಇನ್ನೊಂದು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಉಳಿದಿರುವ ಸಂತ್ರಸ್ತರು ಆಗಲೇ 3ರಿಂದ 4 ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಮನೆಗೆ ಮರಳಿಲ್ಲ
ಮೂರು ಕೇಂದ್ರಗಳಲ್ಲಿ 200ಕ್ಕೂ ಅಧಿಕ ಕುಟುಂಬಗಳು ಉಳಿದುಕೊಂಡರೆ, ಅಷ್ಟೇ ಸಂಖ್ಯೆಯ ಕುಟುಂಬಗಳು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿವೆ. ಪ್ರಾಕೃತಿಕ ವಿಕೋಪ ತಹಬದಿಗೆ ಬಂದು ದೇವರಕೊಲ್ಲಿ, ಅರೆಕ್ಕಳ, ಸಂಪಾಜೆ ಪರಿಸರದ ನಿವಾಸಿಗಳು ಮನೆಗೆ ಮರಳಿದ್ದಾರೆ. ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಪರಿಸರದಲ್ಲಿ ವಾತಾವರಣ ದಿನೇ-ದಿನೇ ಬಿಗಡಾಯಿಸುತ್ತಿರುವ ಕಾರಣ ಪರಿಹಾರ ಕೇಂದ್ರ ತೊರೆದಿಲ್ಲ.
Related Articles
ಮದೆನಾಡು ಕೇಂದ್ರದಲ್ಲಿದ್ದೆ. ಅಲ್ಲಿಂದ ಸಂಪಾಜೆ ಕೇಂದ್ರಕ್ಕೆ ಸೇರಿದ್ದೆ. ಈಗ ಮತ್ತೆ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರವಾಗಿದೆ. ಮದೆನಾಡಿನಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಹಾಗಾಗಿ ಪರಿಹಾರ ಕೇಂದ್ರದಲ್ಲಿ ಇನ್ನೆಷ್ಟೂ ದಿನ ಇರಬೇಕು ಏನು.
– ರತ್ನಾಕರ ಮದನಾಡು, ಸಂತ್ರಸ್ತ
Advertisement
ಕಿರಣ್ ಪ್ರಸಾದ್ ಕುಂಡಡ್ಕ