Advertisement
ಅತಿವೃಷ್ಟಿ ಹಾನಿ ಪರಿಹಾರ ಕಾರ್ಯದ ಕುರಿತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಮಳೆಹಾನಿ ಪರಿಹಾರವಾಗಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ ಮತ್ತು ಬಿಡುಗಡೆಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಷ್ಟೆ. ಆದರೆ, ಇಲ್ಲಿಯವರೆಗೆ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕಿಲ್ಲ. ಅಲ್ಲದೆ, ಭೂಮಿ ಕಳೆದುಕೊಂಡ ರೈತರು ಮತ್ತು ಬೆಳೆಗಾರರಿಗೆ ಭೂಮಿಯ ಮೌಲ್ಯಕ್ಕೆ ಸಮಾನವಾದ ಸೂಕ್ತ ಪರಿಹಾರ ದೊರಕಿಸಿಕೊಡುವ ಕುರಿತು ಅಧಿಕಾರಿಗಳ ಬಳಿ ಸ್ಪಷ್ಟ ನಿಲುವುಗಳಿಲ್ಲವೆಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ಶಿವು ಮಾದಪ್ಪ ಮಾತನಾಡಿ, ಕೇವಲ ಮನೆಗಳನ್ನು ಕಟ್ಟಿಸಿಕೊಟ್ಟರೆ ಸಾಕೇ, ಗದ್ದೆ, ತೋಟ ಕಳೆದುಕೊಂಡ ರೈತರು ಬದುಕು ಸಾಗಿಸುವುದಾದರು ಹೇಗೆ ಎಂದು ಪ್ರಶ್ನಿಸಿದರು. ಕೃಷಿ ಮಾಡಲು ಮನೆಯೊಂದಿಗೆ ಭೂಮಿಯನ್ನು ಕೂಡ ನೀಡಬೇಕೆಂದರು.
Related Articles
ಉಪ ವಿಭಾಗಾಧಿಕಾರಿ ಜವರೇಗೌಡ ಸಭೆಗೆ ಪರಿಹಾರ ಚ ಕುರಿತು ವಿವರಿಸಿದರು. ಮಡಿಕೇರಿ ತಾಲೂಕಿನಲ್ಲಿ 14, ಸೋಮವಾರಪೇಟೆಯಲ್ಲಿ 2 ಹಾಗೂ ವೀರಾಜಪೇಟೆಯಲ್ಲಿ 4 ಮಾನವ ಜೀವಹಾನಿಯಾಗಿದ್ದು, ಕುಟುಂಬಗಳಿಗೆ ತಲಾ 5 ಲಕ್ಷದಂತೆ ಪರಿಹಾರ ಧನ ವಿತರಿಸಲಾಗಿದೆ. ಎನ್‌ಡಿಆರ್‌ಎಫ್ನಿಂದ 4 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ರೂ.ಗಳಂತೆ ಮಾನವ ಜೀವಹಾನಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲಾ ವ್ಯಾಪಿ ಒಟ್ಟು 268 ಜಾನುವಾರುಗಳು ಮರಣವನ್ನಪ್ಪಿದ್ದು, ಇವುಗಳಿಗೂ ಪರಿಹಾರ ವಿತರಿಸಲಾಗಿದೆ. 415 ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳಂತೆ ಮನೆಬಾಡಿಗೆಯನ್ನು ನೀಡಲಾಗುತ್ತಿದೆ. ಮೊದಲ ಹಂತ ದಲ್ಲಿ 427 ಮನೆನಿರ್ಮಿಸಿ ಹಸ್ತಾಂತರಿಸುವ ಗುರಿ ಹೊಂದಲಾ ಗಿದೆ ಎಂದು ಮಾಹಿತಿ ನಿಡಿದರು.
Advertisement