Advertisement

ಈರುಳ್ಳಿಗೆ ಮಜ್ಜಿಗೆ ರೋಗ ಬಾಧೆ: ಕಂಗಾಲಾದ ರೈತ

08:33 PM Aug 29, 2020 | Suhan S |

ಬೀರೂರು: ಸತತ 15 ದಿನಗಳಿಂದ ಮಳೆಯಿಲ್ಲದ ಕಾರಣ ಬೀರೂರು ಹೋಬಳಿ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗಿದೆ. ಇತ್ತೀಚೆಗೆ ಸುರಿದ ಮುಂಜಾನೆಯ ಕವಳ ಈರುಳ್ಳಿ ಬೆಳೆಗೆ ಮಜ್ಜಿಗೆ ರೋಗವನ್ನು ತಂದೊಡ್ಡಿದೆ. ಪಟ್ಟಣದ ಸಮೀಪದ ಎರೆ ಬಯಲಿನಲ್ಲಿ ಈ ರೋಗ ಕಂಡುಬಂದಿದ್ದು, ಬೆಳೆಯ ತೊಂಡೆ ಮುರಿದು ಬೀಳುತ್ತಿದೆ.

Advertisement

ತೊಂಡೆಗಳ ಮಧ್ಯ ಭಾಗದಲ್ಲಿ ಹುಳುಗಳು ಗೂಡು ಮಾಡಿಕೊಂಡಿದ್ದು, ಅವು ಗಡ್ಡೆಗಳ ಬೆಳೆವಣಿಗೆಯಲ್ಲಿ ಕುಂಠಿತ ಮಾಡುತ್ತಿವೆ ಹಾಗೂ ಇಳುವರಿ ಕೂಡ ಕಡಿಮೆಯಾಗುವ ಸಾಧ್ಯತೆಗಳಿವೆ.ರೈತ ಗಿರೀಶ್‌ ಈ ಬಗ್ಗೆ ಮಾತನಾಡಿ, ಪ್ರತಿ ವರ್ಷವೂ ಈ ರೋಗಗಳು ಈರುಳ್ಳಿ ಬೆಳೆಗೆ ಅಂಟುತ್ತಿರುತ್ತವೆ. ಉತ್ತರೆ ಮಳೆಯ ಸಂದರ್ಭದಲ್ಲಿ ಬೆಳೆಗೆ ಕವಳ ಆವರಿಸಿದಾಗ ಈ ಮಜ್ಜಿಗೆ ರೋಗ ಹರಡುತ್ತದೆ. ಕವಳ ಆವರಿಸಿದ ಕೆಲವೇ ಗಂಟೆಗಳಲ್ಲಿ ಈ ರೋಗ ತಗಲುತ್ತದೆ. ಈ ರೋಗಕ್ಕೆ 2 ರಿಂದ 3 ಸಾವಿರ ವೆಚ್ಚದ ಕೀಟ ನಾಶಕಗಳಾದ ರೆಡ್‌ಎಂಎಲ್‌, ಬ್ಲೂಕೊಪ್‌, ಕ್ರಕ್ಸ್‌, ಕರಾಟೆ ಎನ್ನುವ ವಿವಿಧ ಔಷಧಗಳ ಸಿಂಪಡಣೆಯಿಂದ ರೋಗ ನಿವಾರಣೆಯಾಗಿ ಗಡ್ಡೆಗಳ ಬೆಳವಣಿಗೆ ಆಗುತ್ತದೆ. ಹಾಗೂ ಕೀಟನಾಶಕಗಳ ನಾಶಕ್ಕೆ ಕರಾಟೆ, ಕ್ವಾರೆಜಿನ್‌ ಔಷಧಗಳನ್ನು ಸಿಂಪಡಿಸಿದ್ದೇವೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ತೋಟಗಾರಿಕಾ ಅಧಿಕಾರಿ ರಶೀದ್‌ ಮಾತನಾಡಿ, ಈರುಳ್ಳಿ ಬೆಳೆಗೆ ಅಂಟಿರುವ ರೋಗದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ರೈತರು ಈ ಬಗ್ಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next