Advertisement

ಎಸ್‌ಟಿ ಸೇರ್ಪಡೆ ಸಂಬಂಧ ಕೇಂದ್ರದ ಜತೆ ಚರ್ಚೆ: ಮಾಧುಸ್ವಾಮಿ ಭರವಸೆ

10:13 PM Feb 14, 2023 | Team Udayavani |

ವಿಧಾನಸಭೆ: ಕುಣಬಿ, ಹಾಲಕ್ಕಿ, ಗೌಳಿ, ಕಾಡುಗೊಲ್ಲ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಸಂಬಂಧ ಕೇಂದ್ರ ಸರ್ಕಾರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.

Advertisement

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಕುಣಬಿ ಸಮುದಾಯವನ್ನು ಬುಡಕಟ್ಟು ಸಮುದಾಯಕ್ಕೆ ಸೇರ್ಪಡೆ ಎರಡು ಬಾರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ ವಾಪಸ್‌ ಬಂದ ಕಾರಣ ಮೈಸೂರಿನ ಬುಡಕಟ್ಟುಸಂಶೋಧನಾ ಸಂಸ್ಥೆಯಿಂದ ಮತ್ತೂಂದು ವರದಿ ಪಡೆದು ಕಳೆದ ಜೂ.30ರಂದು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

“ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಪ್ರಯತ್ನ 2009ರಿಂದ ನಡೆಯುತ್ತಿದೆ. ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಬೇಡಿಕೆ ಇದೆ. ಗೌಳಿ ಸಮುದಾಯದವರು ಬುಡಕಟ್ಟು ಜನರೇ ಆಗಿದ್ದಾರೆ. ಆ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವಿರದಿದ್ದರೆ ಪಡೆಯಲಾಗುವುದು ಎಂದು ತಿಳಿಸಿದರು.

ಬಿಜೆಪಿಯ ರೂಪಾಲಿ ನಾಯಕ್‌, ಪೂರಕ ಮಾಹಿತಿ, ಆಧಾರ ಒಳಗೊಂಡ ಪ್ರಸ್ತಾವವನ್ನು ರಾಜ್ಯ ಸರ್ಕಾರದಿಂದಲೇ ಕೇಂದ್ರಕ್ಕೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪೀಕರ್‌ ಧ್ವನಿಗೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next