Advertisement

ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಸುನೀಲ್ ಸುಳಿವು

01:01 PM Jul 21, 2022 | Team Udayavani |

ಬೆಂಗಳೂರು: ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ತುಂಬುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ.

Advertisement

ಲೋಕಾಯುಕ್ತಕ್ಕೆ ಪವರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸುನೀಲ್ ಕುಮಾರ್, ನಾಳೆ ಸಚಿವ ಸಂಪುಟ ಸಭೆಯಲ್ಲಿ ಉಳಿದ ವಿಚಾರ ಚರ್ಚೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಎಲ್ಲ ವಿಚಾರಗಳ ಬಗ್ಗೆ ಕಾಲಕಾಲಕ್ಕೆ ಪಕ್ಷ ತೀರ್ಮಾನ ಮಾಡುತ್ತದೆ. ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ಆಂತರಿಕ ವಿಚಾರ. ಬಿಜೆಪಿ ಒಂದು ಜಾತಿ ಸಮುದಾಯ ವ್ಯಕ್ತಿಗೆ ಕುಟುಂಬಕ್ಕೆ ಸೀಮಿತವಾದ ಪಾರ್ಟಿ ಅಲ್ಲ ಎಂದು ಅಭಿಪ್ರಾಯಪಟ್ಟರು.

ಸೋನಿಯಾ, ರಾಹುಲ್ ಗಾಂಧಿ ಇಡಿ ವಿಚಾರಣೆಗೆ ವಿರೋಧ ವ್ಯಕ್ತಪಡಿಸುತ್ತಾ ಇರುವವರು ಈ ಹಿಂದೆ ಒಂದೆಲ್ಲಾ ಒಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು. ಕಾಂಗ್ರೆಸ್ ದೇಶದ ಕ್ಷಮೆ ಕೇಳಬೇಕು. ಕಾನೂನಿಗೆ ಗೌರವ ಕೊಡಲ್ಲ ಎಂದರೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು. ಕಾನೂನಿಗೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿತ್ತು ಎಂದು ಟೀಕಿಸಿದರು.

ಇದನ್ನೂ ಓದಿ:ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪ್ ಗೆ ಅಧಿಕಾರ: ಭಾಸ್ಕರ ರಾವ್

Advertisement

ಕಾಂಗ್ರೆಸ್ ಇಷ್ಟು ವರ್ಷ ದೇಶದ ಜನರಿಗೆ ಕಿರುಕುಳ ನೀಡಿದೆ. ಭ್ರಷ್ಟಾಚಾರದ ಮಾಡಿದ್ದು ಕಾಂಗ್ರೆಸ್ ಮೋದಿ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಇಲ್ಲ. ತಪ್ಪು ಮಾಡಿಲ್ಲ ಅಂದರೆ ಭಯ ಯಾಕೆ? ಈ ಹಿಂದೆ ತಪ್ಪು ಮಾಡಿದವರು ಈಗ ತನಿಖೆ ಎದುರಿಸಲು ಸಹಜವಾಗಿ ಭಯ ಪಡುತ್ತಾರೆ. ತಪ್ಪು ಮಾಡಿಲ್ಲವೆಂದರೆ ಭಯ ಪಡುವುದು ಯಾಕೆ. ತನಿಖೆ ಎದುರಿಸಲಿ ಎಂದರು.

ಭಾರತವನ್ನು ಮುರಿದಿದ್ದೆ ಕಾಂಗ್ರೆಸ್. ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿದೆ. ಭಾರತ ಒಡೆಯುವ ಕೆಲಸ ಸ್ವಾತಂತ್ರ್ಯ ಪೂರ್ವದಲ್ಲೂ ಮಾಡಿದೆ. ಅಸ್ಸಾಂ ವಿಚಾರದಲ್ಲಿ ದೇಶ ಮುರಿದಿದ್ದು ಕಾಂಗ್ರೆಸ್. ಈಗ ಯಾಕೆ ಭಾರತ್ ಜೋಡೊ ಕಾರ್ಯಕ್ರಮ ಮಾಡುತ್ತಾರೆ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next